Shukra Asta 2022: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲ, ಗ್ರಹಗಳ ಈ ಪ್ರಭಾವವು ದೇಶ ಮತ್ತು ವಿಶ್ವದ ಆಗುಹೋಗುಗಳ ಮೇಲೂ ಕಂಡುಬರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ, ಸೂರ್ಯ ಸೇರಿದಂತೆ ಅನೇಕ ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸುತ್ತವೆ. ಸೆಪ್ಟೆಂಬರ್ 15 ರಂದು ಶುಕ್ರನು ಸಿಂಹ ರಾಶಿಯಲ್ಲಿ ಅಸ್ತನಾಗಲಿದ್ದಾನೆ. ಸೆಪ್ಟೆಂಬರ್ 15 ರ ಗುರುವಾರ ಬೆಳಗಿನ ಜಾವ 02:29 ಕ್ಕೆ ಶುಕ್ರನು ಅಸ್ತಮಿಸಲಿದ್ದಾನೆ. ಶುಕ್ರಗ್ರಹದ ಈ ಸ್ಥಿತಿಯಿಂದ ಯಾವ ರಾಶಿಯ ಜನರು ಜಾಗರೂಕರಾಗಿರಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಶುಕ್ರಾಸ್ತದ ಫಲಗಳು
ಒಂದು ಗ್ರಹದ ಸೂರ್ಯನ ಅತ್ಯಂತ ಹತ್ತಿರಕ್ಕೆ ಬಂದರೆ ಅದು ಅಸ್ತಮಿಸುತ್ತದೆ. ಅದೇ ರೀತಿಯಲ್ಲಿ, ಶುಕ್ರವು ಸೂರ್ಯನ ಬಳಿ ಬಂದಾಗ, ಶುಕ್ರ ಗ್ರಹವು ಅಸ್ತಮಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ, ಶುಕ್ರನ ಕಾರಕ ಅಂಶಗಳಲ್ಲಿ ಇಳಿಕೆ ಕಂಡುಬರುತ್ತದೆ ಮತ್ತು ಅವರು ತನ್ನ ಶುಭ ಫಲಿತಾಂಶಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಶುಕ್ರಾಸ್ತದ ಈ ಅವಧಿಯಲ್ಲಿ, ಕೆಲ ರಾಶಿಗಳ ಜನರು ಅನೇಕ ರೀತಿಯ ಸಂತೋಷಗಳಿಂದ ವಂಚಿತರಾಗಬಹುದು.
ಈ ಅವಧಿಯಲ್ಲಿ ಮದುವೆಯಂತಹ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಶುಕ್ರನು ಉದಯಿಸಿದಾಗ ಈ ರೀತಿಯ ಕೆಲಸಗಳು ಮತ್ತೆ ಪ್ರಾರಂಭವಾಗುತ್ತವೆ. ಈ ಅವಧಿಯಲ್ಲಿ, ಶುಕ್ರನ ಬೀಜ ಮಂತ್ರವಾಗಿರುವ 'ಓಂ ದ್ರಂ ದ್ರೀನ್ ದ್ರೌನ್ ಸಹ ಶುಕ್ರಾಯ ನಮಃ' ಜಪಿಸಬೇಕು.
ಇದನ್ನೂ ಓದಿ-Daily Horoscope: ಸೆಪ್ಟೆಂಬರ್ 6 ಈ ರಾಶಿಗಳ ಜನರಿಗೆ ಲಕ್ಕಿ ಸಾಬೀತಾಗಲಿದೆ, ಇಲ್ಲಿದೆ ಇಂದಿನ ರಾಶಿಫಲ
ಈ ರಾಶಿಗಳ ಜನರು ಜಾಗರೂಕರಾಗಿರಬೇಕು
ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿಯವರಿಗೆ ಶುಕ್ರಾಸ್ತದ ಕಾಲದಲ್ಲಿ ಎಚ್ಚರಿಕೆ ವಹಿಸಲು ಸಲಹೆ ನೀಡಲಾಗುತ್ತದೆ. ಈ ಜನರ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಹಣ ನಷ್ಟವಾಗುವ ಸಂಭವವಿದೆ. ಇವುಗಳ ಹೊರತಾಗಿ ಮೇಷ, ವೃಷಭ, ಕರ್ಕ, ಸಿಂಹ, ತುಲಾ, ವೃಶ್ಚಿಕ, ಧನು, ಮೀನ ರಾಶಿಯವರಿಗೆ ಶುಕ್ರನ ಅಸ್ತ ಯಾವುದೇ ಅಶುಭ ಪರಿಣಾಮಗಳನ್ನು ನೀಡುವುದಿಲ್ಲ.
ಇದನ್ನೂ ಓದಿ-Jyotish Upay: ಭಾಗ್ಯದ ಬಾಗಿಲಿಗೆ ಬಿದ್ದ ಬೀಗವನ್ನು ಕಿತ್ತೆಸೇಯುತ್ತೆ ಈ ಮಂತ್ರ, ಹೇಗೆ ಜಪಿಸಬೇಕು?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.