ಮಕ್ಕಳಲ್ಲಿ ಈ ಹವ್ಯಾಸಗಳು ಕಂಡು ಬಂದರೆ ದಾರಿ ತಪ್ಪುತ್ತಿದ್ದಾರೆ ಎಂದರ್ಥ

ಮಕ್ಕಳ ಬಗ್ಗೆ ಕಾಳಜಿ ವಹಿಸದಿದ್ದಾಗ  ಮಕ್ಕಳ ಮನಸ್ಸು ಬೇರೆ ವಾಲಲು ಆರಂಭವಾಗುತ್ತದೆ. ಇಡೀ ಕಾರಣಕ್ಕೆ ಮಕ್ಕಳ ಮೇಲೆ  ಮೊದಲಿನಿಂದಲೂ  ನಿಗಾ ಇಡುವುದು ಅವಶ್ಯಕ.  
 

ಬೆಂಗಳೂರು : ಮಕ್ಕಳ ಸುತ್ತಲಿನ ಜನರು ಯಾವ್ ರೀತಿ ಇರುತ್ತಾರೆ ಎನ್ನುವುದರ ಮೇಲೆ ಮಕ್ಕಳ ಗುಣ ನಡತೆ ಅವಲಂಬಿತವಾಗಿರುತ್ತದೆ.  ಅದು ಶಾಲೆಯಾಗಿರಲಿ ಅಥವಾ ನೆರೆಹೊರೆಯಾಗಿರಲಿ,  ಸಾರ್ವಜನಿಕ ಸ್ಥಳವಾಗಿರಲಿ, ಮಕ್ಕಳು ಎಲ್ಲಾ ದಿಕ್ಕಿನಿಂದಲೂ ಏನನ್ನಾದರೂ ಕಲಿಯುತ್ತಾರೆ.  ಸಾಮಾನ್ಯವಾಗಿ, ಪೋಷಕರು ತಮ್ಮ ಜೀವನದಲ್ಲಿ ಹೆಚ್ಚು ಕಾರ್ಯನಿರತರಾಗಿರುವ ಕಾರಣ ತಮ್ಮ ಮಕ್ಕಳಿಗೆ ಹೆಚ್ಚು ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳು ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಮಕ್ಕಳ ಬಗ್ಗೆ ಕಾಳಜಿ ವಹಿಸದಿದ್ದಾಗ  ಮಕ್ಕಳ ಮನಸ್ಸು ಬೇರೆ ವಾಲಲು ಆರಂಭವಾಗುತ್ತದೆ. ಇಡೀ ಕಾರಣಕ್ಕೆ ಮಕ್ಕಳ ಮೇಲೆ  ಮೊದಲಿನಿಂದಲೂ  ನಿಗಾ ಇಡುವುದು ಅವಶ್ಯಕ.  
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಮಗುವು ಮನೆಯಲ್ಲಿ ಕೆಟ್ಟ ಭಾಷೆಯನ್ನು ಬಳಸುತ್ತಿದ್ದರೆ, ಕೆಟ್ಟ ಸಂಘ ಬೆಳೆಸುತ್ತಿದ್ದಾನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅನೇಕ ಬಾರಿ ಮಕ್ಕಳು ಮನೆಯಿಂದ ನಿಂದನೀಯ ಭಾಷೆಯನ್ನು ಕಲಿಯುತ್ತಾರೆ. ಇದನ್ನೂ ತಪ್ಪಿಸಲು, ಮನೆಯ ವಾತಾವರಣವನ್ನು ಉತ್ತಮವಾಗಿ ಇರಿಸಿ.  

2 /4

ಮಕ್ಕಳು  ಇತರ ಮಕ್ಕಳಿಗೆ ಹೊಡೆಯುವುದು ಬಡಿಯುವುದು ಆರಂಭಿಸಿದರೂ ಆ ಕಡೆ ಗಮನ ಹರಿಸುವ ಅಗತ್ಯವಿದೆ.  ಈ ಸಮ್ದರ್ಭದಲ್ಲೊಇ ಮಗುವಿಗೆ ಎಲ್ಲವನ್ನೂ ಪ್ರೀತಿಯಿಂದ ವಿವರಿಸಿ ಹೇಳಬೇಕು. 

3 /4

ಮಕ್ಕಳಲ್ಲಿ ಸಾಮಾನ್ಯವಾಗಿ ಒಂದು ಅಭ್ಯಾಸವಿರುತ್ತದೆ. ಪರಸ್ಪರ ಕೀಟಲೆ ಮಾಡುವುದು. ಮಕ್ಕಳನ್ನು ಚುಡಾಯಿಸುವ ಈ ಅಭ್ಯಾಸವು ಶಾಲೆಯಿಂದ ಮತ್ತು ಅವರ ಸ್ನೇಹಿತರಿಂದ ಹೆಚ್ಚು ಕಲಿಯುತ್ತಾರೆ. ಕೀಟಲೆ ಮಾಡುವ ಅಭ್ಯಾಸ ಒಳ್ಳೆಯದಲ್ಲ ಎನ್ನುವುದನ್ನು ಮಗುವಿಗೆ ತಿಳಿಸಿ.  

4 /4

ಪಾಲಕರು ಮಕ್ಕಳ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ಆದರೂ ತಮಗೆ ಬೇಕಾದ ವಸ್ತುವನ್ನು ಖರೀದಿಸಲು ಮಕ್ಕಳು ಕದಿಯಲು ಪ್ರಾರಂಭಿಸುತ್ತಾರೆ. ಮಕ್ಕಳು ಈ ಅಭ್ಯಾಸಗಳನ್ನು ಇತರ ಮಕ್ಕಳಿಂದ ಕಲಿಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳ ಸ್ನೇಹಿತರ ಸಹವಾಸ ಹೇಗಿರುತ್ತದೆ ಎಂಬುದರ ಬಗ್ಗೆ ಗಮನ ಕೊಡಿ.