ಕಾರ್ಗಿಲ್ ವಿಜಯ್ ದಿವಸ್: ಪಾಕ್‌ ಕ್ರೂರಿಗಳ ಹುಟ್ಟಡಗಿಸಲು ವೀರ ಯೋಧರಿಗೆ ಸಹಾಯ ಮಾಡಿದ್ದರು ಈ ಜನ!

ಭಾರತೀಯರು ಎಂದೂ ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಒಂದು. ಕಾರ್ಗಿಲ್‌ ಯುದ್ಧ ಹೆಸರೇ ಸೂಚಿಸುವಂತೆ ನಡೆದಿದ್ದು, ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ. ಇದು ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತೀಯ ವೀರ ಯೋಧರು ಸದೆ ಬಡಿದು, ಆಕ್ರಮಿಸಿಕೊಂಡಿದ್ದ ಭೂಭಾಗವನ್ನು ವಶಕ್ಕೆ ಪಡೆದ ಸುದಿನವಾಗಿದೆ.

Written by - Bhavishya Shetty | Last Updated : Jul 26, 2022, 09:01 AM IST
  • ಪ್ರತಿ ವರ್ಷ ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ
  • ಭಾರತೀಯರು ಎಂದೂ ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಒಂದು
  • ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಇಂದಿಗೆ 23 ವರ್ಷಗಳೇ ಕಳೆದಿದೆ
ಕಾರ್ಗಿಲ್ ವಿಜಯ್ ದಿವಸ್: ಪಾಕ್‌ ಕ್ರೂರಿಗಳ ಹುಟ್ಟಡಗಿಸಲು ವೀರ ಯೋಧರಿಗೆ ಸಹಾಯ ಮಾಡಿದ್ದರು ಈ ಜನ! title=
Kargil Vijay Diwas

ನಿಜವಾದ ಭಾರತೀಯನಾದವನಿಗೆ ಈ ದಿನ ಮರೆಯಲು ಸಾಧ್ಯವಿಲ್ಲ. ಕಾರಣ ಇಂದು ಅದೆಷ್ಟೋ ವೀರ ಯೋಧರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಟ್ಟು, ತಾಯ್ನಾಡನ್ನು ದುಷ್ಟರ ಕೈಗಳಿಂದ ಮರಳಿ ಪಡೆದ ಸುದಿನ. ಹೌದು ದೇಶದೆಲ್ಲೆಡೆ ಇಂದು ಅಂದರೆ ಜುಲೈ 26 ರಂದು ಕಾರ್ಗಿಲ್‌ ವಿಜಯ್‌ ದಿವಸ್‌ನ್ನು ಆಚರಿಸಲಾಗುತ್ತದೆ. 23 ವರ್ಷಗಳ ಹಿಂದೆ ಭಾರತ ಸೇನೆ ಆಪರೇಷನ್‌ ವಿಜಯ್‌ ಮೂಲಕ ಪಾಕಿಸ್ತಾನದ ವಿರುದ್ಧ ಸಮರ ಸಾರಿ ಭಾರತದ ಭೂ ಭಾಗವನ್ನು ಕಾಪಾಡಿಕೊಂಡಿತ್ತು. ಈ ದಿನವನ್ನು ಕಾರ್ಗಿಲ್‌ ವಿಜಯ್‌ ದಿವಸ್‌ ಎಂದು ಆಚರಿಸಲಾಗುತ್ತದೆ. 

ಪ್ರತಿ ವರ್ಷ ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧ ನಡೆದು ಇಂದಿಗೆ 23 ವರ್ಷಗಳು ಕಳೆದಿದೆ. ಆದರೆ ಯೋಧರು ಮಾತ್ರವಲ್ಲದೆ, ಭಾರತೀಯ ಸೇನೆಯ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ದ್ರಾಸ್ ಕಣಿವೆಯ ಜನರು ಈ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಸಹಾಯ ಮಾಡಿದ್ದರ ಬಗ್ಗೆ ನಿಮಗೆ ತಿಳಿದಿದೆಯೇ. ಇದೇ ಜನರನ್ನು ನಾವು ನಾಗರಿಕ ಸೈನಿಕರು ಎಂದು ಕರೆಯುತ್ತೇವೆ. ಹೀಗೆಂದರೆ ಖಂಡಿತವಾಗಿಯೂ ತಪ್ಪಾಗಲ್ಲ. ಭಾರತೀಯ ಸೇನೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ ಅಂತಹ ಇಬ್ಬರು ನಾಗರಿಕ ಸೈನಿಕರನ್ನು ಇಂದು ನಾವು ನಿಮಗೆ ಪರಿಚಯಿಸುತ್ತಿದ್ದೇವೆ. ಯೋಧರಂತೆ ಶಸ್ತ್ರಾಸ್ತ್ರಗಳನ್ನು ಹಾರಿಸದಿದ್ದರೂ, ಯುದ್ಧದಲ್ಲಿ ಅವರ ಪಾತ್ರ ಮಾತ್ರ ಯಾವ ಸೈನಿಕರಿಗೂ ಕಡಿಮೆ ಇರಲಿಲ್ಲ. 

ಇದನ್ನೂ ಓದಿ: KSRTC ಆಸ್ಪತ್ರೆ ಖಾಸಗೀಯವರಿಗೆ ಮಾರಾಟ! ಎಂ.ಪಿ ತೇಜಸ್ವಿ ಸೂರ್ಯ ಮೇಲೆ ನೌಕರರ ಕೆಂಗಣ್ಣು

ಭಾರತೀಯರು ಎಂದೂ ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಒಂದು. ಕಾರ್ಗಿಲ್‌ ಯುದ್ಧ ಹೆಸರೇ ಸೂಚಿಸುವಂತೆ ನಡೆದಿದ್ದು, ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ. ಇದು ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತೀಯ ವೀರ ಯೋಧರು ಸದೆ ಬಡಿದು, ಆಕ್ರಮಿಸಿಕೊಂಡಿದ್ದ ಭೂಭಾಗವನ್ನು ವಶಕ್ಕೆ ಪಡೆದ ಸುದಿನವಾಗಿದೆ.

ಜುಲೈ 26,1999ನೇ ಇಸವಿಯಂದು ಭಾರತೀಯ ಸೈನಿಕರು ʼಆಪರೇಶನ್ ವಿಜಯ್ʼ ಮೂಲಕ ಕಾರ್ಗಿಲ್‌-ಡ್ರಾಸ್‌ ವಲಯದಲ್ಲಿ ಪ್ರದರ್ಶಿಸಿದ ಶೌರ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ದಿನಗಳ ಬಗ್ಗೆ ತಿಳಿಸಿಕೊಡು ಸಲುವಾಗಿ ಕ್ಯಾಪ್ಟನ್‌ ವಿಕ್ರಮ್‌ ಭಾತ್ರಾ ಅವರ ಜೀವನ ಚರಿತ್ರೆಯ ಮೂಲಕ ಬಾಲಿವುಡ್‌ನಲ್ಲಿ ಇತ್ತೀಚೆಗೆ ಸಿನಿಮಾವೊಂದು ಬಿಡುಗಡೆಯಾಗಿತು. ʼಶೇರ್‌ಶಾʼ ಎಂಬ ಟೈಟಲ್‌ನೊಂದಿಗೆ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ಈ ಸಿನಿಮಾದಲ್ಲಿ ವಿಕ್ರಮ್‌ ಭಾತ್ರಾರಾಗಿ ನಟ ಸಿದ್ದಾರ್ಥ್‌ ಮಲ್ಹೋತ್ರಾ ಅಭಿನಯಿಸಿದ್ದರು.  

ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಇಂದಿಗೆ 23 ವರ್ಷಗಳೇ ಕಳೆದಿದೆ. ಆದರೆ ಅಂದು ಪ್ರಾಣ ತ್ಯಾಗ ಮಾಡಿ, ದೇಶವನ್ನು ಶತ್ರುಗಳ ಕೈಯಿಂದ ಕಾಪಾಡಿಕೊಂಡ ವೀರ ಯೋಧರನ್ನು ನಾವು ಸ್ಮರಿಸಲೇಬೇಕು. ಇನ್ನು ಯೋಧರು ಮಾತ್ರವಲ್ಲದೆ, ಅಲ್ಲಿನ ಇಬ್ಬರು ನಾಗರಿಕರು ಭಾರತೀಯ ಸೇನೆಗೆ ಮಾಡಿದ ಸಹಾಯ ಇಂದು ನಾವು ದೇಶದೆಲ್ಲೆಡೆ ವಿಜಯ ದಿವಸವನ್ನು ಆಚರಿಸಲು ಮುಖ್ಯ ಕಾರಣ ಎನ್ನಬಹುದು. 

ಸಹಾಯ ಮಾಡಿದ ನಾಗರಿಕರು: 
ಜಮ್ಮು ಮತ್ತು ಕಾಶ್ಮೀರದ ದ್ರಾಸ್ ಕಣಿವೆಯಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಟೈಗರ್ ಹಿಲ್‌ನ ದಮನ್‌ನಲ್ಲಿರುವ ಮಶ್ಕು ಕಣಿವೆಯ ನಿವಾಸಿ ಯಾರ್ ಮೊಹಮ್ಮದ್ ಖಾನ್ ಭಾರತೀಯ ಸೇನೆಗೆ ಪಾಕಿಸ್ತಾನದ ನೀಚ ಕೃತ್ಯದ ಮೊದಲ ಸುದ್ದಿಯನ್ನು ನೀಡಿದ್ದರು. 65 ವರ್ಷದ ಯಾರ್ ಮೊಹಮ್ಮದ್ ಮೊದಲ ನಿವಾಸಿಯಾಗಿದ್ದು, ಪಾಕಿಸ್ತಾನಿ ಸೇನೆಯ ಕ್ರಮಗಳು ಉತ್ತುಂಗದಲ್ಲಿದೆ ಎಂದು ಸೇನೆಗೆ ತಿಳಿಸಿದ್ದರು. ಇದರೊಂದಿಗೆ ಸಾಕ್ಷ್ಯವನ್ನೂ ಸಹ ನೀಡಿದ್ದಾರೆ. ಯಾರ್ ಮೊಹಮ್ಮದ್ ಅವರು ಪಾಕಿಸ್ತಾನದಲ್ಲಿ ತಯಾರಾದ ಎರಡು ಸಿಗರೇಟ್ ಪ್ಯಾಕೆಟ್‌ಗಳನ್ನು ಸೇನಾ ಕಮಾಂಡರ್‌ಗೆ ತೋರಿಸಿದ್ದರು. 

ಯಾರ್ ಮೊಹಮ್ಮದ್ ಅವರು ಮೇ 8 ರಂದು ಪಾಕಿಸ್ತಾನಿ ಸೇನೆಯ ಕ್ರಮಗಳ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ನೀಡಿದರು. ಇದಲ್ಲದೆ, ಯಾರ್ ಮೊಹಮ್ಮದ್ ಖಾನ್ ಟೈಗರ್ ಹಿಲ್ ಮತ್ತು ಬಾತ್ರಾ ಟಾಪ್ ಅನ್ನು ವಶಪಡಿಸಿಕೊಳ್ಳಲು ಎಂಟು ಸಿಖ್ ಮತ್ತು 18 ಗ್ರೆನೇಡಿಯರ್ಸ್ ರೆಜಿಮೆಂಟ್‌ಗಳೊಂದಿಗೆ ದ್ರಾಸ್ ತಲುಪಲು ಭಾರತೀಯ ಸೇನೆಗೆ ಸಹಾಯ ಮಾಡಿದರು. ಅವರು ಮೊದಲ ಬಾರಿಗೆ ಡ್ರಾಸ್ ಕಣಿವೆಯನ್ನು ತಲುಪಿದ ಸೈನಿಕರಿಗೆ ಈ ಎರಡು ಬೆಟ್ಟಗಳಿಗೆ ಹೋಗಲು ಮಾರ್ಗದರ್ಶನ ನೀಡಿದರು ಮತ್ತು ಭಾರತೀಯ ಸೇನೆಯು ಈ ಎರಡೂ ಪಿಕ್ ಟಾಪ್‌ಗಳನ್ನು ವಶಪಡಿಸಿಕೊಂಡಿತು. 

ಇನ್ನೋರ್ವ ನಾಗರಿಕನ ಹೆಸರು ನಸೀಮ್ ಅಹ್ಮದ್. ದ್ರಾಸ್ ಕಣಿವೆಯಲ್ಲಿ ಯುದ್ಧ ಪ್ರಾರಂಭವಾದಾಗ, ಎಲ್ಲಾ ಜನರನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಭಾರತೀಯ ಸೇನೆಯ ಸೈನಿಕರನ್ನು ಹೊರತುಪಡಿಸಿ ಕೆಲವೇ ಕೆಲವು ಜನರು ಅಲ್ಲಿ ಉಳಿದಿದ್ದರು. ದ್ರಾಸ್ ಕಣಿವೆಯ ನಿವಾಸಿ ನಸೀಮ್ ಅಹ್ಮದ್ ಅವರಲ್ಲಿ ಒಬ್ಬರು. ನಸೀಮ್ ಅಹ್ಮದ್ ದ್ರಾಸ್ ಬಜಾರ್‌ನಲ್ಲಿ ಸಣ್ಣ ಡಾಬಾ ನಡೆಸುತ್ತಿದ್ದ. ಆ ಡಾಬಾದಲ್ಲಿ, ದ್ರಾಸ್‌ನಲ್ಲಿ ವಾಸಿಸುತ್ತಿದ್ದ ಭಾರತೀಯ ಸೇನೆಯ ಸೈನಿಕರಿಗೆ ಗನ್‌ಪೌಡರ್‌ನ ಮಧ್ಯೆ ನಸೀಮ್ ಆಹಾರ ನೀಡುವುದನ್ನು ಮುಂದುವರೆಸಿದರು. ಈ ಇಬ್ಬರು ನಾಗರಿಕ ಸೈನಿಕರಲ್ಲದೆ, ಹತ್ತಾರು ಯುವಕರು ದ್ರಾಸ್ ಮತ್ತು ಕಾರ್ಗಿಲ್‌ನಲ್ಲಿ ದೇಶದ ಗೌರವವನ್ನು ಉಳಿಸಲು ತಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು.

1999 ಮೇ ತಿಂಗಳಿನಲ್ಲಿ ಪ್ರಾರಂಭಗೊಂಡ ಈ ಘೋರ ಕದನ ಬರೋಬ್ಬರಿ ಎರಡು ತಿಂಗಳ ಕಾಲ ನಡೆದಿತ್ತು. ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್‌ ಸೇನೆಯನ್ನು ಸದೆಬಡಿದ ಭಾರತೀಯ ಸೇನೆ ಯಶಸ್ವಿಯಾಗಿ ತನ್ನ ನೆಲವನ್ನು ಕಾಪಾಡಿಕೊಂಡಿತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿ ಒಟ್ಟು 527 ಭಾರತೀಯ ಯೋಧರು ಹುತಾತ್ಮರಾದರು.

ಕಾರ್ಗಿಲ್ ವಿಜಯ್ ದಿವಸ್: 
ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ವಾಸ್ತವವಾಗಿ, 1999 ರಲ್ಲಿ, ಪಾಕಿಸ್ತಾನಿ ನುಸುಳುಕೋರ ಭಯೋತ್ಪಾದಕರು ಮತ್ತು ಸೈನಿಕರು ಕಾರ್ಗಿಲ್ ಬೆಟ್ಟಗಳನ್ನು ರಹಸ್ಯವಾಗಿ ಪ್ರವೇಶಿಸಿದ್ದರು. ಈ ಒಳನುಸುಳುವಿಕೆಯ ವಿರುದ್ಧ, ಭಾರತೀಯ ಸೇನೆಯು 'ಆಪರೇಷನ್ ವಿಜಯ್' ಅನ್ನು ಪ್ರಾರಂಭಿಸಿತು. ಈ ಆಪರೇಷನ್‌ ಮೂಲಕ ಎಲ್ಲಾ ನುಸುಳುಕೋರರನ್ನು ಹತ್ಯೆ ಮಾಡಿದ ಭಾರತೀಯ ಸೈನಿಕರು 26 ಜುಲೈ 1999ರಂದು ಶತ್ರುಗಳಿಂದ ಕಾರ್ಗಿಲ್‌ನ್ನು ಮುಕ್ತಗೊಳಿಸಿದರು. ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧ ನಡೆದು 23 ವರ್ಷಗಳು ಕಳೆದಿವೆ. ಇಂದಿಗೂ ಪ್ರತಿಯೊಬ್ಬ ಭಾರತೀಯನೂ ಸಹ ಈ ದಿನವನ್ನು ಆಚರಿಸುತ್ತಾನೆ. ವೀರಯೋಧನನ್ನು ಸ್ಮರಿಸುತ್ತಾನೆ.  

ಇದನ್ನೂ ಓದಿ: ದೇಶದ 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು

ಕಾಶ್ಮೀರದಲ್ಲಿರುವ ಕಾರ್ಗಿಲ್ ಹಿಮಾಲಯ ಬೆಟ್ಟ-ಗುಡ್ಡಗಳಿಂದ ಆವೃತವಾಗಿರುವ ಸುಂದರ ಪ್ರದೇಶ.ಈ ಪ್ರದೇಶ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 205 ಕಿ.ಮೀ ದೂರದಲ್ಲಿದೆ. ಲೇಹ್ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 1 ಕಾರ್ಗಿಲ್ ಮೂಲಕ ಹಾದು ಹೋಗುತ್ತದೆ. ಅಷ್ಟೇ ಅಲ್ಲದೆ, ಈ ಪ್ರದೇಶದಲ್ಲಿ ಇರುವ ಏಕೈಕ ಹೆದ್ದಾರಿ ಇದು. ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್‍ಗೂ ಈ ಹೆದ್ದಾರಿ ಸಂಪರ್ಕ ಕಲ್ಪಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News