ಮಾನವ ದೇಹವನ್ನು ದೇವರು ಸೃಷ್ಟಿಸಿದ ಅತ್ಯಮೂಲ್ಯ ವಸ್ತುವೆಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬರ ದೈಹಿಕ ಸಾಮರ್ಥ್ಯವು ವಿಭಿನ್ನವಾಗಿದ್ದರೂ, ಒಬ್ಬ ವ್ಯಕ್ತಿಯು ಧೈರ್ಯವನ್ನು ಕಳೆದುಕೊಳ್ಳದಿದ್ದರೆ, ಅವನು ಕಷ್ಟದ ಸಂದರ್ಭಗಳಲ್ಲಿಯೂ ಬದುಕಬಲ್ಲನು ಎಂದು ನಂಬಲಾಗಿದೆ. ಈ ಮಾತು ಅನೇಕ ವಿಷಯಗಳಿಗೆ ನಿಜವೆಂದು ಸಾಬೀತಾಗಿದೆ. ಇದರ ಇತ್ತೀಚಿನ ಉದಾಹರಣೆ ಬ್ರೆಜಿಲ್ನಲ್ಲಿ ಕಂಡುಬಂದಿದೆ. ಅಲ್ಲಿ ಒಬ್ಬ ವ್ಯಕ್ತಿ ಅಲೆಗಳ ರಭಸಕ್ಕೆ ಸಿಲುಕಿ ಕಡೆಗೆ ಒಂದು ನಿರ್ಜನ ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಿದ್ದನು. ಆ ಸಂದರ್ಭದಲ್ಲಿ ಆ ವ್ಯಕ್ತಿಯು ನಿಂಬೆ ಮತ್ತು ಕಲ್ಲಿದ್ದಲು ತಿನ್ನುತ್ತಾ 5 ದಿನಗಳ ಕಾಲ ವಾಸಿಸುತ್ತಿದ್ದನು.
ಬ್ರೆಜಿಲ್ನ ರಿಯೊ ನಗರದಲ್ಲಿ ಈ ವಿಚಿತ್ರ ಘಟನೆ ಸಂಭವಿಸಿದೆ. ಅಲ್ಲಿ ಒಬ್ಬ ವ್ಯಕ್ತಿಯು ಬಿರುಗಾಳಿಯ ರಭಸಕ್ಕೆ ಸಿಲುಕಿ ಅಲೆಗಳ ಮೂಲಕ ತೇಲಿಕೊಂಡು ಹೋಗಿ ದ್ವೀಪದಲ್ಲಿ ಸಿಲುಕಿಕೊಂಡಿದ್ದನು. ಆ ನಂತರ ಈ ಮನುಷ್ಯನು ಜನವಸತಿಯಿಲ್ಲದ ದ್ವೀಪದಲ್ಲಿ ತನ್ನ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾನೆ. ಬಾಯಾರಿಕೆಯಾದಾಗ ಸಮುದ್ರದ ಉಪ್ಪು ನೀರನ್ನು ಕುಡಿಯುತ್ತಾನೆ. ಸಮುದ್ರದ ಅಲೆಗಳೊಂದಿಗೆ ಹೋರಾಡುತ್ತಾ ತಮ್ಮ ಸ್ಥಳಕ್ಕೆ ಮರಳಲು ಪ್ರಯತ್ನಿಸಿದರೂ ಆತ ವಿಫಲನಾದನು.
ನೆಲ್ಸನ್ ನೆಡಿ ಎಂಬವರು ರಿಯೊ ಡಿ ಜನೈರೊದ ಗ್ರುಮರಿ ಬೀಚ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಮುದ್ರದ ಬಲವಾದ ಅಲೆಗಳು ಅವರನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿತು. ಅಷ್ಟೇ ಅಲ್ಲದೆ, ನೀರಿನಲ್ಲಿ ಮುಳುಗುವುದನ್ನು ತಪ್ಪಿಸಲು ಸಮುದ್ರದಲ್ಲಿ ಸುಮಾರು 3 ಕಿ.ಮೀ ಈಜಿದರು. ಕೊನೆಯದಾಗಿ ಪಾಲ್ಮಾಸ್ ದ್ವೀಪದಲ್ಲಿ ಸಿಲುಕಿಕೊಂಡರು. ಅಲ್ಲಿ ಐದು ದಿನ ಒಂಟಿಯಾಗಿ ಜೀವನ ನಡೆಸಿದ್ದಾರೆ.
ಡೈಲಿ ಮೇಲ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿರ್ಜನ ದ್ವೀಪದಲ್ಲಿ ಯಾರೋ ಬಿಟ್ಟು ಹೋಗಿದ್ದ ನಿಂಬೆ ಮತ್ತು ಕಲ್ಲಿದ್ದಲನ್ನು ಸೇವಿಸಿ ಹೊಟ್ಟೆ ತುಂಬಿಸಿಕೊಂಡಿದ್ದಾರಂತೆ. 'ಅಲ್ಲಿ ಬೇರೇನೂ ಇರಲಿಲ್ಲ, ಆಗ ನಾನು ಒಂದು ಗುಹೆಯನ್ನು ನೋಡಿದೆ. ಅಲ್ಲಿಯೇ ಉಳಿದುಕೊಂಡು, ದ್ವೀಪದಲ್ಲಿಯೇ ಇರುವ ವಸ್ತುಗಳನ್ನು ಪರಿಶೀಲಿಸಲು ಪ್ರಾರಂಭಿಸಿದೆ. ಅಲ್ಲಿ ನನಗೆ ಎರಡು ನಿಂಬೆಹಣ್ಣು ದೊರೆತವು. ಅವುಗಳನ್ನು ಕಿತ್ತಳೆ ಹಣ್ಣು ಎಂದು ತಿಂದೆ ಎಂದು ಅವರು ಹೇಳುತ್ತಾರೆ
ಮಂಗಗಳು ಇದ್ದಿಲು ತಿನ್ನುವುದನ್ನು ಟಿವಿಯಲ್ಲಿ ನೋಡಿದ್ದೆ. ಹೀಗಾಗಿ ನಾನೂ ಸಹ ಕಲ್ಲಿದ್ದಲು ತಿಂದು ಹೊಟ್ಟೆ ತುಂಬಿಸಿಕೊಂಡೆ ಎಂದು ಅವರು ಹೇಳಿದರು.
'ನಾನು ಟೆಂಟ್ನಲ್ಲಿ ಕಂಬಳಿಯನ್ನು ಕಂಡುಕೊಂಡೆ, ಅದನ್ನು ಯಾರಾದರೂ ನೋಡುವಂತೆ ಬೀಸಲು ಪ್ರಾರಂಭಿಸಿದೆ. ನಡುನಡುವೆ ನಾನು ಮತ್ತೆ ಗ್ರುಮಾರಿಗೆ ಈಜಲು ಪ್ರಯತ್ನಿಸಿದೆ ಆದರೆ ಸಮುದ್ರದ ಅಲೆಗಳು ಯಾವಾಗಲೂ ನನ್ನನ್ನು ಹಿಂದಕ್ಕೆ ತಳ್ಳಿದವು. ಐದು ದಿನಗಳ ನಂತರ ನಾನು ಮೋಟಾರು ದೋಣಿಯನ್ನು ನೋಡಿದೆ, ಅದರಲ್ಲಿ ಕೆಲವು ಜನರಿದ್ದರು. ನಂತರ ನಾನು ನನ್ನ ಟಿ-ಶರ್ಟ್ ಅನ್ನು ಗಾಳಿಯಲ್ಲಿ ಬೀಸಲಾರಂಭಿಸಿದೆ.
ದೋಣಿಯಲ್ಲಿದ್ದ ಜನರು ಆಡಳಿತಕ್ಕೆ ಮಾಹಿತಿ ನೀಡಿದರು ಎಂದು ನೆಲ್ಸನ್ ಹೇಳಿದರು. ಅವರ ಸಹಾಯದ ನಂತರ ಅವರನ್ನು ವಿಮಾನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಬಿಡುಗಡೆ ಮಾಡಲಾಯಿತು. ಸಮುದ್ರದ ಬಲವಾದ ಅಲೆಗಳಿಂದ ಅವರ ಬೆನ್ನುಮೂಳೆಯ ಸ್ಥಿತಿಯು ಈ ರೀತಿಯಾಗಿರುವುದನ್ನು ನೀವು ಈ ಚಿತ್ರದಲ್ಲಿ ನೋಡಬಹುದು