'ವಿಕ್ರಾಂತ್ ರೋಣ' ರಿಲೀಸ್ ಆಗಿ ಇನ್ನೇನು ಅರ್ಧ ತಿಂಗಳು ಮುಗಿದು ಹೋಗುತ್ತೆ. ಆದರೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿಮಾ ಹವಾ ಒಂಚೂರು ಕಡಿಮೆ ಆಗಿಲ್ಲ. ಎಲ್ಲೆಲ್ಲೂ ಅಬ್ಬರಿಸುತ್ತಿರುವ 'ವಿಕ್ರಾಂತ್ ರೋಣ' ₹200 ಕೋಟಿ ಕ್ಲಬ್ ಸೇರಲು ದಾಪುಗಾಲು ಇಡುತ್ತಿದೆ.
ಕನ್ನಡ ಸಿನಿಮಾಗಳ ತಾಕತ್ತು ಇಡೀ ಜಗತ್ತಿಗೇ ಗೊತ್ತಾಗಿದೆ. ಹೀಗಾಗಿ ಕನ್ನಡದ ಸಿನಿಮಾಗಳು ಸಪ್ತಸಾಗರ ದಾಟಿವೆ, ಎಲ್ಲೆಲ್ಲೂ ಕನ್ನಡದ ಕಂಪು ಹರಿಸುತ್ತಿವೆ ಸ್ಯಾಂಡಲ್‌ವುಡ್ ಸಿನಿಮಾಗಳು. ಇದೇ ರೀತಿ ಕನ್ನಡಿಗ ಕಿಚ್ಚ ಸುದೀಪ್ ಅವರ 'ವಿಕ್ರಾಂತ್ ರೋಣ' ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಈಗಾಗಲೇ ಬಾಕ್ಸ್ ಆಫಿಸ್‌ನಲ್ಲಿ ₹150 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರ ₹200 ಕೋಟಿ ಕ್ಲಬ್ ಸೇರಲು ದಾಪುಗಾಲು ಇಡುತ್ತಿದೆ.
ಇದನ್ನೂ ಓದಿ : Rakesh Tikait : ರಾಕೇಶ್ ಟಿಕಾಯತ್ಗೆ ಮಸಿ ಬಳಿದ ಪ್ರಕರಣ : 450 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು
ಜಗತ್ತಿನಾದ್ಯಂತ ಸದ್ದು:
ಈಗಾಗಲೇ ₹150 ಕೋಟಿ ಗಡಿ ದಾಟಿ ಹೊಸ ಇತಿಹಾಸ ಬರೆದಿರುವ ಸುದೀಪ್ ಅವರ ಸಿನಿಮಾ, ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡ್ತಿದೆ. ಈಗಾಗಲೇ ಹಾಲಿವುಡ್ ಅಂಗಳಕ್ಕೆ ಎಂಟ್ರಿಯಾದ ಮೊಟ್ಟಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನ 'ವಿಕ್ರಾಂತ್ ರೋಣ' ಪಡೆದಿದ್ದು, ಕೋಟಿ ಕೋಟಿ ಭಾರತೀಯರು ಹಾಗೂ ಜಗತ್ತಿನಾದ್ಯಂತ ಇರುವ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಂಡಿದ್ದಾರೆ. ಇನ್ನು ಸಿನಿಮಾ ರಿಲೀಸ್ ಆಗಿ ಇನ್ನೇನು ಅರ್ಧ ತಿಂಗಳು ಕಂಪ್ಲೀಟ್ ಆಗುತ್ತಾ ಬಂದ್ರು ಕೂಡ 'ವಿಕ್ರಾಂತ್ ರೋಣ' ಹವಾ ಕಡಿಮೆ ಆಗಿಲ್ಲ.
ಸ್ಯಾಂಡಲ್‌ವುಡ್ ಕಂಪು:
ಸ್ಯಾಂಡಲ್‌ವುಡ್ ಸಿನಿಮಾಗಳ ಗತ್ತು ಏನೆಂದು ಜಗತ್ತಿಗೇ ಗೊತ್ತು. ಅದರಲ್ಲೂ ಕನ್ನಡ ಸಿನಿಮಾ ರಂಗದ ಪಾಲಿಗೆ ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಸಖತ್ ಸ್ಪೆಷಲ್. ಯಾಕಂದ್ರೆ ಕನ್ನಡಿಗರ ಸಿನಿಮಾ ಇದೇ ಮೊದಲ ಬಾರಿ ಹಾಲಿವುಡ್‌ಗೆ ಎಂಟ್ರಿ ಕೊಟ್ಟು, ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಲ್ಲೂ ಅಬ್ಬರ ತೋರುತ್ತಿರುವ ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ಅದರಲ್ಲೂ ರಿಲೀಸ್ ಆದ 12ನೇ ದಿನವೂ 'ವಿಕ್ರಾಂತ್ ರೋಣ'ನ ಅಬ್ಬರ ಇನ್ನೂ ಹಾಗೇ ಇದೆ. ಸುಮಾರು 5 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ₹200 ಕೋಟಿ ಕ್ಲಬ್ ಕಡೆಗೆ ದಾಪುಗಾಲು ಇಟ್ಟಿದೆ.
ಇದನ್ನೂ ಓದಿ : Davanagere : ಖಾಸಗಿ ಬಸ್ ಪಲ್ಟಿಯಾಗಿ 20 ಜನರಿಗೆ ಗಾಯ..!
ಬಾಲಿವುಡ್ ಸಿನಿಮಾಗಳಿಗೆ ದಕ್ಷಿಣ ಭಾರತದ ಚಿತ್ರಗಳು ಅದರಲ್ಲೂ ಕನ್ನಡದ ಸಿನಿಮಾಗಳು ಸೆಡ್ಡು ಹೊಡೆಯುತ್ತಿವೆ. ಈಗಾಗಲೇ ಸಾಲುಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್ ವಿಕ್ರಾಂತ್ ರೋಣ ಎದುರು ಯಾವುದೇ ಬಿಗ್ ಬಜೆಟ್ ಸಿನಿಮಾ ರಿಲೀಸ್ ಮಾಡಲಿಲ್ಲ. ಈ ಮೂಲಕ ಬಾಲಿವುಡ್‌ನ ಹಲವು ಸ್ಟಾರ್ಸ್ ಬಚಾವ್ ಆಗಿದ್ದಾರೆ. ಹಲವು ದಿನಗಳ ಕಾಲ ಕನ್ನಡಿಗರ 'ವಿಕ್ರಾಂತ್ ರೋಣ' ಇದೇ ರೀತಿ ಭರ್ಜರಿ ಕಲೆಕ್ಷನ್ ಮಾಡುವ ಎಲ್ಲಾ ಲಕ್ಷಣಗಳಿದ್ದು, ಈ ಪರಿಸ್ಥಿತಿ ಬಾಲಿವುಡ್‌ಗೆ ನಡುಕ ತರಿಸಿದೆ. ಮತ್ತೊಂದು ಕಡೆ ಜಗತ್ತಿನ ಹಲವು ಭಾಷೆಗಳಿಗೆ ವಿಕ್ರಾಂತ್ ರೋಣ ಡಬ್ಬಿಂಗ್ ಮಾಡುವ ಕಾರ್ಯ ಭರದಿಂದ ಸಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.