Baba Vanga Prediction: ವಿಶ್ವಾದ್ಯಂತ ಹಲವು ಜನರು ಜಗತ್ತಿನ ಕುರಿತು ತಮ್ಮ ಭವಿಷ್ಯವಾಣಿಗಳನ್ನು ಮಂಡಿಸಿದ್ದಾರೆ. ಅವರ ಭವಿಷ್ಯವಾಣಿಗಳು ಕೆಲವೊಮ್ಮೆ ಸರಿಯಾಗಿವೆ. ಇದರಲ್ಲಿ ಬಲ್ಗೇರಿಯನ್ ಬಾಬಾ ವೆಂಗಾ ಅವರ ಹೆಸರು ಮೊದಲು ಬರುತ್ತದೆ. ಬಾಬಾ ವೆಂಗಾ ಅವರು 2022 ರ ವರ್ಷಕ್ಕೆ ಸಂಬಂಧಿಸಿದಂತೆ ಭಯಾನಕ ಭವಿಷ್ಯ ನುಡಿದಿದ್ದರು. ಅವರ ಅನೇಕ ಭವಿಷ್ಯವಾಣಿಗಳು ಇದುವೆರೆಗೆ ನಿಜ ಸಾಬೀತಾಗಿವೆ, ಇದೀಗ ಅವರ ಇತರ ಭವಿಷ್ಯವಾಣಿಗಳು ನಿಜ ಸಾಬೀತಾದರೆ ಏನಾಗುತ್ತದೆ? ಎಂದು ಜನರು ಭಯಪಡುತ್ತಿದ್ದಾರೆ.
ಬಹುತೇಕ ಭವಿಷ್ಯವಾಣಿಗಳು ನಿಜ ಸಾಬೀತಾಗಿವೆ
ಬಾಬಾ ವೆಂಗಾ ಚೆರ್ನೋಬಿಲ್ ದುರಂತ, ಸೋವಿಯತ್ ಒಕ್ಕೂಟದ ವಿಭಜನೆ ಮತ್ತು ರಾಜಕುಮಾರಿ ಡಯಾನಾ ಸಾವಿನಂತಹ ಅನೇಕ ಘಟನೆಗಳ ಕುರಿತು ಭವಿಷ್ಯ ನುದಿದ್ದರು. ಅವರ ಭವಿಷ್ಯವಾಣಿಗಳು ನಿಜ ಸಾಬೀತಾಗಿವೆ. ಬಾಬಾ ವಂಗಾ 1996 ರಲ್ಲಿ ನಿಧನರಾಗಿದ್ದರೂ ಕೂಡ, ಅವರ ಭವಿಷ್ಯವಾಣಿಗಳು ಸಂಪೂರ್ಣವಾಗಿ ನಿಜವೆಂದು ಹಲವರು ನಂಬುತ್ತಾರೆ. 2022 ರ ವೇಳೆಗೆ, ಏಷ್ಯಾದ ಹಲವು ದೇಶಗಳು ಮತ್ತು ಆಸ್ಟ್ರೇಲಿಯಾದಲ್ಲಿ ತೀವ್ರತರವಾದ ಪ್ರವಾಹ ಸ್ಥಿತಿ ಉದ್ಭವಿಸಲಿದೆಎಂದು ಅವರು ಭವಿಷ್ಯ ನುಡಿದಿದ್ದರು. ಆ ಭವಿಷ್ಯ ಇಂದು ಸಂಪೂರ್ಣ ನಿಜವೆಂದು ಸಾಬೀತಾಗಿದೆ. ಇದರೊಂದಿಗೆ ಬಾಬಾ ವೆಂಗಾ ವಿಶ್ವದ ಹಲವು ನಗರಗಳಲ್ಲಿ ಬರಗಾಲದ ಮುನ್ಸೂಚನೆಯನ್ನೂ ನೀಡಿದ್ದರು. ಪ್ರಸ್ತುತ, ಯುರೋಪಿನ ಹಲವು ಪ್ರದೇಶಗಳಲ್ಲಿ ಭೀಕರ ಬರಗಾಲ ಎದುರಿಸುತ್ತಿವೆ.
ಇದನ್ನೂ ಓದಿ-Breaking News: ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಆಯ್ಕೆ
2022 ರ ಭವಿಷ್ಯವಾಣಿ ಇಲ್ಲಿದೆ
ಇದಲ್ಲದೆ, 2022 ರಲ್ಲಿ ಜನರು ಹಿಂದೆಂದಿಗಿಂತಲೂ ಹೆಚ್ಚು ಸಮಯವನ್ನು ಮೊಬೈಲ್ ಪರದೆಯ ಮೇಲೆ ಕಳೆಯುತ್ತಾರೆ ಎಂದು ಬಾಬಾ ವೆಂಗಾ ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ, ಪ್ರಪಂಚದಾದ್ಯಂತ ಮೊಬೈಲ್ ಫೋನ್ಗಳ ಬಳಕೆ ಹೆಚ್ಚುತ್ತಿರುವ ರೀತಿ ನೋಡಿದರೆ, ಅವರ ಈ ಭವಿಷ್ಯವೂ ಕೂಡ ನಿಜವಾಗುತ್ತಿರುವಂತೆ ತೋರುತ್ತಿದೆ. ಇದರೊಂದಿಗೆ, ಹೆಪ್ಪುಗಟ್ಟಿದ ವೈರಸ್ನಿಂದ ಉಂಟಾಗುವ ಸಾಂಕ್ರಾಮಿಕ ರೋಗವೊಂದು ಬರಲಿದೆ ಎಂದು ಅವರು ಮತ್ತೊಂದು ಭವಿಷ್ಯ ನುಡಿದಿದ್ದರು. ಈ ವೈರಸ್ ಸೈಬೀರಿಯಾದಲ್ಲಿ ಕಂಡುಬರುತ್ತದೆ ಮತ್ತು ಹವಾಮಾನ ಬದಲಾವಣೆಯಿಂದ ಹುಟ್ಟುತ್ತದೆ ಎಂದು ಬಾಬಾ ವೆಂಗಾ ಭವಿಷ್ಯ ನುಡಿದಿದ್ದರು. ಇದರರ್ಥ ಕೋವಿಡ್ -19 ವೈರಸ್ ನ ಪ್ರಸ್ತುತ ಬಿಕ್ಕಟ್ಟಿನ ಜೊತೆಗೆ, ಮತ್ತೊಂದು ಸಾಂಕ್ರಾಮಿಕ ರೋಗವು ಉದ್ಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ-ಚಿಲಿಯಲ್ಲಿ ಸಾವಿರಕ್ಕೂ ಹೆಚ್ಚು ಡೈನೋಸಾರ್ಗಳ ಹೆಜ್ಜೆಗುರುತು ಪತ್ತೆ!
'ಏಲಿಯನ್ಗಳು ಭೂಮಿಗೆ ಬರಲಿವೆ'
ಈ ಮುನ್ಸೂಚನೆಗಳ ಹೊರತಾಗಿ, 2022 ರಲ್ಲಿ ಭೂಮಿಯ ಮೇಲೆ ಏಲಿಯನ್ ಗಳ ದಾಳಿ ನಡೆಯಲಿದೆ ಎಂದು ಬಾಬಾ ವೆಂಗಾ ಹೇಳಿದ್ದಾರೆ. ಈ ವರ್ಷವೂ ಭೀಕರ ಪ್ರಕೃತಿ ವಿಕೋಪಗಳು ಎದುರಾಗಲಿವೆ. ವಿಶ್ವಾದ್ಯಂತ ಭೂಕಂಪಗಳು ಮತ್ತು ಸುನಾಮಿಗಳ ಸಾಧ್ಯತೆಯನ್ನು ಅವರು ವ್ಯಕ್ತಪಡಿಸಿದ್ದಾರೆ. 1911 ರಲ್ಲಿ ಜನಿಸಿದ್ದ ಬಾಬಾ ವಂಗಾ ತನ್ನ ನಂತರದ ದಿನಗಳಲ್ಲಿ ಕುರುಡಿಯಾಗಿದ್ದರು. ಅವರು ಇದುವರೆಗೆ ನುಡಿದ ಬಹುತೇಕ ಭವಿಷ್ಯವಾಣಿಗಳು ಸರಿ ಸಾಬೀತಾಗಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ