ಬೆಂಗಳೂರು: ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಸಾಕ್ಷ್ಯಚಿತ್ರ ‘ಗಂಧದ ಗುಡಿ’ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಸಾಕ್ಷ್ಯಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ ಆಗ್ತಿದಂತೆ ಪವರ್ ಫ್ಯಾನ್ಸ್ ಗಳಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ‘ಗಂಧದ ಗುಡಿ’ಯನ್ನು ಅದ್ದೂರಿಯಾಗಿ ವೆಲಕಮ್ ಮಾಡಲು ದೊಡ್ಮನೆ ದೇವರುಗಳು ಸಜ್ಜಾಗಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಇದ್ದಿದ್ರೆ ಇಷ್ಟೋತ್ತಿಗೆ ‘ಗಂಧದ ಗುಡಿ’ ಅಷ್ಟೇ ಅಲ್ಲ ಇನ್ನು ಮೂರ್ನಾಲ್ಕು ಚಿತ್ರಗಳು ಅಭಿಮಾನಿಗಳ ಅಂಗಳಲ್ಲಿ ಇರ್ತಿದ್ದವು.. ಅದರೆ, ವಿಧಿಯ ಕ್ರೂರ ಆಟಕ್ಕೆ ‘ಅಪ್ಪು’ ಬಲಿಯಾಗಿ ಈಗ ‘ಗಂಧದ ಗುಡಿ’ಯೇ ಅಭಿಮಾನಿಗಳ ಪಾಲಿಗೆ ಪುನೀತ್ ನಟನೆಯ ಕೊನೆಯ ಚಿತ್ರವಾಗಿದೆ.
ಇದನ್ನೂ ಓದಿ: Kiccha Sudeep: ಹೊಸ ಪ್ರಯತ್ನಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಕಿಚ್ಚ ಸುದೀಪ್
ಇದೀಗ ಪುನೀತ್ ಅಭಿನಯದ ‘ಗಂಧದ ಗುಡಿ’ ಡಾಕ್ಯುಮೆಂಟರಿಯನ್ನು ಬೆಳ್ಳಿ ತೆರೆಮೇಲೆ ಕಣ್ತುಂಬಿಕೊಳ್ಳುವ ಶುಭ ಸಂದರ್ಭ ಬಂದಿದೆ. ಪುನೀತ್ ಅವರೇ ತುಂಬಾ ಇಷ್ಟಪಟ್ಟು ಕರುನಾಡಿನ ಕಾಡು ಮೇಡು ಅಲೆದಾಡಿದ್ದಾರೆ. ಕನ್ನಡಿಗರಿಗೆ ಕರ್ನಾಟಕದ ಕಾಡಿನ ವೈಭವ ಹಾಗೂ ಪ್ರಾಮುಖ್ಯತೆ ಸಾರುವ ಉದ್ದೇಶದಿಂದಲೇ ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ. ಈಗ ಈ ಡಾಕ್ಯುಮೆಂಟರಿಯನ್ನು ಅಕ್ಟೋಬರ್ 28ಕ್ಕೆ ರಿಲೀಸ್ ಮಾಡಲು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ಲಾನ್ ಮಾಡಿದ್ದಾರೆ. ‘ಅಪ್ಪು’ ಇಲ್ಲದ ಹೊತ್ತಲ್ಲಿ ಅವರಿಗೆ ಗೌರವನಮನ ಸಲ್ಲಿಸುವ ಸಲುವಾಗಿ ಈ ಸಾಕ್ಷ್ಯಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಹೊಂಬಾಳೆ ಫಿಲ್ಮ್ಸ್ PRK ಪ್ರೊಡಕ್ಷನ್ ಜೊತೆ ಕೈ ಜೋಡಿಸಿದೆ.
ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ. pic.twitter.com/s3SRaeAZme
— Ashwini Puneeth Rajkumar (@Ashwini_PRK) July 15, 2022
‘ಗಂಧದ ಗುಡಿ’ ಸುಂದರ ಕರ್ನಾಟಕದ ಬಗ್ಗೆ ‘ಅಪ್ಪು’ ಕಂಡ ಕನಸ್ಸಿನ ಸಾಕ್ಷ್ಯಚಿತ್ರವಾಗಿದೆ. ಇನ್ನು ಇದನ್ನು ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲು ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಧಾರ ಮಾಡಿದ್ದಾರೆ. ಅಲ್ಲದೆ ಈ ಸಾಕ್ಷ್ಯಚಿತ್ರದಲ್ಲಿ ಅಪ್ಪು ಧ್ವನಿ ಇರೋ ಕಾರಣ ಅಭಿಮಾನಿಗಳ ಪಾಲಿಗೆ ಇದೊಂದು ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಗಲಿದೆ. ಈಗಾಗಲೇ ‘ಗಂಧದ ಗುಡಿ’ಯನ್ನು ಕಣ್ತುಂಬಿಕೊಳ್ಳಲು ಅಪ್ಪು ಫ್ಯಾನ್ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಹೀಗಾಗಿ ಇದರ ಮೇಲಿನ ನಿರೀಕ್ಷೆ ದುಪಟ್ಟಾ ಗಿದೆ. ಅಲ್ಲದೆ ಅದ್ದೂರಿ ಸಂಭ್ರಮಚಾರಣೆ ಮೂಲಕ ‘ಗಂಧದ ಗುಡಿ’ಯನ್ನು ಸ್ವಾಗತಿಸಲು ಪುನೀತ್ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ಜುಲೈ 22ಕ್ಕೆ ಬೆಳ್ಳಿತೆರೆಗೆ ‘ಶ್ರೀರಂಗ’..! ಹೇಗಿದೆ ವಿಭಿನ್ನ ಶೀರ್ಷಿಕೆಯ ಟ್ರೇಲರ್..?
‘ಜೇಮ್ಸ್’ ಚಿತ್ರದ ವೇಳೆ ‘ಅಪ್ಪು’ ಕಟೌಟ್ಗೆ ಹೆಲಿಕಾಪ್ಟರ್ ಮೂಲಕ ಹೂವಿನ ಅಭಿಷೇಕ ಮಾಡಲು ಪ್ಲಾನ್ ಮಾಡಿದ್ದರು. ಆದರೆ, ಕೊರೊನಾ ಕರ್ಫ್ಯೂ ಕಾರಣ ಪೊಲೀಸರು ಹೆಲಿಕಾಪ್ಟರ್ ಹಾರಾಟಕ್ಕೆ ಅವಕಾಶ ಕೊಟ್ಟಿರಲಿಲ್ಲ. ಆದರೆ ಇದೀಗ ಆ ಅಭಿಮಾನದ ಅಭಿಷೇಕವನ್ನು ‘ಗಂಧದ ಗುಡಿ’ಗೆ ಮಾಡಲು ದೊಡ್ಮನೆ ದೇವರುಗಳು ತಯಾರಿ ನಡೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.