ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ಲೋಕೇಶ್ ಬಿಗ್ ಬಾಸ್ ಮನೆಯೊಳಗೆ ತಮ್ಮ ಕಥೆಯನ್ನು ಹೇಳಲು ಆರಂಭಿಸಿದರು. ಆಗ ಮಧ್ಯೆ ಬಂದ ಆರ್ಯವರ್ಧನ್ ಗುರೂಜಿ ಇದನ್ನೆಲ್ಲ ಹೇಳಿಕೊಂಡು ಸಿಂಪಥಿ ಪಡೆದುಕೊಳ್ಳಬೇಡಿ ಎಂದು ಹೇಳಿದರು. ಈ ಮಾತು ಲೋಕೇಶ್ಗೆ ಸರಿ ಎನಿಸಲಿಲ್ಲ. ಅದಕ್ಕೆ ಅವರು, ನಿಮ್ಮ ಪ್ರಕಾರ ಇಲ್ಲಿ ನಾವು ಹೇಳುವುದೆಲ್ಲ ವೋಟ್ ಪಡೆಯೋದಕ್ಕೋಸ್ಕರನಾ? ಎಂದು ಮರುಪ್ರಶ್ನೆಸಿದರು. ಆಗ ಇಬ್ಬರ ನಡುವೆಯೂ ವಾಗ್ವಾದ ನಡೆಯಿತು.