ಭಾರತದ ಈ 7 ರೈಲು ನಿಲ್ದಾಣಗಳಿಂದ ವಿದೇಶಗಳಿಗೂ ಪ್ರಯಾಣ ಮಾಡಬಹುದು...

Indian Railways: ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿರುವ ಭಾರತವು ನೆರೆಯ ರಾಷ್ಟ್ರಗಳಿಗೆ ದೇಶವನ್ನು ಸಂಪರ್ಕಿಸುವ ಕೆಲವು ಅಂತರರಾಷ್ಟ್ರೀಯ ರೈಲು ನಿಲ್ದಾಣಗಳಿಗೆ ನೆಲೆಯಾಗಿದೆ.

Written by - Yashaswini V | Last Updated : Jan 13, 2025, 01:00 PM IST
  • ಕೆಲವೊಮ್ಮೆ ವಿಮಾನದ ಮೂಲಕ ಅಂತಾರಾಷ್ಟ್ರೀಯ ಪ್ರಯಾಣ ದುಬಾರಿಯಾಗುತ್ತದೆ.
  • ವಿಮಾನಗಳ ದರ ನಿಗದಿಗೆ ಯಾವುದೇ ಮಾನದಂಡಗಳು ಇಲ್ಲದೆ ಇರುವುದರಿಂದ ಹೆಚ್ಚಿನ ಹಣ ಖರ್ಚಾಗುತ್ತದೆ.
  • ಪ್ರಯಾಣ ದುಬಾರಿಯಾದರೆ ಒಟ್ಟಾರೆ ವಿದೇಶಿ ಪ್ರವಾಸದ ಬಜೆಟ್ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಭಾರತದ ಈ 7 ರೈಲು ನಿಲ್ದಾಣಗಳಿಂದ ವಿದೇಶಗಳಿಗೂ ಪ್ರಯಾಣ ಮಾಡಬಹುದು...  title=

Indian Railways: ಇಡೀ ಪ್ರಪಂಚದಲ್ಲಿ ಅತಿ ದೊಡ್ಡ ರೈಲ್ವೆ ಜಾಲ ಹೊಂದಿರುವ ದೇಶಗಳ ಪೈಕಿ ಭಾರತಕ್ಕೆ ನಾಲ್ಕನೇ ಸ್ಥಾನ. ಭಾರತದಲ್ಲಿ ಒಟ್ಟು 7 ಅಂತಾರಾಷ್ಟ್ರೀಯ ರೈಲು ನಿಲ್ದಾಣಗಳಿದ್ದು ಅವುಗಳ ಮುಖಾಂತರ ನೆರೆಯ ರಾಷ್ಟ್ರಗಳಿಗೆ ಪ್ರಯಾಣ ಮಾಡಬಹುದಾಗಿದೆ. ಭಾರತದಿಂದ ಬೇರೆ ದೇಶಗಳಿಗೂ ಹೋಗಬಹುದಾದ ಆ 7 ಅಂತಾರಾಷ್ಟ್ರೀಯ ರೈಲು ನಿಲ್ದಾಣಗಳು ಯಾವುವು ಅಂತಾ ತಿಳಿಯಿರಿ.

ಕೆಲವೊಮ್ಮೆ ವಿಮಾನದ ಮೂಲಕ ಅಂತಾರಾಷ್ಟ್ರೀಯ ಪ್ರಯಾಣ ದುಬಾರಿಯಾಗುತ್ತದೆ. ಅದರಲ್ಲೂ ವಿಮಾನಗಳ ದರ ನಿಗದಿಗೆ ಯಾವುದೇ ಮಾನದಂಡಗಳು ಇಲ್ಲದೆ ಇರುವುದರಿಂದ ಹಾಗು ಮಿತಿ ಇಲ್ಲದಿರುವುದರಿಂದ ಹೆಚ್ಚಿನ ಹಣ ಖರ್ಚಾಗುತ್ತದೆ. ಆಗ ಒಟ್ಟಾರೆ ನಿಮ್ಮ ವಿದೇಶಿ ಪ್ರವಾಸದ ಬಜೆಟ್ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ನೆರೆಯ ದೇಶಗಳಿಗೆ ಹೋಗಬೇಕೆಂದರೆ ರೈಲುಗಳ ಮೂಲಕವೂ ಪ್ರಯಾಣ ಮಾಡಬಹುದಾಗಿದೆ.

ಇದನ್ನೂ ಓದಿ- EPFO Pension: ಕೇವಲ 10 ವರ್ಷ ಸೇವೆ ಸಲ್ಲಿಸಿದರೆ ಇಪಿ‌ಎಸ್ ಅಡಿಯಲ್ಲಿ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ...?

ಇವೆ ಆ 7 ರೈಲು ನಿಲ್ದಾಣಗಳು
1 ಪಶ್ಚಿಮ ಬಂಗಾಳದ ಹಲ್ಡಿಬರಿ ರೈಲು ನಿಲ್ದಾಣದಿಂದ ಬಾಂಗ್ಲಾದೇಶಕ್ಕೆ ಪ್ರಯಾಣ ಮಾಡಬಹುದು.
2 ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಪೆಟ್ರಾಪೋಲ್ ರೈಲು ನಿಲ್ದಾಣ ಬಾಂಗ್ಲಾದೇಶಕ್ಕೆ ಪ್ರಯಾಣ ಮಾಡಬಹುದು.
3 ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಸಿಂಗಾಬಾದ್ ರೈಲು ನಿಲ್ದಾಣ ಬಾಂಗ್ಲಾದೇಶಕ್ಕೆ ಪ್ರಯಾಣ ಮಾಡಬಹುದು.
4 ಪಶ್ಚಿಮ ಬಂಗಾಳದ ರಾಧಿಕಾಪುರ ರೈಲು ನಿಲ್ದಾಣದಿಂದ ಬಾಂಗ್ಲಾದೇಶಕ್ಕೆ ಪ್ರಯಾಣ ಮಾಡಬಹುದು.
5 ಬಿಹಾರದ ಮಧುಬನಿ ಜಿಲ್ಲೆಯ ಜಯನಗರ ರೈಲು ನಿಲ್ದಾಣ ನೇಪಾಳಕ್ಕೆ ಪ್ರಯಾಣ ಮಾಡಬಹುದು.
6 ಬಿಹಾರದ ಜೋಗ್ಬಾನಿ ರೈಲು ನಿಲ್ದಾಣ ನೇಪಾಳಕ್ಕೆ ಪ್ರಯಾಣ ಮಾಡಬಹುದು.
7 ಪಂಜಾಬ್‌ನ ಅಟ್ಟಾರಿ ರೈಲು ನಿಲ್ದಾಣದಿಂದ ಪಾಕಿಸ್ತಾನಕ್ಕೆ ಪ್ರಯಾಣ ಮಾಡಬಹುದು.

ಇದನ್ನೂ ಓದಿ- Union Budget 2025: ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ 'ನಾರಿಯರಿಗೆ' ಜಾಕ್ ಪಾಟ್..!

ನೆರೆಯ ದೇಶಗಳಾದ ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ಥಾನಕ್ಕೆ ರೈಲು ಪ್ರಯಾಣ ಮಾಡಬಹುದಾದ ವ್ಯವಸ್ಥೆ ಇದೆಯಾದರೂ ಭಾರತ ಮತ್ತು ಪಾಕಿಸ್ಥಾನ ನಡುವೆ ಪಂಜಾಬ್‌ನಲ್ಲಿರುವ ಅಟ್ಟಾರಿ ರೈಲು ನಿಲ್ದಾಣದಿಂದ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ನಂತರ 2019ರಲ್ಲಿ ಸ್ಥಗಿತಗೊಳಿಸಲಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News