ʼಗಾಳಿಪಟ 2ʼ ಸಿನಿಮಾ ಟಾಪ್ ಲೆವೆಲ್‌ನಲ್ಲಿ ಹಾರೋದು ಪಕ್ಕಾ ಆಯ್ತು. ಟ್ರೇಲರ್ ನೋಡಿದ ಅಭಿಮಾನಿಗಳು ಹಂಚಿಕೊಂಡ ಕಾಮೆಂಟ್ಸ್ ನೋಡ್ತಾ ಇದ್ರೆ ಗಾಳಿಪಟ 2 ಆಗಸದಲ್ಲಿ ಮಿಂಚು ಹರಿಸುವ ಎಲ್ಲಾ ಲಕ್ಷಣ ಕಾಣುತ್ತಿದೆ. ಇಷ್ಟೆಲ್ಲಾ ನೋಡಿದ ಮೇಲೆ ಭಟ್ರು ಮತ್ತು ಗಣಿ ಗೆದ್ದೇಬಿಟ್ರು ಅಂದ್ರೆ ತಪ್ಪಾಗಲ್ಲ. ಟ್ರೇಲರ್ ನೋಡಿದ್ರೇನೇ ಗೊತ್ತಾಗುತ್ತೆ ಈ ಸಿನಿಮಾದ ಹಿಂದೆ ಬಹಳಷ್ಟು ಶ್ರಮವಿದೆ ಅಂತ. ಶ್ರಮಕ್ಕೆ ಪ್ರತಿಫಲ ಸಿಕ್ಕಾಗಿದೆ. ಜನ ಗಾಳಿಪಟ 2 ಸಿನಿಮಾನ ಅಪ್ಪಿಕೊಂಡಾಯಿತು. ಜೊತೆಗೆ ಒಪ್ಪಿಕೊಂಡಾಯಿತು.
ಇದನ್ನೂ ಓದಿ: ಬಾನಂಗಳದಲ್ಲಿ ಹಾರಲು ರೆಡಿಯಾಗ್ತಿದೆ ʼಗಾಳಿಪಟ 2ʼ: ಗೋಲ್ಡನ್ ಸ್ಟಾರ್‌ಗೆ ಸೆಂಚುರಿ ಸ್ಟಾರ್‌ರಿಂದ ಶುಭಾಶಯ
ʼಗಾಳಿಪಟ 2 ಸಿನಿಮಾ ಕನ್ನಡ ಸಿನಿಮಾದ ಎಮೋಷನ್ʼ ಅಂತ ಓರ್ವ ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಇಂತಹ ಅನೇಕ ಕಮೆಂಟ್‌ಗಳು ಗಾಳಿಪಟ 2 ಸಿನಿಮಾ ಮುಗಿಲೆತ್ತರಕ್ಕೆ ಹಾರಿ ಸಕ್ಸಸ್ ಪಡೆಯುತ್ತೆ ಅನ್ನೋ ಸೂಚನೆಯನ್ನು ನೀಡಿದೆ. ಇದು ಭಟ್ರ ಸಿನಿಮಾ ಅಲ್ಲ ನಮ್ಮ ಸಿನಿಮಾ ಅನ್ನೋದನ್ನ ಅಭಿಮಾನಿಗಳು ಸಾರಿ ಸಾರಿ ಹೇಳುತ್ತಿದ್ದಾರೆ. ಇದಕ್ಕಿಂತ ಇನ್ಯಾವ ಪ್ರೀತಿ ಬೇಕು ಹೇಳಿ ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ರಿಗೆ.
ಟ್ವಿಸ್ಟ್‌ಗೆ ಟ್ವಿಸ್ಟ್ ಕೊಡೋ ಡೈರೆಕ್ಟರ್ ಅಂತ ಇದ್ರೆ ಅದು ಯೋಗರಾಜ್ ಭಟ್ ಮಾತ್ರ. ಭಟ್ರ ಸಿನಿಮಾ ಅಂದ್ರೆ ಸಾಕು ಫುಲ್ ಮೀಲ್ಸ್ ಪಕ್ಕಾ ಇರುತ್ತದೆ. ವಾರೆವ್ಹಾ ಏನು ಗುರು ಇದು ಎಮೋಷನ್ಸ್, ವಿಷ್ಯುವಲ್ಸ್, ಫ್ರೆಂಡ್‌ಶಿಪ್, ಲವ್, ರೊಮ್ಯಾನ್ಸ್ ಹೀಗೆ ಲೈಫ್ ಟೈಮ್ ಎಂಟರ್‌ಟೈನ್‌ಮೆಂಟ್ ಈ ಸಿನಿಮಾದಲ್ಲಿ ಸಿಗೋದು ಪಕ್ಕಾ ಅಂತ ಮತ್ತೊಬ್ಬ ಅಭಿಮಾನಿ ತನ್ನ ಬರವಣಿಗೆಯಲ್ಲಿ ಬರೆದುಕೊಂಡಿದ್ದಾನೆ.
ಟ್ರೇಲರ್‌ನಲ್ಲಿರೋ ಒಂದು ಡೈಲಾಗ್ ಜನ ಮನ ಗೆದ್ದು ಬಿಟ್ಟಿದೆ. ʼಭಾಷೆ ಸಾಯೋದಿಲ್ಲ,ಕನ್ನಡ ಸಾಯೋದಿಲ್ಲ ಆದ್ರೆ ಕನ್ನಡ ಸಾಯುತ್ತೆ ಅನ್ನೋರು ಮಾತ್ರ ಬೇಗ ಸಾಯುತ್ತಾರೆʼ ಅನ್ನೋ ಈ ಡೈಲಾಗ್ ಬೆಂಕಿ ಚೆಂಡಿನಂತೆ ಹಬ್ಬಿದೆ. ಕನ್ನಡ ಸಿನಿಮಾನ ಗಾಳಿಪಟ 2 ನೆಕ್ಸ್ಟ್ ಲೆವೆಲ್‌ಗೆ ತಗೊಂಡು ಹೋಗುತ್ತೆ ಅನ್ನೋದು ಇನ್ನೊಂದಿಷ್ಟು ಅಭಿಮಾನಿಗಳ ಮಾತು.
ಟ್ರೇಲರ್ ಮಾತ್ರ ತುಂಬಾ ಮಜಾ ಕೊಟ್ಟಿದೆ. ರಿಲೀಸ್ ಆಗಿರೋ ಅಷ್ಟೂ ಹಾಡುಗಳು ಸುನಾಮಿಯನ್ನೇ ಎಬ್ಬಿಸಿದೆ. ಸಿನಿಮಾ ರಿಲೀಸ್‌ಗೆ ಕೌಂಟ್ ಡೌನ್ ಶುರುವಾಗಿದೆ. ಅಭಿಮಾನಿಗಳ ಎದೆಬಡಿತ ಕೂಡ ಜೋರಾಗಿದೆ. ಸೋ ವೈಟ್ ಮಾಡಿ ಸಿನಿಮಾ ನೋಡಿ ಎಂಜಾಯ್ ಮಾಡೋಣ.
ಇದನ್ನೂ ಓದಿ: ಬಾನು ಭೂಮಿಗೆ ದಾರದ ಸೇತುವೆ ಕಟ್ಟಿದವರ ಸಂಕಟ-ಸಂತಸದ ಕಥೆ: ಜೀವನ ಪಾಠ ಹೇಳುತ್ತೆ ಗಾಳಿಪಟ 2 ಟ್ರೇಲರ್
ಇನ್ನು ಈ ಚಿತ್ರದಲ್ಲಿ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್ ನಾಗ್, ಸುಧಾ ಬೆಳವಾಡಿ, ಪದ್ಮಜಾ ರಾವ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಈ ಸಿನಿಮಾಗೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.