ನವದೆಹಲಿ: ಸುಪ್ರಿಂಕೋರ್ಟ್ ಐವರು ಮಾನವ ಹಕ್ಕು ಹೋರಾಟಗಾರ ಗೃಹ ಬಂಧನವನ್ನು ಸೆಪ್ಟೆಂಬರ್ 17 ರವರೆಗೆ ವಿಸ್ತರಿಸಿದೆ.
ಮಾವೋವಾದಿಗಳ ಸಂಪರ್ಕದಲ್ಲಿದ್ದಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಕಳೆದ ತಿಂಗಳು ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಅವರು ಗೃಹ ಬಂಧನದಲ್ಲೇ ಇದ್ದಾರೆ. ಈ ಹೋರಾಟಗಾರರ ಬಂಧನವನ್ನು ವಿರೋಧಿಸಿ ರೋಮಿಲಾ ಥಾಪರ್ ಮತ್ತು ಇತರ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಿಚಾರಣೆ ನಡೆಸಿತ್ತು. ಈ ವೇಳೆಯಲ್ಲಿ ಮಹಾರಾಷ್ಟ್ರದ ಪೊಲೀಸರು ಕಳೆದ ವಾರ ಸುಪ್ರೀಂಗೆ "ಹೋರಾಟಗಾರರನ್ನು ಬಂಧಿಸಿರುವುದು ಅವರ ಪ್ರತಿರೋಧದ ವಿಚಾರವಾಗಿ ಅಲ್ಲ, ಬದಲಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗವಹಿಸಿದ್ದಕ್ಕೆ ಎಂದು ಸಮರ್ಥನೆ ನೀಡಿದ್ದಾರೆ.
ಅಲ್ಲದೆ ಪೊಲೀಸರು ಕೋರ್ಟ್ ಗೆ ಉತ್ತರಿಸುತ್ತಾ " ಕೋರ್ಟ್ ಇಲ್ಲಿ ಯಾರೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅಥವಾ ಅಭಿಪ್ರಾಯ ವ್ಯಕ್ತಪಡಿಸುವ ವಿಚಾರವಾಗಿ ಬಂಧಿಸಿಲ್ಲ" ಎಂದು ತಿಳಿಸಿದ್ದಾರೆ. ಪೊಲೀಸರು ತಮ್ಮ ಹೇಳಿಕೆಯಲ್ಲಿ ಪ್ರಸ್ತಾಪಿಸುತ್ತಾ ಬಂಧಿಸಿದ ಹೋರಾಟಗಾರ ಕಂಪ್ಯೂಟರ್, ಲ್ಯಾಪ್ ಟಾಪ್, ಪೆನ್ ಡ್ರೈವ್, ಮೆಮೊರಿ ಕಾರ್ಡ್ಗಳಿಂದ ಸಂಗ್ರಹಿದ ಮಾಹಿತಿ ಮೇರೆಗೆ ಅವರನ್ನು ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಈಗ ಸುಪ್ರೀಂಕೋರ್ಟ್ ಮಾನವ ಹಕ್ಕು ಹೋರಾಟಗಾರ ಗೃಹ ಬಂಧನವನ್ನು ಸೆ.17 ವರೆಗೆ ವಿಸ್ತರಿಸಿದೆ.