ನವದೆಹಲಿ:ಮೋದಿ ಸರ್ಕಾರದ ನೋಟು ನಿಷೇದದ ಬಗ್ಗೆ ಕಿಡಿಕಾರಿದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಜಗತ್ತಿನಲ್ಲಿ ಒಬ್ಬ ಅರ್ಥಶಾಸ್ತ್ರಜ್ನನೂ ಕೂಡ ಹೊಗಳಿಲ್ಲ ಎಂದು ಟೀಕಿಸಿದರು.
ದೆಹಲಿಯಲ್ಲಿ ಕಾಂಗ್ರೆಸ್ ನ ವಿದ್ಯಾರ್ಥಿ ಸಂಘಟನೆಯಾದ ಎನ್ಎಸ್ಯುಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು " ಇಡೀ ಜಗತ್ತಿನಲ್ಲಿ ನೋಟು ನಿಷೇಧಿಕರಣ ಒಳ್ಳೆಯದು ಎನ್ನುವ ಒಬ್ಬನೇ ಒಬ್ಬ ಅರ್ಥಶಾಸ್ತ್ರಜ್ಞನ್ನು ನನಗೆ ತೋರಿಸಿ ಎಂದು ಸವಾಲು ಹಾಕಿದರು.ಇನ್ನು ಮುಂದುವರೆದು ಪ್ರಧಾನಿ ನೋಟು ನಿಷೇದವನ್ನು ಘೋಷಿಸಿದ ದಿನದಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯನ್ ಕೇರಳದಲ್ಲಿದ್ದರು,ಆಗ ಅವರು ದೆಹಲಿಯಲ್ಲಿ ಇರಲಿಲ್ಲ ಮತ್ತು ಅವರನ್ನು ಈ ವಿಚಾರವಾಗಿ ಸಂಪರ್ಕಿಸಿರಲಿಲ್ಲ.ಅಲ್ಲದೆ ಅವರಿಗೆ ನೋಟು ನಿಷೇದ ಜಾರಿಗೆ ಬರುತ್ತದೆ ಎನ್ನುವುದರ ಬಗ್ಗೆಯೂ ತಿಳಿದಿರಲಿಲ್ಲ.ಇವರಿಗೆ ತಿಳಿದಿಲ್ಲವೆಂದರೆ ಇದು ಯಾವ ರೀತಿಯ ಆರ್ಥಿಕತೆ?ಎಂದು ಚಿದಂಬರಂ ಪ್ರಶ್ನಿಸಿದರು.
ಮೋದಿ ಸರ್ಕಾರ ನವಂಬರ್ 8, 2016 ರಂದು ಅಕ್ರಮ ಚಟುವಟಿಕೆ ಹಾಗೂ ಭಯೋತ್ಪಾಧನೆ ಮತ್ತು ಕಪ್ಪು ಹಣವನ್ನು ತಡೆಗಟ್ಟಲು ಈ ಯೋಜನೆಯನ್ನು ಜಾರಿಗೆ ತಂದಿತ್ತು.ಸರ್ಕಾರದ ಈ ನಡೆಗೆ ಜನಸಾಮನ್ಯರು ಮತ್ತು ವಿರೋಧಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.