ಬೆಂಗಳೂರು : ಕರ್ನಾಟಕ ಭಯೋತ್ಪಾದಕರ ಆಶ್ರಯ ತಾಣವಾಗುತ್ತಿದೀಯಾ ಎಂಬ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣವೂ ಇದೇ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಸಿಕ್ಕಿಬಿದ್ದಿರುವ ಶಂಕಿತ ಉಗ್ರರ ಅಂಕಿ ಅಂಶಗಳೇ ಉಗ್ರರ ಆಶ್ರಯ ತಾಣವಾಗುತ್ತಿದೆ ಎಂಬ ಸ್ಪಷ್ಟ ಮಾಹಿತಿ ನೀಡುತ್ತಿದೆ. ಅಷ್ಟಕ್ಕೂ ಉಗ್ರರು ಕರ್ನಾಟಕದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಹೆಚ್ಚು ಆಶ್ರಯ ಪಡೆಯುತ್ತಿದ್ದಾರೆ ಎಂಬುದು ಆತಂಕಕಾರಿ ಅಂಶವಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೇ ಕಳೆದ ಎಂಟು ವರ್ಷಗಳಿಂದ ಉಗ್ರ ತಾಲೀಬ್ ಹುಸೇನ್ ಆಶ್ರಯವನ್ನು ಪಡೆದುಕೊಂಡಿದ್ದ. ಈತನನ್ನು ಮೊಬೈಲ್ ಸಿಮ್ ಕಾರ್ಡ್ ನೆಟ್ವರ್ಕ್ ಜಾಡು ಹಿಡಿದು ಜಮ್ಮು ಕಾಶ್ಮೀರ ಪೊಲೀಸರು ಬೆಂಗಳೂರಿಗೆ ಬಂದು ಶ್ರೀರಾಮಪುರ ಪೊಲೀಸರ ಸಹಾಯದೊಂದಿಗೆ ಓಕಳಿಪುರ ಮಸೀದಿ ಸಮೀಪ ಬಂಧಿಸಿದ್ದರು. ಪಾಕಿಸ್ತಾನ ಮೂಲದ ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯ ಜೊತೆಯಲ್ಲಿ ಗುರುತಿಸಿಕೊಂಡಿದ್ದ ಉಗ್ರಗಾಮಿ ಬೆಂಗಳೂರಿನಲ್ಲಿ ಆಶ್ರಯ ಪಡೆದಕೊಂಡಿದ್ದ ಎಂಬ ಸಂಗತಿ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.
ಇದನ್ನೂ ಓದಿ : Bengaluru : ಸೆರೆಸಿಕ್ಕಿದ್ದು ಒಬ್ಬರಲ್ಲ ಇಬ್ಬರು ಶಂಕಿತ ಉಗ್ರರು : 10 ದಿನ ಸಿಸಿಬಿ ವಶಕ್ಕೆ ನೀಡಿದ ಕೋರ್ಟ್
ಜೂನ್ 2020ರಿಂದ ಇಲ್ಲಿಯವರೆಗೂ ಸರಿಸುಮಾರು ಶಂಕಿತರು ಸೇರಿ 10 ಮಂದಿಯನ್ನು ರಾಜ್ಯದಲ್ಲಿ ಬಂಧಿಸಲಾಗಿದೆ. ರಾಜ್ಯದಲ್ಲಿ ಬಂಧನಕ್ಕೆ ಒಳಗಾಗಿರುವ ಬಹುತೇಕ ಉಗ್ರರು ಸಿಕ್ಕಿಬಿದ್ದಿರುವುದು ಬೆಂಗಳೂರು ಮತ್ತು ಮಂಗಳೂರಿನಲ್ಲಿ ಎಂಬುದು ಗಮನಿಸಬೇಕಾದ ಅಂಶ. ಕೇರಳದ ಐಸಿಸ್ ನೇಮಕಾತಿಗಾಗಿ ಕೆಲಸ ಮಾಡುತ್ತಿದ್ದ ಅಮರ್ ಅಬ್ದುಲ್ ರೆಹಮಾನ್‌ನನ್ನು ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಇನ್ನು ಫ್ರೇಜರ್ ಟೌನ್‌ನಲ್ಲಿ ಅಡಗಿಕುಳಿತಿದ್ದ ಶಂಕರ್ ವೆಂಕಟೇಶ್ ಪೆರುಮಾಳ್‌ರನ್ನು ಎನ್‌ಐಎ ಅರೆಸ್ಟ್ ಮಾಡಿತ್ತು.
ಐಸಿಸ್ ಪರವಾಗಿ ಕೆಲಸ ಮಾಡುತ್ತಿದ್ದ, ಅದರಲ್ಲೂ ನೇಮಕಾತಿಗಾಗಿ ರಾಜ್ಯದಲ್ಲಿ ಸೈಲೆಂಟಾಗಿ ವರ್ಕ್ ಮಾಡುತ್ತಿದ್ದ ನಾಲ್ವರನ್ನು ಎನ್ಐಎ ಬಂಧಿಸಿತ್ತು. ಜೋಯೆಬ್ ಮನ್ನಾ ಎಂಬಾತನನ್ನು ಮಂಗಳೂರಿನ ಭಟ್ಕಳದಲ್ಲಿ ಬಂಧಿಸಲಾಗಿತ್ತು. ಇನ್ನು ಪ್ರಮುಖವಾಗಿ ಇರ್ಫಾನ್ ನಾಸೀರ್, ಮಹಮ್ಮದ್ ತಕ್ವೀರ್ , ಅಹಮ್ಮದ್ ಖಾದರ್‌ರನ್ನು ಬೆಂಗಳೂರಿನಲ್ಲಿ ಅಧಿಕಾರಿಗಳು ಬಂಧಿಸಿದ್ದರು.
ಲವ್ ಜಿಹಾದ್ ಕೇಸ್‌ನಲ್ಲಿ ದೀಪ್ತಿ ಮಾರ್ಲಾಳ ಬಂಧನ
ಇನ್ನು ಬೆಂಗಳೂರಿನ ಕೆಂಗೇರಿ ಸಮೀಪ ಉಗ್ರರಿಗೆ ನೆರವು ನೀಡುತ್ತಿದ್ದ ಆರೋಪದಲ್ಲಿ ದೀಪ್ತಿ ಮಾರ್ಲಾಳನ್ನು ಜನವರಿ 2022ರಲ್ಲಿ ಬಂಧಿಸಲಾಗಿತ್ತು. ದೀಪ್ತಿ ಮಾರ್ಲಾರ ವಿರುದ್ದ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಿತ್ತು. ತಾಲೀಬ್ ಹುಸೇನ್ ಬೆಂಗಳೂರಿನ ಓಕಳಿಪುರದಲ್ಲಿ ಅಡಗಿ ಕೂತಿದ್ದ. ಈತನನ್ನು ಕಾಶ್ಮೀರ ಪೊಲೀಸರು ಬಂಧಿಸಿ ಜಮ್ಮು ಕಾಶ್ಮೀರಕ್ಕೆ ಎಳೆದೊಯ್ದರು. ಕಿಸ್ತವಾರ್ ಪೊಲಾಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖಾದಳಗಳು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. ಆ ಮೂಲಕ ಕಾಶ್ಮೀರದ ಉಗ್ರನೊಬ್ಬ ಬೆಂಗಳೂರಿನಲ್ಲಿ ಕೇವಲ ತಲೆಮರೆಸಿಕೊಂಡಿದ್ದನೇ ಅಥವಾ ಸಿಲಿಕಾನ್ ಸಿಟಿಯಲ್ಲಿದ್ದುಕೊಂಡು ಕಾಶ್ಮೀರ ಉಗ್ರರಿಗೆ ನೆರವಾಗುತ್ತಿದ್ದನೇ, ಸ್ಲೀಪರ್ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದನೇಯೆ ಎಂಬ ಅನುಮಾನ ಅಧಿಕಾರಿಗಳಲ್ಲಿ ಮೂಡಿತ್ತು.
ಸದ್ಯ ಬೆಂಗಳೂರಿನ ತಿಲಕ್ ನಗರದಲ್ಲಿ ಬಂಧನವಾಗಿರುವ ಶಂಕಿತ ಉಗ್ರ ಅಖ್ತರ್ ಹುಸೇನ್ ಸಾಮಾಜಿಕ ಜಾಲತಾಣವಾದ ಟೆಲಿಗ್ರಾಂ, ವಾಟ್ಸಾಪ್ ಮುಖಾಂತರ ಗ್ರೂಪ್ ರಚಿಸಿ ಧರ್ಮ ಜಿಹಾದ್ ಗೆ ಪ್ರಚೋದನೆ ನೀಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ : Suspected Terrorist Arrested: ಬೆಂಗಳೂರಲ್ಲಿ ವಾಸವಿದ್ದ ಶಂಕಿತ ಉಗ್ರ ಸಿಸಿಬಿ ವಶಕ್ಕೆ
ಚಿಕ್ಕ ವಯಸ್ಸಿನಿಂದಲೇ ಉಗ್ರ ಸಂಘಟನೆಗಳ ಪ್ರಮುಖ ನಾಯಕರ ಭಾಷಣದ ವಿಡಿಯೋ ನೋಡಿ ಪ್ರಭಾವಿತನಾಗಿದ್ದ ಖ್ತರ್ ಆನ್ ಲೈನ್ ಮೂಲಕ ಧಾರ್ಮಿಕ ಮುಖಂಡರ ಪ್ರವಚನ ಕೇಳುತ್ತಿದ್ದ. ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಸದಾ ಕಿಡಿಕಾರುತ್ತಿದ್ದ.ಉಗ್ರ ಸಂಘಟನೆಗಳ ಮೇಲೆ ಒಲವು ಹೊಂದಿದ್ದ ಅಖ್ತರ್, ಇದೇ ವರ್ಷ ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಎನ್ನಲಾಗುತ್ತಿದೆ. ಇನ್ನೂ ಜುಬಾ ಎಂಬಾತನನ್ನು ಎಂಬಾತನನ್ನು ತಮಿಳುನಾಡಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆ ತರುತ್ತಿದ್ದಾರೆ. ಅದೆನೇ ಇರ್ಲಿ ಇಷ್ಟು ಕಡಿಮೆ ಸಮಯದಲ್ಲಿ ಅನೇಕ ಶಂಕಿತರು ಹಾಗೂ ಉಗ್ರಗಾಮಿಗಳು ರಾಜ್ಯದಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.