ಬರ್ಮಿಂಗ್‌ಹ್ಯಾಮ್: ಪದಕ ಗೆಲ್ಲುವ ತವಕದಲ್ಲಿದ್ದ ಭಾರತೀಯ ಸೈಕ್ಲಿಸ್ಟ್ ಮೀನಾಕ್ಷಿ ಅವರು ಅಪಘಾತಕ್ಕೀಡಾಗಿದ್ದು, ಚಿನ್ನದ ಪದಕ ಆಂಗ್ಲರ ಪಾಲಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 10 ಕಿಮೀ ಸ್ಕ್ರ್ಯಾಚ್ ರೇಸ್‌ನಲ್ಲಿ ಭಾರತೀಯ ಸೈಕ್ಲಿಸ್ಟ್ ಮೀನಾಕ್ಷಿ ಅಪಘಾತಕ್ಕೀಡಾದ ಪರಿಣಾಮ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಇದೇ ರೇಸ್‌ನಲ್ಲಿದ್ದ ಇಂಗ್ಲೆಂಡ್‌ನ ಸ್ಪರ್ಧಿ ಚಿನ್ನದ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡರು.
ಸ್ಲೈಕಿಂಗ್ ಟ್ರ್ಯಾಕ್‍ನಲ್ಲಿ ರೇಸ್‍ನಲ್ಲಿ ಪಾಲ್ಗೊಂಡಿದ್ದ ಮೀನಾಕ್ಷಿಯವರು ಅಪಘಾತಕ್ಕೀಡಾಗಿ ಬೈಸಿಕಲ್‍ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮೀನಾಕ್ಷಿ ಅವರನ್ನು ಹಿಂದಿಕ್ಕಲು ಬರುತ್ತಿದ್ದ ನ್ಯೂಜಿಲೆಂಡ್‌ನ ಬ್ರಯೋನಿ ಬೋಥಾ ಸಹ ಅಪಘಾತಕ್ಕೀಡಾಗಿ ಮೀನಾಕ್ಷಿಯವರ ಮೇಲೆಯೇ ಸೈಕಲ್ ಹತ್ತಿಸಿ ಕೆಳಗೆಬಿದ್ದಿದ್ದಾರೆ.
ಇದನ್ನೂ ಓದಿ: CWG 2022: ಬ್ಯಾಕ್‌ಸ್ಟ್ರೋಕ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಈಜುಗಾರ ಶ್ರೀಹರಿ ನಟರಾಜ್
ಮೀನಾಕ್ಷಿ ಅವರಿಗೆ ಪೆಟ್ಟಾಗಿದ್ದರಿಂದ ಸ್ಪರ್ಧೆಯಿಂದ ಹೊರಬೀಳಬೇಕಾಯಿತು. ನ್ಯೂಜಿಲೆಂಡ್‌ನ ಬ್ರಯೋನಿ ಬೋಥಾ ಕೂಡ ಅಪಘಾತಕ್ಕೆ ಸಿಲುಕಿದರು. ಅಪಘಾತದ ನಂತರ ವೈದ್ಯರು ಸ್ಥಳಕ್ಕೆ ಧಾವಿಸಿ ಇಬ್ಬರು ಸವಾರರನ್ನು ರೇಸ್‌ನಿಂದ ಹೊರಗೆ ಕರೆತಂದರು. ಈ ವೇಳೆ ಮೀನಾಕ್ಷಿಯವರಿಗೆ ಗಾಯವಾಗಿದ್ದರಿಂದ ಅವರನ್ನು ಸ್ಟ್ರೆಚರ್ ಮೇಲೆ ಕರೆದುಕೊಂಡು ಹೋಗಲಾಯಿತು.
Horrible accident involving Indian cyclist Meenakshi at the Velodrome. Hope she’s ok! #CommonwealthGames #B2022 pic.twitter.com/o0i4CE7M82
— Sahil Oberoi (@SahilOberoi1) August 1, 2022
ಈ ಸ್ಲೈಕಿಂಗ್ ಸ್ಪರ್ಧೆಯಲ್ಲಿ ಇಂಗ್ಲೆಂಡ್‌ನ ಲಾರಾ ಕೆನ್ನಿ ಚಿನ್ನದ ಪದಕ ಗೆದ್ದರು. ಸದ್ಯ ಮೀನಾಕ್ಷಿಯವರಿಗೆ ಆಗಿರುವ ಅಪಘಾತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಚಿನ್ನದ ಪದಕ ಗೆಲ್ಲುವ ಆಸೆಯಲ್ಲಿದ್ದ ಭಾರತೀಯ ಕ್ರೀಡಾಪಟುವಿಗೆ ಅಪಘಾತವಾಗಿದ್ದು ಕ್ರೀಡಾಪ್ರಿಯರಿಗೆ ನಿರಾಸೆಯ ಜೊತೆಗೆ ಬೇಸರ ಮೂಡಿಸಿತು. ಇಂಗ್ಲೆಂಡ್‌ನ ಮ್ಯಾಟ್ ವಾಲ್ಸ್ ಬೈಕ್‌ನಿಂದ ಬಿದ್ದ ನಂತರ ಲೀ ವ್ಯಾಲಿ ವೆಲೋ ಪಾರ್ಕ್‌ನಲ್ಲಿ ಕೇವಲ ಎರಡೇ ದಿನಗಳಲ್ಲಿ ಸಂಭವಿಸಿದ 2ನೇ ಅಪಘಾತ ಇದಾಗಿದೆ.
ಇದನ್ನೂ ಓದಿ: Commonwealth Games 2022: ಕಾಮನ್‌ವೆಲ್ತ್ ಗೇಮ್ಸ್‌ನ 2ನೇ ದಿನದಂದು ಭಾರತದ ವೇಳಾಪಟ್ಟಿ ಹೀಗಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.