Video : ಕಾರಿಗೆ ಡಿಕ್ಕಿಯಾದ ಚಿರತೆ ಸತ್ತು ಹೋಯಿತು ಎಂದು ಕೊಳ್ಳುವಷ್ಟರಲ್ಲಿ ನಡೆದದ್ದು..!

ಇತ್ತೀಚಿಗೆ ನಡೆದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿ ಮಾಡಿದೆ. ಕಾರಿಗೆ ಡಿಕ್ಕಿ ಹೊಡೆದು ಚಿರತೆ ಗಾಯಗೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

Written by - Ranjitha R K | Last Updated : Jun 22, 2022, 02:41 PM IST
  • ಚಿರತೆಗೆ ಡಿಕ್ಕಿಯಾದ ಕಾರು
  • ಕಾರಿನಲ್ಲಿ ಸಿಲುಕಿ ಹಾಕಿಕೊಂಡ ಚಿರತೆ
  • ವೈರಲ್ ಆಯಿತು ವಿಡಿಯೋ
Video : ಕಾರಿಗೆ ಡಿಕ್ಕಿಯಾದ ಚಿರತೆ ಸತ್ತು ಹೋಯಿತು ಎಂದು ಕೊಳ್ಳುವಷ್ಟರಲ್ಲಿ ನಡೆದದ್ದು..! title=
Leopard Viral Video (photo twitter)

ಬೆಂಗಳೂರು : ಕೆಲವೊಮ್ಮೆ ರಸ್ತೆಗಳಲ್ಲಿ ಪ್ರಾಣಿಗಳು ಹಾದು ಹೋಗುತ್ತಿರುತ್ತವೆ. ಹೀಗೆ ವಾಹನಗಳು ಓಡಾಡುತ್ತಿರುವ ದಾರಿಯಲ್ಲಿ ಕಾಡು ಪ್ರಾಣಿಗಳು ಅಡ್ಡಲಾಗಿ ಬಂದಾಗ ಅಪಘಾತ ಸಂಭವಿಸುತ್ತವೆ. ಹೀಗಾದಾಗ ಅ ಮುಗ್ದ ಪ್ರಾಣಿಗಳು ತಮ್ಮ ಜೀವವನ್ನೇ ತೆರಬೇಕಾಗುತ್ತದೆ. ಇತ್ತೀಚಿಗೆ ನಡೆದ ಇಂಥದ್ದೇ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿ ಮಾಡಿದೆ. ಕಾರಿಗೆ ಡಿಕ್ಕಿ ಹೊಡೆದು ಚಿರತೆ ಗಾಯಗೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಐಎಎಫ್ ಅಧಿಕಾರಿ ಹಂಚಿಕೊಂಡ ವಿಡಿಯೋ  :

ಕಾರಿಗೆ ಡಿಕ್ಕಿಯಾದ ಚಿರತೆಯೊಂದನ್ನು ಈ ವಿಡಿಯೋದಲ್ಲಿ ಕಾಣಬಹುದು. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗವೂ ಸಂಪೂರ್ಣ ಜಖಂಗೊಂಡಿದೆ. ಕಾರಿನ ಬಾನೆಟ್ ಬಂಪರ್ ಅಡಿಯಲ್ಲಿ ಚಿರತೆಯ ಅರ್ಧ ಭಾಗ ಸಿಕ್ಕಿಹಾಕಿಕೊಂಡಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಇಷ್ಟಾದ ಮೇಲೆ ಚಿರತೆ ಬದುಕಿ ಉಳಿಯುವುದು ಕಷ್ಟ ಎಂದೇ ಅಲ್ಲಿದ್ದವರು ಭಾವಿಸಿದಂತಿದೆ. ಆ ಚಿರತೆ ಕಾರಿನಲ್ಲಿ ಸಿಲುಕಿ ಹಾಕಿಕೊಂಡಿರುವುದನ್ನು ನೋಡಿದರೆ ಎಂಥವರಿಗೂ ಕರುಳು ಚುರುಕೆನ್ನುತ್ತದೆ. ಈ ಸಂದರ್ಭದಲ್ಲಿ ಕಾರಿನ ಚಾಲಕ ಕಾರಿನ ರಿವರ್ಸ್ ಗೇರ್ ಹಾಕಿದ್ದಾನೆ. ಕೂಡಲೇ ಆಗ ಚಿರತೆ ಕಾರಿನಿಂದ ಚಂಗನೆ ಜಿಗಿದು ಕಾರಿನತ್ತ ಓಡಿದೆ. 

ಇದನ್ನೂ ಓದಿ : ಕಾಲೇಜು ಪ್ರಿನ್ಸಿಪಾಲ್‌ಗೆ ಕಪಾಳಮೋಕ್ಷ ಮಾಡಿದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್!

 

ವಿಡಿಯೋ ಶೇರ್ ಮಾಡಿರುವ ಸಿನಿಮಾ ನಟಿ : 
ಇದು ಮಹಾರಾಷ್ಟ್ರದ ಪುಣೆ ನಾಸಿಕ್ ಹೆದ್ದಾರಿಯ ವಿಡಿಯೋ ಎಂದು ಹೇಳಲಾಗುತ್ತಿದೆ. ಚಿತ್ರ ನಟಿ ರವೀನಾ ಟಂಡನ್ ಕೂಡ ಚಿರತೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ : Viral Video: ಭಾರೀ ಮಳೆ ಗಾಳಿ ಮಧ್ಯೆ ಪತ್ನಿ ಸಮೇತ ನಾಲೆಗೆ ಬಿದ್ದ ಪೋಲೀಸಪ್ಪ ..!

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News