ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಪಿಎನ್ಬಿ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತಸುಬ್ರಹ್ಮಣ್ಯನ್ ಅವರನ್ನು ಕೇಂದ್ರ ಸರ್ಕಾರ ಸೇವೆಯಿಂದ ವಜಾಗೊಳಿಸಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದ್ದು, ಉಷಾ ಸುಬ್ರಹ್ಮಣ್ಯನ್ ಅವರನ್ನು ಬ್ಯಾಂಕ್ ಉದ್ಯೋಗಿ ಹುದ್ದೆಯಿಂದ ವಜಾ ಗೊಳಿಸಿರುವುದಾಗಿ ತಿಳಿಸಿದೆ.
ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಮೇ ತಿಂಗಳಲ್ಲಿ ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟ್ನಲ್ಲಿ, ವಜ್ರ ವ್ಯಾಪಾರಿ ನೀರವ್ ಮೋದಿ, ಮೆಹುಲ್ ಚೋಕ್ಸಿ ಹಾಗೂ ಉಷಾ ಸುಬ್ರಹ್ಮಣ್ಯನ್ ಸೇರಿದಂತೆ ಮೂವರು ಅಧಿಕಾರಿಗಳ ಹೆಸರನ್ನು ನಮೂದಿಸಲಾಗತ್ತು. ಈ ಸಂದರ್ಭದಲ್ಲಿ ಮೂರು ತಿಂಗಳ ಹಿಂದಷ್ಟೇ ಉಷಾ ಅವರನ್ನು ಅಲಹಬಾದ್ ಬ್ಯಾಂಕ್ ಮತ್ತು ಪಿಎನ್ ಬಿಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆದರೆ ಬ್ಯಾಂಕ್ ಉದ್ಯೋಗಿಯಾಗಿ ಮುಂದುವರೆದಿದ್ದರು. ಆದರೀಗ ಅವರನ್ನು ಸಂಪೂರ್ಣವಾಗಿ ಹುದ್ದೆಯಿಂದ ಕೇಂದ್ರ ಸರ್ಕಾರ ವಜಾ ಮಾಡಿದೆ.