Bajaj CT 125X Price, Specs, Features: ಬಜಾಜ್ ಆಟೋ CT 125X ಅನ್ನು ರೂ 71,345 ಬೆಲೆಯೊಂದಿಗೆ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ, ದೆಹಲಿ). ಈ ಮೂಲಕ ಭಾರತದಲ್ಲೇ ಅತ್ಯಂತ ಅಗ್ಗದ 125ಸಿಸಿ ಬೈಕ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಹೊಸ ಬಜಾಜ್ CT 125X ಬಜಾಜ್ CT 110X ಗಿಂತ ಸುಮಾರು 5,000 ರೂ.ಮಾತ್ರ ದುಬಾರಿಯಾಗಿದೆ. ಬೈಕ್ ಅನ್ನು ಮೂರು ಬಣ್ಣದ ಆಯ್ಕೆಗಲಾಗಿರುವ - ಎಬೊನಿ ಬ್ಲ್ಯಾಕ್ ಜೊತೆಗೆ ರೆಡ್ ಡೆಕಲ್ಸ್, ಎಬೊನಿ ಬ್ಲ್ಯಾಕ್ ವಿತ್ ಬ್ಲೂ ಡೆಕಲ್ಸ್ ಮತ್ತು ಎಬೊನಿ ಬ್ಲ್ಯಾಕ್ ವಿತ್ ಗ್ರೀನ್ ಡಿಕಲ್ಸ್ ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಇದು ಹೋಂಡಾ ಶೈನ್ ಮತ್ತು ಹೀರೋ ಸೂಪರ್ ಸ್ಪ್ಲೆಂಡರ್ಗೆ ಪೈಪೋಟಿ ನೀಡಲಿದ್ದು, ಇವುಗಳ ಬೆಲೆ ಕ್ರಮವಾಗಿ ರೂ 77,378 ರಿಂದ ರೂ 81,378 ಮತ್ತು ರೂ 77,500 ರಿಂದ ರೂ 81,400 (ಎಕ್ಸ್ ಶೋ ರೂಂ) ನಡುವೆ ಇದೆ.
ಈ ಕನ್ಸ್ಯೂಮರ್ ಮೋಟಾರ್ಸೈಕಲ್ 124.4cc, ಏರ್ ಕೂಲ್ಡ್ ಎಂಜಿನ್ನಿಂದ ಚಾಲಿತವಾಗಿದ್ದು, 10.9PS ಪವರ್ ಮತ್ತು 11Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ ಬರುತ್ತದೆ. ಬಜಾಜ್ CT 125X ನ ಸಸ್ಪೆನ್ಷನ್ ಸೆಟಪ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಗಳನ್ನು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ಗಳನ್ನು ಒಳಗೊಂಡಿದೆ. ಇದು ಸಿಬಿಎಸ್ (ಸಂಯೋಜಿತ ಬ್ರೇಕಿಂಗ್ ಸಿಸ್ಟಮ್) ಗುಣಮಟ್ಟವನ್ನು ಹೊಂದಿದೆ. ಬ್ರೇಕಿಂಗ್ಗಾಗಿ, ಆರಂಭಿಕ ರೂಪಾಂತರಗಳಲ್ಲಿ 130 ಎಂಎಂ ಮುಂಭಾಗ ಮತ್ತು ಹಿಂಭಾಗದ ಡ್ರಮ್ ಬ್ರೇಕ್ಗಳನ್ನು ನೀಡಲಾಗಿದೆ. ಟಾಪ್ ರೂಪಾಂತರಗಳಲ್ಲಿ 240 ಎಂಎಂ ಡಿಸ್ಕ್ ಅಪ್ ಫ್ರಂಟ್ ಯೂನಿಟ್ ಅನ್ನು ಪಡೆಯುತ್ತದೆ. ಬೈಕ್ 17 ಇಂಚಿನ ಅಲಾಯ್ ವ್ಹೀಲ್ ಗಳನ್ನೂ ಹೊಂದಿದೆ. ಇದು ಮುಂಭಾಗದಲ್ಲಿ Aag 80/100-17 ಮತ್ತು ಹಿಂಭಾಗದಲ್ಲಿ 100/90-17 ಟ್ಯೂಬ್ಲೆಸ್ ಟೈರ್ಗಳನ್ನು ಹೊಂದಿದೆ.
ಬೈಕ್ ನ ಇತರ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, CT 125X ಒಂದು ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, USB ಚಾರ್ಜಿಂಗ್ ಪೋರ್ಟ್ ಮತ್ತು ಕೌಲ್ನಲ್ಲಿ LED DRL ಸೆಟಪ್ ಅನ್ನು ಹೊಂದಿದೆ. ಬೈಕ್ನ ಸೀಟ್ ಎತ್ತರ ಮತ್ತು ಉದ್ದ ಕ್ರಮವಾಗಿ 810 ಎಂಎಂ ಮತ್ತು 700 ಎಂಎಂ ಇದೆ. ಇದರ ವ್ಹೀಲ್ ಬೇಸ್ 1285 ಎಂಎಂ. ಇದು ರೌಂಡ್ ಹೆಡ್ಲ್ಯಾಂಪ್ಗಳು, ಎಲ್ಇಡಿ ಡಿಆರ್ಎಲ್ಗಳು, ರಬ್ಬರ್ ಟ್ಯಾಂಕ್ ಪ್ಯಾಡ್ಗಳು, ಕ್ರ್ಯಾಶ್ ಗಾರ್ಡ್ಗಳು, ಫೋರ್ಕ್ ಗೇಟರ್ಗಳು ಮತ್ತು ದೊಡ್ಡ ಗ್ರಾಬ್ ರೈಲ್ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಪುಣೆ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಬಜಾ ತನ್ನ ಹೊಸ 350 ಸಿಸಿ ಬೈಕ್ ನ ಪರೀಕ್ಷೆ ಕೂಡ ಪ್ರಾರಂಭಿಸಿದೆ ಎಂಬುದು ಇಲ್ಲಿ ಗಮನಾರ್ಹ. ಇದನ್ನು ಟ್ರಯಂಫ್ ಸಹಯೋಗದೊಂದಿಗೆ ಉತ್ಪಾದಿಸಲಾಗುತ್ತದೆ. ಮುಂದಿನ ವರ್ಷದಲ್ಲಿ ಈ ಮಾದರಿಯೂ ಕೂಡ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು 350cc, ಲಿಕ್ವಿಡ್ ಕೂಲ್ಡ್ ಎಂಜಿನ್ನೊಂದಿಗೆ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.