Mutual Funds ಗಳಿಗೆ ಅಂತಾರಾಷ್ಟ್ರೀಯ ಸ್ಟಾಕ್ ಗಳಲ್ಲಿ ಹೂಡಿಕೆಗೆ ಅನುಮತಿ ನೀಡಿದ SEBI, ಹೂಡಿಕೆದಾರರಿಗೇನು ಲಾಭ?

Mutual Funds: ಉದ್ಯಮಕ್ಕೆ ಅಗತ್ಯವಿರುವ US $ 7 ಶತಕೋಟಿಯ ಒಟ್ಟು ಮಿತಿಯೊಳಗೆ ಈ ಹೂಡಿಕೆಯನ್ನು ಮಾಡಬಹುದು. ಅಂತಾರಾಷ್ಟ್ರೀಯ ಷೇರುಗಳ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  

Written by - Nitin Tabib | Last Updated : Jun 21, 2022, 07:47 PM IST
  • ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್‌ಗಳಿಗೆ ಅನುಮತಿ ನೀಡಿದ ಸೇಬಿ
  • ಈ ಹೂಡಿಕೆಯನ್ನು ಉದ್ಯಮಕ್ಕೆ ಅಗತ್ಯವಿರುವ ಒಟ್ಟು USD 7 ಶತಕೋಟಿ ಮಿತಿಯೊಳಗೆ ಮಾಡಬಹುದು.
  • ಅಂತಾರಾಷ್ಟ್ರೀಯ ಷೇರುಗಳ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Mutual Funds ಗಳಿಗೆ ಅಂತಾರಾಷ್ಟ್ರೀಯ ಸ್ಟಾಕ್ ಗಳಲ್ಲಿ ಹೂಡಿಕೆಗೆ ಅನುಮತಿ ನೀಡಿದ SEBI, ಹೂಡಿಕೆದಾರರಿಗೇನು ಲಾಭ? title=
Mutual Funds Investment In International Stocks

Mutual Funds: ಬಂಡವಾಳ ಮಾರುಕಟ್ಟೆ ನಿಯಂತ್ರಕ SEBI (SEBI) ಮತ್ತೆ ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್‌ಗಳಿಗೆ ಅನುಮತಿ ನೀಡಿದೆ.ಈ ಹೂಡಿಕೆಯನ್ನು ಉದ್ಯಮಕ್ಕೆ ಅಗತ್ಯವಿರುವ ಒಟ್ಟು USD 7 ಶತಕೋಟಿ ಮಿತಿಯೊಳಗೆ ಮಾಡಬಹುದು. ಅಂತಾರಾಷ್ಟ್ರೀಯ ಷೇರುಗಳ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಟಿಸಿರುವ ಒಂದು ವರದಿಯ ಪ್ರಕಾರ, ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡುವ ಯೋಜನೆಗಳಲ್ಲಿ ಹೊಸ ಗ್ರಾಹಕರನ್ನು ಸೇರಿಸಿಕೂಳ್ಳಲು ನಿಲ್ಲಿಸಲು ಜನವರಿಯಲ್ಲಿ SEBI ಮ್ಯೂಚುವಲ್ ಫಂಡ್ ಹೌಸ್ ಗಳಿಗೆ ಸೂಚನೆ ನೀಡಿತ್ತು.

ಏಕೆ ನಿಲ್ಲಿಸಲಾಗಿತ್ತು?
ವರದಿಗಳ ಪ್ರಕಾರ, ಮ್ಯೂಚುವಲ್ ಫಂಡ್ ಉದ್ಯಮವು ಪ್ರಮುಖವಾಗಿ ವಿದೇಶಿ ಹೂಡಿಕೆಗೆ ಅಗತ್ಯವಿರುವ US $ 7 ಶತಕೋಟಿ ಮಿತಿಯನ್ನು ದಾಟಿದ ಕಾರಣ ಹೊಸ ಗ್ರಾಹಕರ ಸೃಷ್ಟಿಯನ್ನು ನಿಲ್ಲಿಸಲು ನಿರ್ದೇಶನಗಳನ್ನು ನೀಡಲಾಗಿತ್ತು. ಜಾಗತಿಕ ಷೇರುಗಳಲ್ಲಿನ ಇತ್ತೀಚಿನ ಕುಸಿತವು ಎಲ್ಲಾ ಮ್ಯೂಚುವಲ್ ಫಂಡ್ ಹೌಸ್‌ಗಳು ಒಟ್ಟಾಗಿ ಮಾಡಿದ ಹೂಡಿಕೆಗಳ ಸಂಚಿತ ಮೌಲ್ಯವನ್ನು ಕಡಿಮೆ ಮಾಡಿದೆ.

ವಿದೇಶಿ ಹೂಡಿಕೆಯನ್ನು ಫೆಬ್ರವರಿ ಮಟ್ಟಕ್ಕೆ ಸೀಮಿತಗೊಳಿಸಲು ಸೂಚನೆಗಳು
ಶುಕ್ರವಾರದಂದು Amfi ಗೆ ಕಳುಹಿಸಿರುವ ಸಂದೇಶದಲ್ಲಿ SEBI, ಮ್ಯೂಚುವಲ್ ಫಂಡ್ ಯೋಜನೆಗಳು ಫೆಬ್ರವರಿ 1, 2022 ರಂದು ವಿದೇಶಿ ಹೂಡಿಕೆ ಮತ್ತು ವಿದೇಶಿ ಹೂಡಿಕೆಯ ಮಿತಿಯನ್ನು ಉಲ್ಲಂಘಿಸದೆ ಮ್ಯೂಚುವಲ್ ಫಂಡ್ ಮಟ್ಟದಲ್ಲಿ ಚಂದಾದಾರಿಕೆಯನ್ನು ಪುನರಾರಂಭಿಸಬಹುದು. ಫಂಡ್‌ಗಳು/ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಬಹುದು. ನಿಯಂತ್ರಕರು ಅಸೋಸಿಯೇಷನ್ ​​ಆಫ್ ಮ್ಯೂಚುಯಲ್ ಫಂಡ್ಸ್ ಆಫ್ ಇಂಡಿಯಾ (Amfi) ಗೆ ಪ್ರತಿ AMC ಅಥವಾ ಮ್ಯೂಚುಯಲ್ ಫಂಡ್‌ನಿಂದ ವಿದೇಶಿ ಹೂಡಿಕೆಯನ್ನು ಫೆಬ್ರವರಿ ಮಟ್ಟಕ್ಕೆ ನಿರ್ಬಂಧಿಸಲಾಗಿದೆ ಎಂಬುದನ್ನು ಸುನಿಶ್ಚಿತಗೊಳಿಸಲು ಕೇಳಿಕೊಂಡಿದೆ.

ಇದನ್ನೂ ಓದಿ-Costliest Tea: ಇದುವೇ ದೇಶದ ಅತ್ಯಂತ ದುಬಾರಿ ಟೀ, ಒಂದು ಕಿಲೋ ಬೆಲೆ ಐಫೋನ್ 13ಗೆ ಸಮ

ಮ್ಯೂಚುಯಲ್ ಫಂಡ್‌ಗಳಿಗೆ ನಾಮನಿರ್ದೇಶನ ಅಗತ್ಯವಿದೆ
SEBI ಈಗ ಮ್ಯೂಚುವಲ್ ಫಂಡ್‌ಗಳಿಗೂ ನಾಮನಿರ್ದೇಶನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ. SEBI ಹೊರಡಿಸಿದ ಸುತ್ತೋಲೆಯ ಪ್ರಕಾರ, ಆಗಸ್ಟ್ 1, 2022 ರಿಂದ, ಮ್ಯೂಚುವಲ್ ಫಂಡ್‌ಗಳಿಗೆ ಸೇರುವ ಎಲ್ಲಾ ಹೊಸ ಹೂಡಿಕೆದಾರರಿಗೆ ನಾಮನಿರ್ದೇಶನ ಫಾರ್ಮ ಅಥವಾ ಆಪ್ಟ್ ಔಟ್ ಡಿಕ್ಲೆರೇಶನ್ ಫಾರ್ಮ್ ಆಯ್ಕೆಯನ್ನು ಕಡ್ಡಾಯಗೊಳಿಸಿದೆ.

ಇದನ್ನೂ ಓದಿ-7th pay commission: ಕೇಂದ್ರ ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್, ಜುಲೈ ತಿಂಗಳಿನಲ್ಲಿ ಶೇ.6 ರಷ್ಟು ಡಿಎ ಹೆಚ್ಚಳ!

SEBI ಸುತ್ತೋಲೆಯ ಪ್ರಕಾರ, ಅಸ್ತಿತ್ವದಲ್ಲಿರುವ ಎಲ್ಲಾ ಮ್ಯೂಚುವಲ್ ಫಂಡ್ ಹೂಡಿಕೆದಾರರ ನಾಮನಿರ್ದೇಶನ ಅಥವಾ ಆಪ್ಟ್ ಔಟ್ ಡಿಕ್ಲೆರೇಶನ್ ಪ್ರಕ್ರಿಯೆಯು ಮಾರ್ಚ್ 31, 2023 ರೊಳಗೆ ಪೂರ್ಣಗೊಳ್ಳಬೇಕು. ಇಲ್ಲದಿದ್ದರೆ, ಮ್ಯೂಚುವಲ್ ಫಂಡ್ ಖಾತೆಯನ್ನು ಫ್ರೀಜ್ ಮಾಡಲಾಗುವುದು ಎಂಬ ಕಟ್ಟುನಿಟ್ಟಿನ ಆದೇಶ ನೀಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News