ನವದೆಹಲಿ: ಸರ್ಕಾರಿ ಆದೇಶದ ನಂತರ ಗೂಗಲ್ ಮತ್ತು ಆಪಲ್ ಗುರುವಾರ ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ಅನ್ನು ತಮ್ಮ ಆಪ್ ಸ್ಟೋರ್ಗಳಿಂದ ತೆಗೆದುಹಾಕಿದೆ. ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಎಂಬುದು PUBG ಪರ್ಯಾಯವಾಗಿ ಬಂದ ಗೇಮ್ ಆಗಿದ್ದು, ಇದನ್ನು ಭಾರತೀಯ ವರ್ಷನ್ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
ಈ ಗೇಮ್ನ್ನು ಜುಲೈ 2, 2021 ರಂದು Android ಸಾಧನಗಳಿಗಾಗಿ ಬಿಡುಗಡೆ ಮಾಡಲಾಯಿತು. ಆಗಸ್ಟ್ 18, 2021 ರಂದು, ರಾಷ್ಟ್ರೀಯ ಭದ್ರತೆಯ ಕಾಳಜಿಗಳ ಮೇಲೆ ಸರ್ಕಾರವು PUBG ಜೊತೆಗೆ ಚೈನೀಸ್ ಅಪ್ಲಿಕೇಶನ್ಗಳನ್ನು ನಿಷೇಧಿಸಿತ್ತು. ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ 1 ಮಿಲಿಯನ್ಗಿಂತಲೂ ಹೆಚ್ಚಿನ ಸಂಖ್ಯೆಯನ್ನು ಜನರು ಡೌನ್ಲೋಡ್ ಮಾಡಿದ್ದರು.
ಈ ತಿಂಗಳ ಆರಂಭದಲ್ಲಿ, ಸೌತ್ ಕೊರಿಯಾ ಮೂಲದ ಕ್ರಾಫ್ಟನ್ ಎಂಬ ಕಂಪನಿ BGMI 100 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಮೀರಿದೆ ಎಂದು ಘೋಷಿಸಿತ್ತು.
"BGMIಯ ಮೊದಲ ವರ್ಷವು ಲಕ್ಷಾಂತರ ಆಟಗಾರರನ್ನು ಸೇರಿಸಿಕೊಳ್ಳುವುದರ ಮೂಲಕ ಅದ್ಭುತ ಯಶಸ್ಸನ್ನು ಕಂಡಿದೆ. ನಮ್ಮ ಭಾರತೀಯರಿಗೆ ವಿಶಿಷ್ಟವಾದ ಆಟವನ್ನು ಕೊಡುಗೆಯಾಗಿ ನೀಡುವ ಗುರಿಯೊಂದಿಗೆ ಬಂದಿದ್ದೇವೆ" ಎಂದು ಕ್ರಾಫ್ಟನ್ ಸಿಇಒ ಚಾಂಗನ್ ಕಿಮ್ ಹೇಳಿಕೆಯಲ್ಲಿ ತಿಳಿಸಿದ್ದರು.
ಕಳೆದ ವರ್ಷದಲ್ಲಿ, ಆರೋಗ್ಯಕರ ಗೇಮಿಂಗ್ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಭಾರತದ ಸ್ಥಳೀಯ ವಿಡಿಯೋ ಗೇಮ್, ಇ-ಸ್ಪೋರ್ಟ್ಸ್ ಮತ್ತು ಎಂಟರ್ಟೈನ್ಮೆಂಟ್ ಸ್ಟಾರ್ಟ್ಅಪ್ಗಳನ್ನು ಸುಧಾರಿಸಲು ಗೇಮ್ ಡೆವಲಪರ್ ಸುಮಾರು $100 ಮಿಲಿಯನ್ ಹೂಡಿಕೆ ಮಾಡಿದ್ದರು.
ಇದನ್ನೂ ಓದಿ: ಮೆಟ್ಟಿಲುಗಳ ಮೇಲೆ ಕಾಲಿಟ್ರೆ ಕೇಳುತ್ತೆ ಸಂಗೀತ: ಇದು 800 ವರ್ಷ ಹಳೆಯ ದೇವಾಲಯದ ವಿಶೇಷತೆ
ಮೂಲಗಳ ಪ್ರಕಾರ ಸರಕಾರದ ಸೂಚನೆಯ ಮೇರೆಗೆ ಬಿಜಿಎಂಐ ಗೇಮ್ ತೆಗೆದು ಹಾಕಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಬಂದಿಲ್ಲ. ಜೊತೆಗೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೇಮ್ ಡೆವಲಪರ್ ಕ್ರಾಫ್ಟನ್ ಇಂಡಿಯಾ, ಈ ಬಗ್ಗೆ ಸ್ಪಷ್ಟಿಕರಣವನ್ನು ಶೀಘ್ರದಲ್ಲೇ ನೀಡುತ್ತೇವೆ ಎಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.