Benefits of Asafoetida For High Blood Pressure Patients: ಸಾಮಾನ್ಯವಾಗಿ ಇಂಗನ್ನು ಪ್ರತಿಯೊಂದು ಮನೆಯಲ್ಲಿಯೂ ಕೂಡ ಬಳಸಲಾಗುತ್ತದೆ. ಆದರೆ ಅನಾದಿ ಕಾಲದಿಂದಲೂ ಇಂಗನ್ನು ಅನೇಕ ರೀತಿಯ ಮನೆಮದ್ದುಗಳಲ್ಲಿ ಬಳಸಲಾಗುತ್ತಿದೆ. ವಿಶೇಷವಾಗಿ ಹೊಟ್ಟೆಯ ಸಮಸ್ಯೆಗಳಿಗೆ ಇದೊಂದು ರಾಮಬಾಣ ಉಪಾಯ ಎಂದು ಪರಿಗಣಿಸಲಾಗುತ್ತದೆ. ಇದೇ ವೇಳೆ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೀವು ಇಂಗನ್ನು ಬಳಸಬಹುದು. ಅಧಿಕ ರಕ್ತದೊತ್ತಡವು ಇತ್ತೀಚಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ.ಇಂದು, ಪ್ರತಿಯೊಬ್ಬ ವ್ಯಕ್ತಿಯು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಇಂಗು ನಿಮಗೆ ಸಹಾಯ ಮಾಡುತ್ತದೆ. ಹೌದು, ಅಧಿಕ ರಕ್ತದೊತ್ತಡ ರೋಗಿಗಳಿಗೆ ಇಂಗು ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ರಕ್ತದೊತ್ತಡ ರೋಗಿಗಳು ಇಂಗುವನ್ನು ಈ ರೀತಿ ಬಳಸಬೇಕು-
ಆಹಾರದಲ್ಲಿ ಇಂಗು ಬಳಸಿ- ಇಂಗು ಬಳಸುವ ಅತ್ಯುತ್ತಮ ಮತ್ತು ಸರಳವಾದ ವಿಧಾನವೆಂದರೆ ಅದನ್ನು ನೀವು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಬೇಕು. ಇದಕ್ಕಾಗಿ ಮನೆಯಲ್ಲಿ ತಯಾರಿಸಿದ ಬೇಳೆಕಾಳುಗಳಿಂದ ಹಿಡಿದು ತರಕಾರಿಗಳಲ್ಲಿ ಇಂಗನ್ನು ಬಳಸಿ. ಇದರಿಂದ ನಿಮ್ಮ ಆಹಾರದ ರುಚಿಯೂ ಹೆಚ್ಚುತ್ತದೆ ಮತ್ತು ನಿಮ್ಮ ಬಿಪಿ ಕೂಡ ನಿಯಂತ್ರಣದಲ್ಲಿರುತ್ತದೆ.
ಇದನ್ನೂ ಓದಿ-Refrigerator: ಫ್ರಿಡ್ಜ್ನಲ್ಲಿ ಏನಿಡಬೇಕು? ಏನಿಡಬಾರದು? ಬಹುಮುಖ್ಯ ಮಾಹಿತಿ ಇಲ್ಲಿದೆ
ಜೇನುತುಪ್ಪ ಮತ್ತು ಒಣ ಶುಂಠಿಯೊಂದಿಗೆ ಇಂಗು- ರಕ್ತದೊತ್ತಡ ರೋಗಿಗಳು ಇಂಗನ್ನು ಜೇನುತುಪ್ಪ ಮತ್ತು ಒಣ ಶುಂಠಿಯ ಪುಡಿಯೊಂದಿಗೆ ಸೇವಿಸಬಹುದು. ಇದು ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಗಳಿಂದ ನಿಮಗೆ ಪರಿಹಾರವನ್ನು ನೀಡುತ್ತದೆ ಮತ್ತು ನಿಮ್ಮ ಬಿಪಿ ಸಹ ನಿಯಂತ್ರಣದಲ್ಲಿರುತ್ತದೆ.
ಇದನ್ನೂ ಓದಿ-ಪುರುಷರಲ್ಲಿ ಬಂಜೆತನ ಸಮಸ್ಯೆ: ಭಾರತದಲ್ಲಿ ಈ ಸಮಸ್ಯೆ ಹೆಚ್ಚಾಗಲು ಇದೆ 5 ಕಾರಣ!
ಅಜ್ವೈನ್ ಹಾಗೂ ಸೈಂಧವ ಲವಣದ ಜೊತೆಗೆ ಇಂಗಿನ ಬಳಕೆ- ನೀವು ಇಂಗುವನ್ನು ಚೂರ್ಣದ ರೂಪದಲ್ಲಿ ಕೂಡ ಬಳಸಬಹುದು. ಇದಕ್ಕಾಗಿ ನೀವು ಆಹಾರ ಸೇವಿಸಿದ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ಅರ್ಧ ಚಮಚ ಅಜ್ವೈನ್ ತೆಗೆದುಕೊಂಡು ಅದಕ್ಕೆ ಚಿಟಿಕೆ ಸೈಂಧವ ಲವಣ ಹಾಗೂ ಚಿಟಿಕೆ ಇಂಗನ್ನು ಬೆರೆಸಿ ಸೇವಿಸಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ, ಗ್ಯಾಸ್, ಅಧಿಕ ಬಿಪಿ ಸಮಸ್ಯೆ ನಿವಾರಣೆಯಾಗುವುದಲ್ಲದೆ, ಹೊಟ್ಟೆನೋವು ಶಮನವಾಗುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.