Cylinder Price Today: ವಾಣಿಜ್ಯ ಸಿಲಿಂಡರ್ ಬೆಲೆ ಕಡಿತಗೊಂಡಿದೆ. ಹಣದುಬ್ಬರದ ನಡುವೆಯೇ ಇದು ಜನ ಸಾಮಾನ್ಯರಿಗೆ ಸಮಾಧಾನದ ಸುದ್ದಿ. ಇಂದಿನಿಂದ ಅಂದರೆ ಆಗಸ್ಟ್ 1 ರಿಂದ ವಾಣಿಜ್ಯ ಸಿಲಿಂಡರ್ ಬೆಲೆ 36 ರೂಪಾಯಿಯಷ್ಟು ಇಳಿಕೆಯಾಗಿದೆ.
ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ :
ಆದರೆ, ಗೃಹಬಳಕೆಯ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ದೇಶೀಯ ಎಲ್ಪಿಜಿ ಸಿಲಿಂಡರ್ ಖರೀದಿಸಿದರೆ, 1053 ರೂಪಾಯಿ ಪಾವತಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ 1005.50 , ಕೋಲ್ಕತ್ತಾದಲ್ಲಿ 1079 ರೂ. ಮುಂಬೈನಲ್ಲಿ 1052 ರೂಪಾಯಿ ಮತ್ತು ಚೆನ್ನೈನಲ್ಲಿ 1068 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : ಇಂದಿನಿಂದ ಬದಲಾಗಿದೆ ಈ ನಿಯಮಗಳು, ಜನಸಾಮಾನ್ಯರ ಮೇಲೆ ಆಗಲಿದೆ ಭಾರೀ ಪರಿಣಾಮ
ಜುಲೈನಲ್ಲಿಯೂ ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ ಇಳಿಕೆ :
ಜುಲೈ ತಿಂಗಳ ಆರಂಭದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 8.50 ರೂಪಾಯಿ ಕಡಿತ ಮಾಡಲಾಗಿತ್ತು. ಇದಾದ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2012.50 ರೂ. ಮುಂಬೈನಲ್ಲಿ 1,972.50 ರೂ., ಕೋಲ್ಕತ್ತಾದಲ್ಲಿ 2,132 ರೂ. ಮತ್ತು ಚೆನ್ನೈನಲ್ಲಿ 2,177.50 ರೂ. ಆಗಿತ್ತು.
ಗೃಹ ಬಳಕೆಯ ಅಡುಗೆ ಅನಿಲ ಬೆಲೆ :
ಜುಲೈ 6 ರಂದು ಗೃಹ ಬಳಕೆಯ ಅಡುಗೆ ಅನಿಲ ಡ ಬೆಲೆ 50 ರೂಪಾಯಿಯಷ್ಟು ಏರಿಕೆಯಾಗಿತ್ತು. ಮೇ ತಿಂಗಳ ನಂತರ ಎಲ್ಪಿಜಿ ಬೆಲೆಯಲ್ಲಿ ಆದ ಮೂರನೇ ಬಾರಿಯ ಏರಿಕೆ ಅದಾಗಿತ್ತು.
ಇದನ್ನೂ ಓದಿ : Gold Price Today : ಚಿನ್ನ ಬೆಳ್ಳಿ ಖರೀದಿಗೂ ಮುನ್ನ ತಿಳಿದುಕೊಳ್ಳಿ ಇಂದಿನ ದರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.