ಬಿಕಿನಿಯಲ್ಲಿ ಕಂಡ ದಿಶಾ ಪಟಾಣಿ ಈಗ ಪಡ್ಡೆ ಹುಡುಗರ ಡ್ರೀಮ್ ಗರ್ಲ್!

ಬಾಲಿವುಡ್ ಬೆಡಗಿ ದಿಶಾ ಪಟಾಣಿ ಇತ್ತೀಚಿಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಕಪ್ಪು ಬಣ್ಣದ ಸ್ವಿಮ್ ಸ್ಯೂಟ್ ಧರಿಸಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

Last Updated : Aug 20, 2018, 09:27 PM IST
ಬಿಕಿನಿಯಲ್ಲಿ ಕಂಡ ದಿಶಾ ಪಟಾಣಿ ಈಗ ಪಡ್ಡೆ ಹುಡುಗರ ಡ್ರೀಮ್ ಗರ್ಲ್! title=

ನವದೆಹಲಿ: ನೀಳಕಾಯದ, ಬಳುಕುವ ಬಳ್ಳಿ ಬಾಲಿವುಡ್ ಚೆಲುವೆ ದಿಶಾ ಪಟಾಣಿ ಈಗ ಬೇಡಿಕೆಯಲ್ಲಿರುವ ನಟಿ. ತನ್ನದೇ ಆದ ನಟನಾ ಶೈಲಿ ಹೊಂದಿರುವ ಈ ನಟಿಯ ಹೊಸ ಫೋಟೊ ಪಡ್ಡೆಹುಡುಗರ ನಿದ್ದೆ ಕೆಡಿಸುತ್ತಿದೆಯಂತೆ. ಹಾಗಂತ ನಾವ್ ಹೇಳ್ತಿಲ್ಲ, ದಿಶಾ ಅಭಿಮಾನಿಗಳು ಹೇಳ್ತಿದ್ದಾರೆ!

ಬಾಲಿವುಡ್ ಬೆಡಗಿ ದಿಶಾ ಪಟಾಣಿ ಇತ್ತೀಚಿಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಕಪ್ಪು ಬಣ್ಣದ ಸ್ವಿಮ್ ಸ್ಯೂಟ್ ಧರಿಸಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಸಮುದ್ರ ತಟದಲ್ಲಿ ಅಲೆಗಳ ಮೇಲೆ ಬಿಕಿನಿ ತೊಟ್ಟು ನಿಂತಿರುವ ದಿಶಾ ಭಂಗಿ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದೆಯಂತೆ. ಈ ಫೋಟೋಗೆ ಫಿದಾ ಆಗಿರುವ ಅಭಿಮಾನಿಗಳಿಗೆ ದಿಶಾ ಸದ್ಯ ಡ್ರೀಮ್ ಗರ್ಲ್ ಆಗಿದ್ದಾರೆ. 

 

🌸

A post shared by disha patani (paatni) (@dishapatani) on

ಆಲಿ ಅಬ್ಬಾಸ್​ ಜಫಾರ್​ ನಿರ್ದೇಶನದ ಸಲ್ಮಾನ್​ ಖಾನ್​ ಅಭಿನಯದ ಭರತ್​ ಚಿತ್ರದಲ್ಲಿ ನಟಿಸುತ್ತಿರುವ ದಿಶಾ, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋ ಶೇರ್ ಮಾಡಿದ ಒಂದೇ ದಿನದಲ್ಲಿ 14 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ದಿಶಾ ಪಟಾಣಿಯ ಈ ನ್ಯೂ ಲುಕ್ ನಿಜಕ್ಕೂ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದ್ದು, 'ಸಿಮ್ ಅಂಡ್ ಬ್ಯೂಟಿಫುಲ್ ದಿಶಾ' ಎಂದು ಹೊಗಳಿದ್ದಾರೆ.

Trending News