ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ 32 ಇಂಚಿನ ಈ Smart TV..!

Infinix 32 Y1 HD ಸ್ಮಾರ್ಟ್ ಟಿವಿ  ಅಗ್ಗದ ಬೆಲೆಗೆ ಸಿಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆಯೂ ಈ ಟಿವಿಯ ಬೆಲೆ ತುಂಬಾ ಕಡಿಮೆ ಇರುತ್ತದೆ ಎಂದೆ ಹೇಳಲಾಗಿತ್ತು.

Written by - Ranjitha R K | Last Updated : Jul 8, 2022, 03:11 PM IST
  • ಕಡಿಮೆ ಬೆಲೆಗೆ ಬರುತ್ತಿದೆ ಈ Smart TV
  • ಅತ್ಯಂತ ಕಡಿಮೆ ಬೆಲೆಯ ಟಿವಿ ಇದಾಗಿರಲಿದೆ
  • ಟಿವಿಯ ಬೆಲೆ ವೈಶಿಷ್ಟ್ಯ ಏನಿರಲಿದೆ ?
ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ 32 ಇಂಚಿನ ಈ Smart TV..! title=
Infinix 32 Y1 HD Smart TV (file photo)

ಬೆಂಗಳೂರು : Infinix ಶೀಘ್ರದಲ್ಲೇ ಭಾರತದಲ್ಲಿ ಹೊಸ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಲಿದೆ.  Infinix 32 Y1 HD ಸ್ಮಾರ್ಟ್ ಟಿವಿ ಶೀಘ್ರದಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ. ಜುಲೈ 12 ರಂದು ಭಾರತದಲ್ಲಿ ಈ ಟಿವಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ಮುಂಚಿತವಾಗಿ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಈ ಟಿವಿಯ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. 

Infinix 32 Y1 HD ಸ್ಮಾರ್ಟ್ ಟಿವಿ :
Infinix 32 Y1 HD ಸ್ಮಾರ್ಟ್ ಟಿವಿ  ಅಗ್ಗದ ಬೆಲೆಗೆ ಸಿಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆಯೂ ಈ ಟಿವಿಯ ಬೆಲೆ ತುಂಬಾ ಕಡಿಮೆ ಇರುತ್ತದೆ ಎಂದೆ ಹೇಳಲಾಗಿತ್ತು. Flipkartನ  microsite ಪ್ರಕಾರ, Infinix 32 Y1 HD ಬೆಜೆಲ್-ಲೆಸ್ ಡಿಸ್ಪ್ಲೇ ಹೊಂದಿದೆ.  ಡಾಲ್ಬಿ ಆಡಿಯೊದಿಂದ ಟ್ಯೂನ್ ಮಾಡಲಾದ 20W ಬಾಕ್ಸ್ ಸ್ಪೀಕರ್‌ಗಳೊಂದಿಗೆ ಸಜ್ಜುಗೊಂಡಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ : ಉಚಿತವಾಗಿ ಸಿಗುತ್ತಿದೆ iPhone 12! ಮಾಡಬೇಕಾಗಿರುವುದು ಇಷ್ಟೇ

Infinix 32 Y1 HD ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳು :
Infinix 32 Y1 HD ಪ್ರೈಮ್ ವಿಡಿಯೋ, Zee 5ನಂಥಹ  ಅನೇಕ ಪ್ರಿ ಇನ್ಸ್ಟಾಲ್ದ್ OTT ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. ಪ್ರಸ್ತುತ, Infinix 32 Y1 HD ಸ್ಮಾರ್ಟ್ ಟಿವಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಈ ಟಿವಿಯ ಬಿಡುಗಡೆ ಕಾರ್ಯಕ್ರಮ ಮುಂದಿನ ವಾರ ನಡೆಯಲಿದೆ. ಇದರ ಇತರ ಫೀಚರ್ ಮತ್ತು ಬೆಲೆಯನ್ನು  ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು.  

Infinix Note 12 5G ಸರಣಿ :
ಈ  ಬ್ರಾಂಡ್ ಭಾರತದಲ್ಲಿ ನೋಟ್ 12 5G ಸರಣಿಯನ್ನು ಬಿಡುಗಡೆ ಗೊಳಿಸಲು ಕೂಡಾ ಸಜ್ಜಾಗಿದೆ. ಸ್ಮಾರ್ಟ್‌ಫೋನ್ 108MP ಟ್ರಿಪಲ್ ರಿಯರ್ ಕ್ಯಾಮೆರಾಗಳು ಮತ್ತು ವಾಟರ್‌ಡ್ರಾಪ್ ನಾಚ್‌ನೊಂದಿಗೆ AMOLED ಡಿಸ್‌ಪ್ಲೇಯೊಂದಿಗೆ ಬರಲಿದೆ ಎನ್ನಲಾಗಿದೆ. 

ಇದನ್ನೂ ಓದಿ : Newly Wed Bride Google Search: ನವವಿವಾಹಿತ ವಧು ಗೂಗಲ್ ನಲ್ಲಿ ಹೆಚ್ಚು ಹುಡುಕುವುದೇನು ಗೊತ್ತಾ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News