'ಟಿಪ್ಪು ಜಯಂತಿ' ಆಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಗಿ ಭದ್ರತೆ

             

Last Updated : Nov 10, 2017, 10:16 AM IST
'ಟಿಪ್ಪು ಜಯಂತಿ' ಆಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಗಿ ಭದ್ರತೆ title=

ಬೆಂಗಳೂರು: 'ಮೈಸೂರು ಹುಲಿ' ಖ್ಯಾತಿಯ ಟಿಪ್ಪುವಿನ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಆದರೆ ಇದು ಬಹಳ ಪರ-ವಿರೋಧ ಚರ್ಚೆಗೆ ಗ್ರಾಸವಾಗಿರುವುದಲ್ಲದೆ, ರಾಜಕೀಯ ವಿಷಯವಾಗಿಯೂ ಬಿಂಬಿತವಾಗುತ್ತಿದೆ. ಈ ಎಲ್ಲಾ ಬಿಕ್ಕಟ್ಟಿನ ನಡುವೆಯೂ ಇಂದು ಟಿಪ್ಪು ಜಯಂತಿಯನ್ನು ಆಚರಿಸುತ್ತಿರುವ ಸರ್ಕಾರವು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸಜ್ಜಾಗಿದೆ. 

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 30 KSRP ತುಕಡಿಗಳು, 25 ಸಿಎಆರ್ ತುಕಡಿಗಳು ಹಾಗೂ  ನಗರದ ಸೂಕ್ಷ್ಮ ಪ್ರದೇಶಗಳಿಗೆ‌ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಶಿವಾಜಿನಗರ, ಗೌರಿಪಾಳ್ಯಾ, ಚಾಮರಾಜ್ ಪೇಟೆ, ಟ್ಯಾನರಿ ರೋಡ್‌ ಹಾಗೂ ವಿಧಾನಸೌಧ ಸೇರಿದಂತೆ ಬಹುತೇಕ ಕಡೆ‌ ಬಿಗಿ ಪೊಲೀಸ್‌ ಬಂದೋಬಸ್ತ‌ನ್ನು ಮಾಡಲಾಗಿದೆ.

ಅಲ್ಲದೇ, ಟಿಪ್ಪು ಜಯಂತಿ ವೇಳೆ ಯಾವುದೇ ಮೆರವಣಿಗೆಗೆ ಅವಕಾಶವಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟ ಪಡಿಸಿದೆ. ಟಿಪ್ಪು ಜಯಂತಿಗೆ ತೀವ್ರ ವಿರೋಧ ಕೇಳಿಬರುತ್ತಿರುವ ಕೊಡಗಿನಲ್ಲಿ ಶನಿವಾರ ಸಂಜೆ 6ಗಂಟೆಯ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ.

Trending News