ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ ಪತ್ನಿ ಹೆಸರು ಕಾಂಚನ್ ಜೋಶಿ. ದೆಹಲಿಯ ಐಐಟಿಯಲ್ಲಿ ಇಬ್ಬರೂ ಭೇಟಿಯಾಗಿದ್ದರು.
ಬೆಂಗಳೂರು : ನಮ್ಮ ದೇಶದ ಅನೇಕ ಉದ್ಯಮಿಗಳು ತಮ್ಮ ವೃತ್ತಿಜೀವನವನ್ನು ಸ್ಟಾರ್ಟ್ಅಪ್ಗಳೊಂದಿಗೆ ಪ್ರಾರಂಭಿಸಿದ್ದಾರೆ. ಆದರೆ ‘ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಹೆಣ್ಣಿನ ಕೈ ಇರುತ್ತದೆ’ ಎಂದು ಹೇಳಲಾಗುತ್ತದೆ. ಅದೇ ರೀತಿ, ಕೆಲವು ಭಾರತೀಯ ಉದ್ಯಮಿಗಳ ಯಶಸ್ಸು ಅವರ ಪತ್ನಿಯರ ತ್ಯಾಗ ಮತ್ತು ಸಮರ್ಪಣೆಯನ್ನು ಒಳಗೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ ಪತ್ನಿ ಹೆಸರು ಕಾಂಚನ್ ಜೋಶಿ. ದೆಹಲಿಯ ಐಐಟಿಯಲ್ಲಿ ಇಬ್ಬರೂ ಭೇಟಿಯಾಗಿದ್ದರು. ಜೀವನದ ಹಲವು ಹಂತಗಳಲ್ಲಿ ಕಾಂಚನ್ ದೀಪಿಂದರ್ ಅವರನ್ನು ಬೆಂಬಲಿಸಿದ್ದಾರೆ. ಕಾಂಚನ್ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ಇಬ್ಬರೂ 2007 ರಲ್ಲಿ ವಿವಾಹವಾದರು. ಸದ್ಯ ಅವರಿಗೆ ಮಗಳಿದ್ದಾಳೆ.
ಪ್ರಿಯಾ ಬನ್ಸಾಲ್ ಫ್ಲಿಪ್ಕಾರ್ಟ್ನ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಅವರ ಪತ್ನಿ. ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಪ್ರಿಯಾ , ಬೆಂಗಳೂರಿನ ಕೋರಮಂಗಲದಲ್ಲಿ ಡೆಂಟಲ್ ಕ್ಲಿನಿಕ್ ಹೊಂದಿದ್ದಾರೆ. ಸುಮಾರು 5400 ಕೋಟಿಗಳ ಒಡೆಯ ಸಚಿನ್ ಬನ್ಸಾಲ್ ಮತ್ತು ಅವರ ಪತ್ನಿ ಪರಸ್ಪರರೊಂದಿಗೆ ಅತ್ಯಂತ ಕಡಿಮೆ ಸಮಯವನ್ನು ಕಳೆಯುತ್ತಾರೆ.
Housing.com ನ ಸಹ-ಸ್ಥಾಪಕ ಮತ್ತು ಮಾಜಿ ಸಿಇಒ ಮತ್ತು ಇಂಟೆಲಿಜೆಂಟ್ ಇಂಟರ್ಫೇಸ್ ಸಂಸ್ಥಾಪಕ ರಾಹುಲ್ ಯಾದವ್, ಕರಿಷ್ಮಾ ಕೋಖರ್ ಅವರನ್ನು ವಿವಾಹವಾದರು. ರಾಜಸ್ಥಾನದ ಅಲ್ವಾರ್ ಮೂಲದ ರಾಹುಲ್ 10ನೇ ತರಗತಿಯಲ್ಲಿರುವಾಗ ಓದಿನಲ್ಲಿ ತನ್ನ ಸ್ನೇಹಿತರಿಗಿಂತ ಹಿಂಡಿದ್ದರು. ಆದರೆ 12ನೇ ತರಗತಿಯಲ್ಲಿ ಶೇ.75 ಅಂಕ ಗಳಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಅವರ ಪತ್ನಿ ಕರಿಷ್ಮಾ ಎಂಜಿನಿಯರಿಂಗ್ ಪದವೀಧರರಾಗಿದ್ದು, ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿದ್ದಾರೆ.
ಸ್ನಾಪ್ಡೀಲ್ ಸಹ-ಸಂಸ್ಥಾಪಕ ಕುನಾಲ್ ಬಹ್ಲ್ ಅವರ ಪತ್ನಿ ಯಶನಾ ದೀಶ್ ಅವರು ಅಮಿಟಿ ವಿಶ್ವವಿದ್ಯಾಲಯ ಮತ್ತು ಇನ್ಫಿನಿಟಿ ಬ್ಯುಸಿನೆಸ್ ಸ್ಕೂಲ್ನಲ್ಲಿ ಪದವೀಧರರಾಗಿದ್ದಾರೆ. ಕುನಾಲ್ ಮತ್ತು ಯಶ್ನಾ 2012 ರಲ್ಲಿ ವಿವಾಹವಾದರು, ಅವರಿಗೆ ಮೂರು ವರ್ಷದ ಮಗಳಿದ್ದಾಳೆ.
ಆಪ್ ಆಧಾರಿತ ಟ್ಯಾಕ್ಸಿ ಸೇವಾ ಕಂಪನಿ ಓಲಾ ಸಹ-ಸಂಸ್ಥಾಪಕರಾದ ಭವಿಶ್ ಅಗರ್ವಾಲ್ ಅವರು ರಾಜಲಕ್ಷ್ಮಿ ಅಗರ್ವಾಲ್ ಅವರನ್ನು ವಿವಾಹವಾಗಿದ್ದಾರೆ. ಅವರು ಅರ್ನ್ಸ್ಟ್ & ಯಂಗ್ನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 14 ವರ್ಷಗಳಿಂದ ಒಬ್ಬರಿಗೊಬ್ಬರು ಆಸರೆಯಾಗಿರುವ ಭವಿಶ್ ಮತ್ತು ರಾಜಲಕ್ಷ್ಮಿ ಪ್ರತಿ ಹೆಜ್ಜೆಯಲ್ಲೂ ಒಬ್ಬರಿಗೊಬ್ಬರು ಬೆಂಬಲ ನೀಡಿದ್ದಾರೆ.
ಮೈಕ್ರೋಮ್ಯಾಕ್ಸ್ ಸಹ-ಸಂಸ್ಥಾಪಕ ರಾಹುಲ್ ಶರ್ಮಾ 23 ಜನವರಿ 2016 ರಂದು ಬಾಲಿವುಡ್ ನಟಿ ಆಸಿನ್ ಅವರನ್ನು ವಿವಾಹವಾದರು. ದಕ್ಷಿಣ ಭಾರತದ ಚಿತ್ರಗಳೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಆಸಿನ್, ಅಮೀರ್ ಖಾನ್ ಜೊತೆ ಗಜನಿ ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಮದುವೆಯ ನಂತರ ಇವರು ನಟನೆಯಿಂದ ದೂರ ಉಳಿದಿದ್ದಾರೆ.