Sonali Phogat Murder Case : ಸೋನಾಲಿ ಫೋಗಟ್ ಕೊಲೆ ರಹಸ್ಯ ಬಹಿರಂಗ : ತಪ್ಪೊಪ್ಪಿಕೊಂಡ ಆರೋಪಿ ಸುಧೀರ್!

ಸೋನಾಲಿ ಫೋಗಟ್ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಗೋವಾ ಪೊಲೀಸ್ ಬಿಗ್ ಅಪ್ಡೇಟ್ ನೀಡಿದ್ದಾರೆ. ಮೂಲಗಳ ಪ್ರಕಾರ ಆರೋಪಿ ಸುಧೀರ್ ಸಾಂಗ್ವಾನ್ ಕೊಲೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. 

Written by - Channabasava A Kashinakunti | Last Updated : Sep 3, 2022, 01:04 PM IST
  • ಸೋನಾಲಿ ಫೋಗಟ್ ಹತ್ಯೆ ಪ್ರಕರಣ
  • ಆರೋಪಿ ಸುಧೀರ್ ಸಾಂಗ್ವಾನ್ ಕೊಲೆಗೆ ಸಂಚು
  • ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ
Sonali Phogat Murder Case : ಸೋನಾಲಿ ಫೋಗಟ್ ಕೊಲೆ ರಹಸ್ಯ ಬಹಿರಂಗ : ತಪ್ಪೊಪ್ಪಿಕೊಂಡ ಆರೋಪಿ ಸುಧೀರ್! title=

Sonali Phogat Murder : ಸೋನಾಲಿ ಫೋಗಟ್ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಗೋವಾ ಪೊಲೀಸ್ ಬಿಗ್ ಅಪ್ಡೇಟ್ ನೀಡಿದ್ದಾರೆ. ಮೂಲಗಳ ಪ್ರಕಾರ ಆರೋಪಿ ಸುಧೀರ್ ಸಾಂಗ್ವಾನ್ ಕೊಲೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. 

ಕೊಲೆ ಮಾಡುವುದಕ್ಕೆ ಗೋವಾ ಕರೆತರಲಾಗಿತ್ತು

ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಸೋನಾಲಿಯನ್ನು ಸಿನಿಮಾ ಶೂಟಿಂಗ್ ಗಾಗಿ ಗುರುಗ್ರಾಮದಿಂದ ಗೋವಾಕ್ಕೆ ಕರೆತರಲಾಗಿತ್ತು ಎಂದು ಸುಧೀರ್ ಸಾಂಗ್ವಾನ್ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ವಾಸ್ತವದಲ್ಲಿ ಆ ರೀತಿಯ ಯಾವುದೇ ಸಿನಿಮಾ ಶೂಟಿಂಗ್ ಇರಲಿಲ್ಲ. ಕೊಲೆ ಮಾಡಲು ಗೋವಾಗೆ ಕರೆತರಲಾಗಿತ್ತು. ಸುಧೀರ್ ಸಂಗ್ವಾನ್ ಬಹಳ ದಿನಗಳಿಂದ ಈ ಸಂಚಿಗೆ ಪ್ಲಾನ್ ಮಾಡಿದ್ದ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಈ ಪ್ರಕರಣದಲ್ಲಿ ಆದಷ್ಟು ಬೇಗ ಚಾರ್ಜ್ ಶೀಟ್ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ : Largest Economy In The World: ಬ್ರಿಟನ್ ಹಿಂದಿಕ್ಕಿದ ಭಾರತ 5ನೇ ಸ್ಥಾನಕ್ಕೆ ಏರಿಕೆ!

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ

ಸೋನಾಲಿ ಫೋಗಟ್ ಕೊಲೆ ಪ್ರಕರಣದಲ್ಲಿ ಗೋವಾದ ನ್ಯಾಯಾಲಯವು ಮೂವರು ಆರೋಪಿಗಳನ್ನು 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಈ ಪ್ರಕರಣದಲ್ಲಿ ಸೋನಾಲಿ ಫೋಗಟ್ ಅವರ ಪಿಎ ಸುಧೀರ್ ಸಂಗ್ವಾನ್, ಮತ್ತೊಬ್ಬ ಸಹಾಯಕ ಸುಧೀರ್ ಸಿಂಗ್, ರೆಸ್ಟೋರೆಂಟ್ ಮಾಲೀಕ ಎಡ್ವಿನ್ ನ್ಯೂನ್ಸ್, ಮಾದಕವಸ್ತು ಕಳ್ಳಸಾಗಣೆ ಆರೋಪಿ ದತ್ತಪ್ರಸಾದ್ ಗಾಂವ್ಕರ್ ಮತ್ತು ರಾಮದಾಸ್ ಮಾಂಡ್ರೇಕರ್ ಅನ್ನು ಬಂಧಿಸಲಾಗಿದೆ.

ಆಗಸ್ಟ್ 23 ರಂದು ಸಾವು

ಟಿಕ್‌ಟಾಕ್‌ನಿಂದ ಜನಪ್ರಿಯತೆ ಗಳಿಸಿದ ಫೋಗಟ್, ಆಗಸ್ಟ್ 23 ರಂದು ಉತ್ತರ ಗೋವಾದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಒಂದು ದಿನದ ಹಿಂದೆ, ಫೋಗಟ್ ಇತರ ಇಬ್ಬರೊಂದಿಗೆ ಗೋವಾಗೆ ಬಂದಿದ್ದರು. ಪೋಗಟ್ ಸಾವಿನ ಕೆಲವು ಗಂಟೆಗಳ ಮೊದಲು ರೆಸ್ಟೋರೆಂಟ್‌ನಲ್ಲಿ ಮೆಥಾಂಫೆಟಮೈನ್ ಎಂಬ ಮಾದಕ ವಸ್ತುವನ್ನು ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಸುಧೀರ್ ಸಂಗ್ವಾನ್ ಸೇರಿದಂತೆ ಐವರನ್ನು ಇದುವರೆಗೆ ಬಂಧಿಸಲಾಗಿದೆ.

ಇದನ್ನೂ ಓದಿ : Petrol-Diesel Rate: ವಾಹನ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ: ದೇಶದಲ್ಲಿ ಶೀಘ್ರವೇ ಅಗ್ಗವಾಗಲಿದೆ ಪೆಟ್ರೋಲ್-ಡೀಸೆಲ್ ಬೆಲೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News