ಸ್ವಯಂ ನಿವೃತ್ತಿ ಹೊಂದುವುದು ಸರ್ಕಾರಿ ನೌಕರನ ಹಕ್ಕಲ್ಲ -ಸುಪ್ರೀಂಕೋರ್ಟ್

   

Last Updated : Aug 24, 2018, 04:33 PM IST
ಸ್ವಯಂ ನಿವೃತ್ತಿ ಹೊಂದುವುದು ಸರ್ಕಾರಿ ನೌಕರನ ಹಕ್ಕಲ್ಲ -ಸುಪ್ರೀಂಕೋರ್ಟ್ title=

ನವದೆಹಲಿ: ಸರಕಾರಿ ನೌಕರನು ಸ್ವಯಂ ನಿವೃತ್ತಿ ಹೊದುವುದು ಅವನ ಹಕ್ಕಿನ ಆಯ್ಕೆಯಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.ಅಲ್ಲದೆ ನೌಕರನು ಸ್ವಯಂ ನಿವೃತ್ತಿ ಹೊಂದುವುದನ್ನು ತಡೆಗಟ್ಟಲು ಅದಕ್ಕೆ ವಿಸ್ತೃತವಾದ ಕಾನೂನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ಮತ್ತು ಎಸ್.ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಈ ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ನಾಲ್ಕು ಜಂಟಿ ನಿರ್ದೇಶಕ ಹಿರಿಯ ವೈದ್ಯರು ಸ್ವಯಂ ನಿವೃತ್ತಿಗಾಗಿ ಸಲ್ಲಿಸಿದ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿದೆ.ರಾಜ್ಯದಲ್ಲಿ ವೈದ್ಯರ ಕೊರತೆ ಇರುವುದರಿಂದಾಗಿ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.

ಸುಪ್ರಿಂ ಕೋರ್ಟ್ ತನ್ನ ತೀರ್ಪಿನಲ್ಲಿ ಸಾರ್ವಜನಿಕ ಹಿತದೃಷ್ಟಿ ಸರ್ಕಾರವು ಈ ನಿರ್ಧಾರವನ್ನು ಕೊಂಡಿದೆ ಎಂದು ಉತ್ತರಪ್ರದೇಶ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ವೈದ್ಯರು ಸಂವಿಧಾನದ ಮೂರನೇ ಭಾಗದ ಅನ್ವಯ ಸ್ವಯಂ ನಿವೃತ್ತಿ ಹಕ್ಕನ್ನು ಮಂಡಿಸಿದ್ದರು. 

Trending News