ವಿಭಿನ್ನವಾಗಿ ‘ಶಿಕ್ಷಕರ ದಿನ’ ಆಚರಿಸಿದ ಆರ್ಕಿಡ್ಸ್ ಇಂಟರ್ನ್ಯಾಷನಲ್ ಸ್ಕೂಲ್

ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಪಾಪ್ ಸಂಸ್ಕೃತಿಯ ಬಗ್ಗೆ ಶಿಕ್ಷಕರಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳು ಕೇಳುವ ಮೋಜಿನ ರಸಪ್ರಶ್ನೆಗಳಿಗೆ ಸಂತೋಷದಿಂದ ಉತ್ತರವನ್ನು ನೀಡಿದ್ದರು.

Written by - Zee Kannada News Desk | Edited by - Bhavishya Shetty | Last Updated : Sep 6, 2022, 10:57 AM IST
    • ಆರ್ಕಿಡ್ಸ್-ದಿ ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನ ಆಚರಣೆ
    • ವಿದ್ಯಾರ್ಥಿಗಳು ಶಿಕ್ಷಕರಾಗಿ, ಅವರ ಪ್ರೀತಿಯ ಶಿಕ್ಷಕರಿಗೆ ತರಗತಿಗಳನ್ನು ನಡೆಸಿದರು
    • ಪಾಪ್ ಸಂಸ್ಕೃತಿಯ ಬಗ್ಗೆ ಶಿಕ್ಷಕರಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು
ವಿಭಿನ್ನವಾಗಿ ‘ಶಿಕ್ಷಕರ ದಿನ’ ಆಚರಿಸಿದ ಆರ್ಕಿಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ title=
Orchids-The International School

ಬೆಂಗಳೂರು: ಆರ್ಕಿಡ್ಸ್-ದಿ ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳು ಶಿಕ್ಷಕರ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಾಗಿ, ಅವರ ಪ್ರೀತಿಯ ಶಿಕ್ಷಕರಿಗೆ ತರಗತಿಗಳನ್ನು ನಡೆಸಿದರು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಂತೆ ಅಭಿನಯಿಸುವ ಮೂಲಕ ಈ ಚಟುವಟಿಕೆಯಲ್ಲಿ  ಭಾಗವಹಿಸಿದರು. ಜೊತೆಗೆ ತಮ್ಮ ಶಿಕ್ಷಕರ ವಿಶಿಷ್ಟ ಸನ್ನೆಗಳು, ಸಂವಹನ ಮತ್ತು ಬೋಧನಾ ಶೈಲಿಯನ್ನು ಅನುಕರಿಸಿ ಮನರಂಜನೆ ನೀಡಿದರು. 

ಇದನ್ನೂ ಓದಿ: 2022-23ನೇ ಸಾಲಿನ 'ಉತ್ತಮ ಶಿಕ್ಷಕ ಪ್ರಶಸ್ತಿ' ಪ್ರಕಟ : 31 ಶಿಕ್ಷಕರು ಆಯ್ಕೆ

ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಪಾಪ್ ಸಂಸ್ಕೃತಿಯ ಬಗ್ಗೆ ಶಿಕ್ಷಕರಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳು ಕೇಳುವ ಮೋಜಿನ ರಸಪ್ರಶ್ನೆಗಳಿಗೆ ಸಂತೋಷದಿಂದ ಉತ್ತರವನ್ನು ನೀಡಿದ್ದರು.

GenZ ಟ್ರೆಂಡ್‌ಗಳು, ಪಾಪ್ ಸಂಸ್ಕೃತಿ, ಸಾಮಾಜಿಕ ಮಾಧ್ಯಮಗಳು, ಹೊಸ-ಯುಗದ ಭಾಷಾ ಶೈಲಿ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಂದ ಹೆಚ್ಚು ಮಾಹಿತಿಯನ್ನು ಶಿಕ್ಷಕರು ಕಲಿತುಕೊಂಡರು.

ಶಿಕ್ಷಕರನ್ನು ರಂಜಿಸಲು ವಿದ್ಯಾರ್ಥಿಗಳು ನೃತ್ಯ, ಹಾಡು, ನಾಟಕ ಹಾಗೂ ಸ್ಟಾಂಡ್‌ ಅಪ್‌ ಕಾಮಿಡಿಯಂತಹ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ವಿವಿಧ ಶಿಕ್ಷಕರ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಪುರಸ್ಕರಿಸಲಾಯಿತು.

ಆರ್ಕಿಡ್ಸ್-ದಿ ಇಂಟರ್‌ನ್ಯಾಶನಲ್ ಶಾಲೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ  ಮಂಜುಳಾ ಮಾತನಾಡಿ, "ಈ ದಿನವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದ ನಮ್ಮ ವಿದ್ಯಾರ್ಥಿಗಳ  ಪ್ರಯತ್ನವನ್ನು ಶ್ಲಾಘಿಸುತ್ತೇವೆ. ನಮ್ಮ ವಿದ್ಯಾರ್ಥಿಗಳು ನೀಡುವ ಪ್ರೀತಿ ,ಆದರ ಮತ್ತು  ಗೌರವವನ್ನು ಕಂಡು ಭಾವಪರವಶರಾಗಿದ್ದೇವೆ. ವಿದ್ಯಾರ್ಥಿಗಳು ನಮಗೆ ಪಾಠ ಮಾಡಿದ್ದು ವಿಶೇಷವಾಗಿತ್ತು. ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲ, ಸದಾ ಹೊಸದನ್ನು ಕಲಿಯಲು ನಾವು ಸಿದ್ಧ” ಎಂದು ಹೇಳಿದರು.  

ವಿದ್ಯಾರ್ಥಿಗಳು ಸ್ವತಃ ಮಾಡಿದ ಗ್ರೀಟಿಂಗ್‌ ಕಾರ್ಡ್‌ ಗಳನ್ನು ಶಿಕ್ಷಕರಿಗೆ ಹಂಚಿ ಧನ್ಯವಾದ ಸಮರ್ಪಿಸಿದರು.

ಇದನ್ನೂ ಓದಿ: CET RANK ಪಟ್ಟಿ ರದ್ದು, ಸರ್ಕಾರದ ನಿರ್ಧಾರ ತಿರಸ್ಕೃತ : ಹೈಕೋರ್ಟ್ ಮಹತ್ವದ ಆದೇಶ

ಆರ್ಕಿಡ್ಸ್‌ ಸಂಸ್ಥೆಯ ವಿಶೇಷತೆ:

ಆರ್ಕಿಡ್ಸ್‌ ಇಂಟರ್ನ್ಯಾಶನಲ್ ಸ್ಕೂಲ್ ಭಾರತದ ಪ್ರಮುಖ ಶಾಲೆಗಳಲ್ಲಿ ಒಂದಾಗಿದ್ದು, ೨೦೦೨ರಲ್ಲಿ ಇದರ ಮೊದಲ ಶಾಖೆ ಹೈದಾರಾಬಾದ್‌ ನಲ್ಲಿ ಪ್ರಾರಂಭವಾಯಿತು. ಎರಡು ದಶಕಗಳಲ್ಲಿ ಆರ್ಕಿಡ್ಸ್‌ ನ 60 ಶಾಲೆಗಳು ಭಾರತದ 10 ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು, ಪುಣೆ, ಹೈದಾರಾಬಾದ್‌, ಚೆನ್ನೈ, ಇಂದೋರ್‌, ಕೊಲ್ಕತ್ತಾ, ಔರಂಗಾಬಾದ್‌, ನಾಗ್ಪುರ, ಗುರುಗಾಂವ್‌ ನಲ್ಲಿ ಸ್ಥಾಪಿತವಾಗಿವೆ. ಆರ್ಕಿಡ್ಸ್‌ ನಲ್ಲಿ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮವನ್ನು ಪಾಲಿಸುತ್ತಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News