ಎರಡನೇ ಹಂತದ ಮೆಟ್ರೋ ಕಾಮಗಾರಿ: ಸುರಂಗ ಕೊರೆದು ಹೊರಬಂದ ಟಿಬಿಎಂ ಮಿಷನ್

ಕೊರೊನಾದ ಬಳಿಕ ವೇಗದ ಮಿತಿ ಹೆಚ್ಚಿಸಿರುವ ಎರಡನೇ ಹಂತದ ಮೆಟ್ರೋ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ನಮ್ಮ‌ ಮೆಟ್ರೋ ನಿಗಮ ಪಣತೊಟ್ಟಿದೆ. ಹೀಗಾಗಿ ಕಳೆದ ಫೆಬ್ರವರಿ 2ರಂದು ಸುರಂಗ ಪ್ರವೇಶಿದ್ದ ಟಿಬಿಎಂ ವಿಂಧ್ಯಾ 900ಮೀಟರ್ ಉದ್ದ ಕಲ್ಲು ಬಂಡೆಗಳನ್ನ ಕೊರೆದು ಪ್ಯಾಟರಿ ಟೌನ್ ಬಳಿ ಹೊರ ಬಂದಿದೆ.

Written by - Manjunath Hosahalli | Edited by - Yashaswini V | Last Updated : Aug 18, 2022, 02:06 PM IST
  • ಕೊರೊನಾದ ಬಳಿಕ ವೇಗದ ಮಿತಿ ಹೆಚ್ಚಿಸಿರುವ ಎರಡನೇ ಹಂತದ ಮೆಟ್ರೋ ಕಾಮಗಾರಿ
  • ಗೊಟ್ಟಿಗೆರೆಯಿಂದ ನಾಗವಾರದವರೆಗೆ 13 ಕಿ.ಮೀ ಸುರಂಗ ಕಾರ್ಯ
  • ಕಳೆದ ಫೆಬ್ರವರಿ 2ರಂದು ಸುರಂಗ ಪ್ರವೇಶಿದ್ದ ಟಿಬಿಎಂ ವಿಂಧ್ಯಾ 900ಮೀಟರ್ ಉದ್ದ ಕಲ್ಲು ಬಂಡೆಗಳನ್ನ ಕೊರೆದು ಪ್ಯಾಟರಿ ಟೌನ್ ಬಳಿ ಹೊರ ಬಂದಿದೆ
ಎರಡನೇ ಹಂತದ ಮೆಟ್ರೋ ಕಾಮಗಾರಿ: ಸುರಂಗ ಕೊರೆದು ಹೊರಬಂದ ಟಿಬಿಎಂ ಮಿಷನ್ title=
Second phase of metro works

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ‌ ಮೆಟ್ರೋದ ಎರಡನೇ ಹಂತದ ಕಾಮಗಾರಿ ವೇಗವನ್ನ ಪಡೆದುಕೊಂಡಿದೆ. ಗೊಟ್ಟಗೆರೆ ನಾಗವಾರ ಮಾರ್ಗವಾಗಿ ನಡೆಯುತ್ತಿರುವ ಸುಮಾರು 13 ಕಿ.ಮೀ ಸುರಂಗ ಕಾರ್ಯ ನಡೆಯುತ್ತಿದ್ದು  2022 ಫೆಬ್ರವರಿ 2ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆ ಸುರಂಗ ಪ್ರವೇಶಿಸಿದ್ದ ವಿಂಧ್ಯಾ ಹೆಸರಿನ ಟಿಬಿಎಂ ಮಿಷನ್  ಗುರುವಾರ ಬೆಳಗ್ಗೆ 10:30ಕ್ಕೆ ತನ್ನ ಕಾರ್ಯವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿ ಹೊರಬಂದಿದೆ.

6 ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಿಸಿದ್ದ ವಿಂಧ್ಯಾ;
ಕೊರೊನಾದ ಬಳಿಕ ವೇಗದ ಮಿತಿ ಹೆಚ್ಚಿಸಿರುವ ಎರಡನೇ ಹಂತದ ಮೆಟ್ರೋ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ನಮ್ಮ‌ ಮೆಟ್ರೋ ನಿಗಮ ಪಣತೊಟ್ಟಿದೆ. ಹೀಗಾಗಿ ಕಳೆದ ಫೆಬ್ರವರಿ 2ರಂದು ಸುರಂಗ ಪ್ರವೇಶಿದ್ದ ಟಿಬಿಎಂ ವಿಂಧ್ಯಾ 900ಮೀಟರ್ ಉದ್ದ ಕಲ್ಲು ಬಂಡೆಗಳನ್ನ ಕೊರೆದು ಪ್ಯಾಟರಿ ಟೌನ್ ಬಳಿ ಹೊರ ಬಂದಿದೆ.

ಇದನ್ನೂ ಓದಿ- Surathkal Fazil murder case : ಫಾಝಿಲ್‌ ಕೊಲೆ ಪ್ರಕರಣ : ಮತ್ತೋರ್ವ ಆರೋಪಿಯ ಬಂಧನ

ಗೊಟ್ಟಿಗೆರೆಯಿಂದ ನಾಗವಾರದವರೆಗೆ 13 ಕಿ.ಮೀ ಸುರಂಗ ಕಾರ್ಯ:
ಎರಡನೇ ಹಂತದ ಗೊಟ್ಟಗೆರೆ ಟು ನಾಗವಾರ ಮಾರ್ಗದಲ್ಲಿ ಸುಮಾರು 13 ಕಿ.ಮೀ ಸುರಂಗ ಕಾರ್ಯ ನಡೆಯುತ್ತಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಮತ್ತೊಂದು ಬದಿಯಲ್ಲಿ ನಡೆಯುತ್ತಿದ್ದ ಸುರುಂಗ ಮಾರ್ಗದ ಕಾರ್ಯ ನಡೆಯುತ್ತಿದ್ದು, ಊರ್ಜಾ ಹೆಸರಿನ ಟಿಬಿಎಂ ಮಿಷನ್ ಕೂಡ ತನ್ನ ಕಾರ್ಯವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿ ಹೊರಬಂದಿತ್ತು.‌ ಇದರ ಮುಂದುವರೆದ ಭಾಗವಾಗಿ ಇಂದು ವಿಂಧ್ಯಾ ಹೆಸರಿನ ಟಿಬಿಎಂ ಮಿಷನ್ ಕಾರ್ಯ ಕೂಡ ಪೂರ್ಣಗೊಳಿಸಿ ಹೊರಬಂದಿದೆ. 

ಇದನ್ನೂ ಓದಿ- ಸರ್ಕಾರದಿಂದ 15 ಸಾವಿರ ಶಾಲಾ ಶಿಕ್ಷಕ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ!

ಇಲ್ಲಿವರೆಗೂ 1755 ಮೀಟರ್ ಉದ್ದ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳಿಸಿದ್ದು, ಇನ್ನುಳಿದಂತ ಕಾರ್ಯ ಪ್ರಗತಿಯಲ್ಲಿದೆ ಎಂದು ನಮ್ಮ‌ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News