ದಕ್ಷಿಣದ ಸಿನೆಮಾಗಳನ್ನು ರಿಮೇಕ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಬಾಲಿವುಡ್ ಚಿತ್ರಗಳಿವು ..!

ಬಾಲಿವುಡ್‌ನಲ್ಲಿ ಭಾರೀ ಸದ್ದು ಮಾಡಿ ಗೆದ್ದು ಬೀಗಿದ ಅದೆಷ್ಟೋ ಸಿನಿಮಾಗಳು ದಕ್ಷಿಣ ಭಾರತ ಸಿನೆಮಾದ ರಿಮೇಕ್ ಗಳಾಗಿವೆ. ಹೌದು ದಕ್ಷಿಣ ಭಾರತದ ಸಿನೆಮಾಗಳನ್ನು ರಿಮೇಕ್ ಮಾಡಿ ಹೆಸರು ಗಳಿಸಿದ ಬಾಲಿವುಡ್ ಚಿತ್ರಗಳ ಮಾಹಿತಿ ಇಲ್ಲಿದೆ. 

ಬೆಂಗಳೂರು : ದಕ್ಷಿಣ ಭಾರತದ ಚಿತ್ರಗಳೆಂದರೆ ಬಾಲಿವುಡ್ ಮಾತ್ರವಲ್ಲ  ಹಾಲಿವುಡ್ ಕೂಡಾ ತಿರುಗಿ ನೋಡುವಂತಾಗಿದೆ. ಒಂದರ ಹಿಂದೆ ಒಂದರಂತೆ ಅದ್ಭುತ ಚಿತ್ರಗಳು ದಕ್ಷಿಣ ಭಾರತದಿಂದ ಹೊರ ಹೊಮ್ಮುತ್ತಿದೆ. ಇದರಲ್ಲಿ ಕನ್ನಡ ಸಿನೆಮಾಗಳು ಸೇರಿವೆ ಎನ್ನುವುದು ಹೆಮ್ಮೆಯ ವಿಚಾರ. ಇನ್ನು ಬಾಲಿವುಡ್‌ನಲ್ಲಿ ಭಾರೀ ಸದ್ದು ಮಾಡಿ ಗೆದ್ದು ಬೀಗಿದ ಅದೆಷ್ಟೋ ಸಿನಿಮಾಗಳು ದಕ್ಷಿಣ ಭಾರತ ಸಿನೆಮಾದ ರಿಮೇಕ್ ಗಳಾಗಿವೆ. ಹೌದು ದಕ್ಷಿಣ ಭಾರತದ ಸಿನೆಮಾಗಳನ್ನು ರಿಮೇಕ್ ಮಾಡಿ ಹೆಸರು ಗಳಿಸಿದ ಬಾಲಿವುಡ್ ಚಿತ್ರಗಳ ಮಾಹಿತಿ ಇಲ್ಲಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಭೂಲ್ ಭುಲೈಯಾ: 2007 ರಲ್ಲಿ ಬಿಡುಗಡೆಯಾದ 'ಭೂಲ್ ಭುಲೈಯಾ' ಚಿತ್ರವು 1993 ರಲ್ಲಿ ಬಿಡುಗಡೆಯಾದ ಮಲಯಾಳಂ ಚಲನಚಿತ್ರ 'ಮಣಿಚಿರತಾಜು' ಚಿತ್ರದ ರಿಮೇಕ್ ಆಗಿತ್ತು. ಚಿತ್ರವು ಸಸ್ಪೆನ್ಸ್ ಮತ್ತು ಹಾರರ್‌ನೊಂದಿಗೆ ಹಾಸ್ಯದ ಛಾಯೆಯನ್ನು ಹೊಂದಿದ್ದು, ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. 

2 /6

ದೃಶ್ಯಂ:  ಬಾಲಿವುಡ್‌ನ ಅತ್ಯುತ್ತಮ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಲನಚಿತ್ರವನ್ನು ವೀಕ್ಷಿಸಲು ಬಯಸಿದರೆ 'ದೃಶ್ಯಂ' ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. 2015 ರಲ್ಲಿ ಬಿಡುಗಡೆಯಾದ ಈ ಚಿತ್ರವು ಮಲಯಾಳಂನ 'ದೃಶ್ಯಂ' ಚಿತ್ರದ ರಿಮೇಕ್ ಆಗಿತ್ತು. 

3 /6

ಜೆರ್ಸಿ: ತೆಲುಗು ಚಿತ್ರ 'ಜೆರ್ಸಿ' ಸ್ಪೋರ್ಟ್ಸ್ ಡ್ರಾಮಾ ಚಿತ್ರವಾಗಿದ್ದು, ಇದನ್ನು ಗೌತಮ್ ತಿನ್ನನೂರಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಶಾಹಿದ್ ಕಪೂರ್ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ, ಶಾಹಿದ್ ಕ್ರಿಕೆಟಿಗನ ಪಾತ್ರವನ್ನು ನಿರ್ವಹಿಸಿದ್ದಾರೆ. 

4 /6

ಕಬೀರ್ ಸಿಂಗ್: ಶಾಹಿದ್ ಕಪೂರ್ ಅಭಿನಯದ 'ಕಬೀರ್ ಸಿಂಗ್' ಚಿತ್ರ ಬಿಡುಗಡೆಯಾದಾಗ, ಜನರು ಶಾಹಿದ್ ಅವರ ಲುಕ್ ಮತ್ತು ನಟನೆಯನ್ನು ಬಹಳವಾಗಿ ಮೆಚ್ಚಿದರು. ಈ ಚಿತ್ರದಲ್ಲಿ ಶಾಹಿದ್ ಮತ್ತು ಕ್ಯಾರಾ ಜೋಡಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು.  ಆದರೆ ಈ ಚಿತ್ರವು ತೆಲುಗಿನ  'ಅರ್ಜುನ್ ರೆಡ್ಡಿ' ಚಿತ್ರದ ರಿಮೇಕ್ .'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ವಿಜಯ್ ದೇವರಕೊಂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

5 /6

ವಾಂಟೆಡ್ : ಈ ಚಿತ್ರವು ಸಲ್ಮಾನ್ ಖಾನ್ ಅವರ ವೃತ್ತಿಜೀವನಕ್ಕೆ ಹೊಸ  ಆಯಾಮವನ್ನೇ ನೀಡಿತ್ತು. ಈ ಚಿತ್ರದ ನಂತರ, ಸಲ್ಮಾನ್ ಅವರ ಅದೃಷ್ಟ ಬದಲಾಗಿತ್ತು ಎಂದರೂ ತಪ್ಪಲ್ಲ. ಪ್ರಭುದೇವ ನಿರ್ದೇಶನದ ಈ ಚಿತ್ರವು ತೆಲುಗಿನ 'ಪೋಕಿರಿ' ಚಿತ್ರದ ರಿಮೇಕ್. ಸಲ್ಮಾನ್ ಖಾನ್ ಅವರ ವೃತ್ತಿಜೀವನವನ್ನು ಮತ್ತೆ ಹಳಿಗೆ ಮರಳಿಸಿದ ಚಿತ್ರವಾಗಿತ್ತು ವಾಂಟೆಡ್.  

6 /6

ಗಜನಿ: ಅಮೀರ್ ಖಾನ್ ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಗುರುತನ್ನು ತಂದುಕೊಟ್ಟ ಸಿನಿಮಾ ‘ಗಜನಿ’. 2008 ರಲ್ಲಿ ಬಿಡುಗಡೆಯಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹಲವು ದಾಖಲೆಗಳನ್ನು ಮುರಿಯಿತು. ಚಿತ್ರದಲ್ಲಿ ಅಮೀರ್ ಖಾನ್ ಶಾರ್ಟ್ ಟರ್ಮ್ ಮೆಮೊರಿ ಲಾಸ್ ಖಾಯಿಲೆಯಿಂದ ಬಳಲುತ್ತಿರುವ ಉದ್ಯಮಿಯ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರ ತಮಿಳು ಚಿತ್ರರಂಗದ 'ಸೂರ್ಯ' ಚಿತ್ರದ ರಿಮೇಕ್ ಆಗಿದೆ.