ಯಾದಗಿರಿ : ಯಾದಗಿರಿಯಲ್ಲಿ ಸುಲಭವಾಗಿ ಎಲ್ಲರಿಗೂ ಗಾಂಜಾ ಸಿಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಎದ್ದಿದೆ. ಹೌದು ಇಲ್ಲಿ ಪಾನ್ ಬೀಡಾ ಅಂಗಡಿಯಲ್ಲಿ ಗಾಂಜಾ ಜಾಕಲೇಟ್ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ವಿಷಯ ತಿಳಿದ ಪೊಲೀಸರು ಪಾನ್ ಬೀಡಾ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪಾನ್ ಬೀಡಾ ಅಂಗಡಿಯಲ್ಲಿ 46 ಕೆಜಿ ಗಾಂಜಾ ಚಾಕಲೇಟು ಪತ್ತೆಯಾಗಿದೆ.
ರಾಜ್ಯಕ್ಕೆ ಉದ್ಯೋಗ ಅರಸಿಕೊಂಡು ಬಂದ ನೆರೆ ರಾಜ್ಯದ ಖದೀಮರು ಇದೀಗ ಗಿರಿನಾಡಿನಲ್ಲಿ ಗಲ್ಲಿ ಗಲ್ಲಿಗಳಲ್ಲಿ ಗಾಂಜಾ ನಶೆ ಹಬ್ಬುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ರಾಜ್ಯ ಬಿಟ್ಟು ಬಂದವರಿಂದ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ದಂಧೆ ಶುರುಮಾಡಿಕೊಂಡಿದ್ದಾರೆ.
ಇದನ್ನೂ ಓದಿ : Vegetable Price: ಗ್ರಾಹಕರೇ ಗಮನಿಸಿ… ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ
ಯಾದಗಿರಿ ಈಗ ಮಾದಕ ದ್ಯವ್ಯ ಮಾರಾಟದ ಹಾಟ್ ಸ್ಪಾಟ್ ಆದಂತಾಗಿದೆ. ಇಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ ಗಾಂಜಾ ಮಾರಾಟ. ಪಾನ್ ಬೀಡಾ ಅಂಗಡಿಯೊಂದರಲ್ಲಿ ಗಾಂಜಾ ಚಾಕಲೇಟನ್ನು ನಿರಾಂತಕವಾಗಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿಯ ಮೇರೆಗೆ ಪೊಲೀಸರು ಪಾನ್ ಬೀಡಾ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸ್ ದಾಳಿಯ ವೇಳೆ ಪಾನ್ ಬೀಡಾ ಅಂಗಡಿಯಲ್ಲಿ 46 ಕೆ ,ಜಿ ಗಾಂಜಾ ಜಾಕಲೇಟ್ ಪತ್ತೆಯಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ನಗರದ ಜಲಾಲ್ ಮೊಹಲ್ಲಾದ ಅಂಗಡಿಯಲ್ಲಿ ಗಾಂಜಾ ಜಾಕಲೇಟ್ ಪತ್ತೆಯಾಗಿದೆ. ಅಂದಾಜು 3ಲಕ್ಷ 81 ಸಾವಿರ ಮೌಲ್ಯದ ಗಾಂಜಾ ಜಾಕಲೇಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಕನ್ನಯ್ಯಲಾಲ್ ಟವಾಣಿ ಎಂಬಾತನನ್ನು ಕೂಡಾ ಬಂಧಿಸಲಾಗಿದೆ. ಗಾಂಜಾ ಮಾರಾಟ ಹಿನ್ನಲೆ NDPS ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ : ತೇಜ್ ಪ್ರತಾಪ್ ಯಾದವ್ ಗೆ ಸಚಿವ ಸ್ಥಾನ ಹಂಚಿಕೆ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.