CCTV Footage: Sonali Phogat ಸಾವಿಗೂ ಕೆಲ ಕ್ಷಣಗಳ ಮೊದಲಿನ CCTV ಫೂಟೇಜ್ ಬಹಿರಂಗ! ವಿಡಿಯೋ ನೋಡಿ

Sonali Phogat Death Case: ಸೊನಾಲಿ ಫೋಗಾಟ್ ಸಾವು ಪ್ರಕರಣದಲ್ಲಿ ಭಾರಿ ಸಂಚಲನ ಮೂಡಿಸುವ ಸಂಗತಿಯೊಂದು ಬಹಿರಂಗವಾಗಿದೆ. ಈ ಪ್ರಕರಣದ ತನಿಖೆಯಲ್ಲಿ ಬಹಿರಂಗಗೊಂಡ ವಿಡಿಯೋವೊಂದರಲ್ಲಿ ಸೊನಾಲಿ ಅವರ ಪಿಎ, ಸೋನಾಲಿಯನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೀವು ನೋಡಬಹುದಾಗಿದೆ.

Written by - Nitin Tabib | Last Updated : Aug 26, 2022, 05:51 PM IST
  • ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣದಲ್ಲಿ ಭಾರೀ ಸಂಚಲನ ಮೂಡಿಸುವ ವಿಡಿಯೋವೊಂದು ಇದೀಗ ಬಹಿರಂಗವಾಗಿದೆ.
  • ಇದು ಗೋವಾದಲ್ಲಿ ಟಿಕ್ ಟಾಕ್ ತಾರೆ ಸೊನಾಲಿ ಫೋಗಾಟ್ ತಂಗಿದ ಹೋಟೆಲ್ ನಲ್ಲಿನ ಸಿಸಿಟಿವಿ ಫೂಟೇಜ್ ಆಗಿದೆ.
CCTV Footage: Sonali Phogat ಸಾವಿಗೂ ಕೆಲ ಕ್ಷಣಗಳ ಮೊದಲಿನ CCTV ಫೂಟೇಜ್ ಬಹಿರಂಗ! ವಿಡಿಯೋ ನೋಡಿ title=
Sonali Phogat New Video

Sonali Phogat Death Case Latest Update: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣದಲ್ಲಿ ಭಾರೀ ಸಂಚಲನ ಮೂಡಿಸುವ ವಿಡಿಯೋವೊಂದು ಇದೀಗ ಬಹಿರಂಗವಾಗಿದೆ. ಇದು ಗೋವಾದಲ್ಲಿ ಟಿಕ್ ಟಾಕ್ ತಾರೆ ಸೊನಾಲಿ ಫೋಗಾಟ್ ತಂಗಿದ ಹೋಟೆಲ್ ನಲ್ಲಿನ ಸಿಸಿಟಿವಿ ಫೂಟೇಜ್ ಆಗಿದೆ. 

ಸೊನಾಲಿ ಸಾವಿಗೂ ಕೆಲ ಕ್ಷಣ ಮುನ್ನ ಸೋನಾಲಿ ಅವರನ್ನು ಗೋವಾದ ಹೋಟೆಲ್‌ನಿಂದ ಅರೆಪ್ರಜ್ಞಾಹೀನ ಸ್ಥಿತಿಯಲ್ಲಿ ಕರೆದುಕೊಂಡು ಹೋಗುವ ದೃಶ್ಯ ಈ ಸಿಸಿಟಿವಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ವೀಡಿಯೊದಲ್ಲಿ ಸೋನಾಲಿ ಫೋಗಟ್ ಗೆ ನಡೆದಾಡಲು ಕೂಡ ಸಾಧ್ಯವಾಗುತ್ತಿಲ್ಲ ಎಂಬುದನ್ನು ನೀವು ಗಮನಿಸಬಹುದು. ಸೊನಾಲಿ ಪಿಎ ಅವರನ್ನು ಹೋಟೆಲ್‌ನಿಂದ ಹೊರಗೆ ಕರೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಸೊನಾಲಿ ಫೋಗಾಟ್ ಗೆ ಹೃದಯಾಘಾತ ಸಂಭವಿಸಿದ ಸಮಯದಲ್ಲಿ ಈ ದೃಶ್ಯಾವಳಿಗಳು  ಸಿಸಿಟಿವಿಯಲ್ಲಿ ಸೆರೆಯಾಗಿವೆ ಎನ್ನಲಾಗುತ್ತಿದೆ. ಆದರೆ, ನಂತರ ನಡೆದ ತನಿಖೆಯಲ್ಲಿ, ಸೊನಾಲಿ ಅವರಿಗೆ ಲಿಕ್ವಿಡ್ ನಲ್ಲಿ ಒಂದು ಪದಾರ್ಥವನ್ನು ಬೆರೆಸಿ ನೀಡಲಾಗಿದೆ ಎಂಬ ಸಂಗತಿಯನ್ನು ಸೊನಾಲಿ ಅವರ ಪಿಎ ಒಪ್ಪಿಕೊಂಡಿದ್ದಾರೆ. 

ಸೊನಾಲಿ ಫೋಗಾಟ್ ಅವರ ಇಬ್ಬರು ಸಹಚರರ ಮೇಲೆ ಆರೋಪ 
ಪೊಲೀಸರು ನೀಡಿದ ಹೇಳಿಕೆಯ ಪ್ರಕಾರ, ಸೋನಾಲಿ ಫೋಗಟ್ ಸಾಯುವ ಮೊದಲು ಅವರ ಇಬ್ಬರು ಸಹಚರರು ಪಾರ್ಟಿಯ ಸಮಯದಲ್ಲಿ ಮಾದಕ ದ್ರವ್ಯವನ್ನು ನೀಡಿದ್ದರು ಎನ್ನಲಾಗಿದೆ. ಇವರಿಬ್ಬರೂ ಫೋಗಟ್ 'ಕೊಲೆ' ಆರೋಪಿಗಳಾಗಿದ್ದಾರೆ ಎನ್ನಲಾಗಿದೆ. ಅಂಜುನಾ ರೆಸ್ಟೊರೆಂಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ಫೋಗಟ್‌ಗೆ ನೀಡಲಾದ ಪಾನೀಯಕ್ಕೆ ಇಬ್ಬರೂ ಆರೋಪಿಗಳು "ಕೆಲವು ರಾಸಾಯನಿಕ ಪದಾರ್ಥ" ಸೇರಿಸುವುದನ್ನು ಕಾಣಬಹುದು ಎಂದು ಪೊಲೀಸ್ ಮಹಾನಿರೀಕ್ಷಕ ಓಂವಿರ್ ಸಿಂಗ್ ಬಿಷ್ಣೋಯ್ ಹೇಳಿದ್ದಾರೆ.

ಇದನ್ನೂ ಓದಿ-7th Pay Commission: 10ನೇ ತರಗತಿ ಪಾಸಾದವರಿಗೆ DRDO ನಲ್ಲಿ ಉದ್ಯೋಗಾವಕಾಶ, ಒಂದು ಲಕ್ಷಕ್ಕೂ ಅಧಿಕ ವೇತನ ಪಡೆಯುವ ಸುವರ್ಣಾವಕಾಶ

ಇಬ್ಬರೂ ಫೋಗಾಟ್  ಜೊತೆ ಗೋವಾಕ್ಕೆ ತೆರಳಿದ್ದರು
ಬಂಧಿತ ಆರೋಪಿಗಳಾದ ಸುಧೀರ್ ಸಂಗ್ವಾನ್ ಮತ್ತು ಸುಖವಿಂದರ್ ಸಿಂಗ್ ಆಗಸ್ಟ್ 22 ರಂದು ಫೋಗಟ್ ಜೊತೆ ಗೋವಾಕ್ಕೆ ತೆರಳಿದ್ದರು. ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಉತ್ತರ ಗೋವಾದ ಅಂಜುನಾ ರೆಸ್ಟೋರೆಂಟ್‌ನಲ್ಲಿ ಫೋಗಟ್‌ಗೆ ಡ್ರಗ್ಸ್ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಬಿಷ್ಣೋಯ್ ಹೇಳಿದ್ದಾರೆ. ಆರೋಪಿಗಳಿಬ್ಬರನ್ನೂ ಶೀಘ್ರವೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ-Viral Video: ಮತ ಕೇಳಲು ಹುಡುಗಿಯ ಕಾಲಿಗೆ ಬಿದ್ದ ಈ ವ್ಯಕ್ತಿ ಮಾಡಿದ್ದೇನು ನೋಡಿ!

ಪ್ರಕರಣದಲ್ಲಿ ಕೊಲೆ ಆರೋಪವನ್ನು ಸೇರಿಸಲಾಗಿದೆ
ಗುರುವಾರ ಬೆಳಗ್ಗೆ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಧಿವಿಜ್ಞಾನ ತಜ್ಞರು ಫೋಗಟ್‌ನ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ನಂತರ, ಅಂಜುನಾ ಪೊಲೀಸರು ಕೊಲೆಯ ಆರೋಪವನ್ನು "ಅಸ್ವಾಭಾವಿಕ ಸಾವು" ಪ್ರಕರಣಕ್ಕೆ ಸಂಬಂಧಿಸಿದೆ ಮತ್ತು ವರದಿಯು ಅವರ ದೇಹದ ಮೇಲೆ "ಆಳವಾದ ಗಾಯ" ತೋರಿಸಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಅದಕ್ಕೆ ಸಂಬಂಧಿಸಿದಂತೆ ಪುರಾವೆಗಳು ಕೂಡ ಇವೆ ಎನ್ನಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News