ಬೂತ್ ಮಟ್ಟದ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜ ಹಾರಿಸುವಂತೆ ಅಮಿತ್ ಷಾ ಆದೇಶ

ಬೂತ್  ಮಟ್ಟದಲ್ಲಿ ಧ್ವಜ ಹಾರಾಡಿದರೆ ಏನು ಲಾಭ?

Last Updated : Nov 9, 2017, 11:55 AM IST
ಬೂತ್ ಮಟ್ಟದ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜ ಹಾರಿಸುವಂತೆ ಅಮಿತ್ ಷಾ ಆದೇಶ title=

ಬೆಂಗಳೂರು: ರಾಜ್ಯದ ಎಲ್ಲಾ ಬೂತ್ ಮಟ್ಟದ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜ ಹಾರಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯದ ನಾಯಕರು ಮತ್ತು ಕಾರ್ಯಕರ್ತರಿಗೆ ಖಡಕ್ ಆದೇಶ ನೀಡಿದ್ದಾರೆ. 

ರಾಜ್ಯದ ಎಲ್ಲಾ ಬೂತ್ ಮಟ್ಟದ ಅಧ್ಯಕ್ಷರ ಮನೆ ಮೇಲೆ ವಿಧಾನ ಸಭೆ ಚುನಾವಣೆ ಮುಗಿಯುವವರೆಗೂ ಬಿಜೆಪಿ ಧ್ವಜ ಹಾರಿಸುವುದು ಕಡ್ಡಾಯ ಎಂದು ಷಾ ಹೇಳಿದ್ದಾರೆ. ಇದರಿಂದ ಮತಗಳನ್ನು ಸೆಳೆಯುವುದು ಸುಲಭವಾಗುತ್ತದೆ ಎಂಬುದು ಷಾ ಉದ್ದೇಶ. ಅಮಿತ್ ಷಾ ಸೂಚನೆ ಮೇರೆಗೆ ಈಗಾಗಲೇ ಹಲವು ನಾಯಕರು ತಮ್ಮ ಮನೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಾಡಿಸುತ್ತಿದ್ದಾರೆ. ಅಲ್ಲದೆ, ಯಡಿಯೂರಪ್ಪ ನೇತೃತ್ವದ ನವಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆಯಲ್ಲೂ ಧ್ವಜಗಳು ರಾರಾಜಿಸುತ್ತಿವೆ. 

ಬೂತ್ ಮಟ್ಟದ ಅಧ್ಯಕ್ಷರ ಮನೆ ಮೇಲೆ ಧ್ವಜ ಹಾರಡುವುದಕ್ಕೂ, ಮುಂದಿನ ಚುನಾವಣೆಯಲ್ಲಿ ಮತಗಳನ್ನು ಸೆಳೆಯುವುದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ:

* ಮನೆ ಮೇಲೆ ಧ್ವಜ ರಾರಾಜಿಸುತ್ತಿದ್ದಾರೆ, ಆ ಪ್ರದೇಶದಲ್ಲಿ ಬಿಜೆಪಿ ಕಡೆ ಜನರ ಒಲವು ಮೂಡುತ್ತದೆ.

*  ಪಕ್ಷ ಸಂಘಟನೆಯ ಒತ್ತು ನೀಡುತ್ತದೆ.

* ಚುನಾವಣಾ ಪ್ರಚಾರದ ಉದ್ದೇಶಕ್ಕೆ ಅನುಕೂಲವಾಗುತ್ತದೆ.

* ಬೂತ್ ಮಟ್ಟದ ಕಾರ್ಯಕರ್ತರು ನೇರವಾಗಿ ಅಧ್ಯಕ್ಷರನ್ನು ಭೇಟಿ ಮಾಡಲು ಅನುಕೂಲವಾಗುತ್ತದೆ.

* ಬಿಜೆಪಿಯ 'ಕಾಂಗ್ರೇಸ್ ಮುಕ್ತ ಕರ್ನಾಟಕ' ಯೋಜನೆಗೆ ಇದು ಪ್ರಥಮ ಹೆಜ್ಜೆ ಎಂದು ಪಕ್ಷದ ಕಾರ್ಯಕರ್ತರು ಭಾವಿಸಿದ್ದಾರೆ.

ಈ ಎಲ್ಲಾ ಅಂಶಗಳು ಮುಂದಿನ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಚುನಾವಣೆಯ ನಂತರ ತಿಳಿಯಲಿದೆ.

Trending News