ಹೈದರಾಬಾದ್ : ಸಿನಿಮಾ ಸಾಂಗ್, ಡಾನ್ಸ್ ಮೂಲಕ ಸುದ್ದಿಯಲ್ಲಿರುತ್ತಿದ್ದ ಬಹು ಭಾಷಾ ನಟಿ ಸಾಯಿ ಪಲ್ಲವಿ ಈಗ ವಿವಾದದ ಮೂಲಕ ಸುದ್ದಿಯಾಗಿದ್ದಾರೆ. ಇತ್ತೀಚಿಗೆ ತಮ್ಮ ಹೊಸ ಸಿನಿಮಾ ‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದ ವೇಳೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಬಗ್ಗೆ ಮಾತನಾಡಿದ್ದರು. ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಎರಡೂ ಒಂದೇ ಅಲ್ಲವೇ? ಎಂದು ಸಾಯಿ ಪಲ್ಲವಿ ಪ್ರಶ್ನಿಸಿದ್ದರು. ಇದೀಗ ಇದೇ ಮಾತಿನಿಂದ ಸಾಯಿ ಪಲ್ಲವಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.
ಸಾಯಿ ಪಲ್ಲವಿ ವಿರುದ್ಧ ಇದೀಗ ದೂರು ದಾಖಲಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆಗೆ ಗೋವು ಕಳ್ಳಸಾಗಾಣಿಕೆಯನ್ನು ಹೋಲಿಸಿ ಮಾತನಾಡಿರುವ ಸಾಯಿ ಪಲ್ಲವಿ ಅವರ ವಿರುದ್ಧ ಭಜರಂಗ ದಳದ ನಾಯಕರು ದೂರು ನೀಡಿದ್ದಾರೆ. ಹೈದರಾಬಾದ್‌ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂದರ್ಶನದ ವಿಡಿಯೋದಲ್ಲಿ ಏನಿದೆ, ಸಾಯಿ ಪಲ್ಲವಿ ಏನು ಹೇಳಿದ್ದಾರೆ ಅಂತ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ʼಸೋರುತಿಹುದು ಮನಿಯ ಮಾಳಿಗೆʼ ಎನ್ನುತ್ತಾ ಹವಾ ಸೃಷ್ಟಿಸೋಕೆ ಬಂದ್ರು ALL OK
ಸಾಯಿ ಪಲ್ಲವಿ ಹೇಳಿದ್ದೇನು?
ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಸಾಯಿ ಪಲ್ಲವಿ, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ರಿಲೀಸ್ ಆದಾಗ ಕಾಶ್ಮೀರಿ ಪಂಡಿತರನ್ನು ಕೊಂದರು, ಹತ್ಯೆ ಮಾಡಿದರು ಅಂತ ಹೇಳಲಾಯ್ತು. ಅದನ್ನು ಧಾರ್ಮಿಕ ಸಂಘರ್ಷವಾಗಿ ನೋಡಲಾಯ್ತು. ಕೊರೊನಾ ಸಮಯದಲ್ಲಿ ಯಾವುದೋ ಹಸುವನ್ನು ವಾಹನದಲ್ಲಿ ಹಾಕಿಕೊಂಡು ಹೋಗಲಾಯ್ತು. ಆ ವಾಹನ ಓಡಿಸುತ್ತಿದ್ದವರು ಮುಸ್ಲಿಂ ಆಗಿದ್ದರು. ಹೀಗಾಗಿ ಅವರನ್ನು ಜೈ ಶ್ರೀರಾಮ್ ಅಂತ ಹೇಳಿಕೊಂಡು ಹೊಡೆಯಲಾಯ್ತು. ಅದಕ್ಕೂ ಇದಕ್ಕೂ ಏನು ವ್ಯತ್ಯಾಸವಿದೆ? ನಾವು ಒಳ್ಳೆಯವರಾಗಿರಬೇಕು, ಅದನ್ನು ಧಾರ್ಮಿಕವಾಗಿ ವರ್ಗೀಕರಣ ಮಾಡಬಾರದು. ನಾವು ಒಳ್ಳೆಯವರಾಗಿದ್ದರೆ, ಬೇರೆಯವರಿಗೆ ಬೇಜಾರು ಆಗುವುದಿಲ್ಲ. ನೀವು ನನಗಿಂತ ಬಲಶಾಲಿಯಾಗಿದ್ದರೆ, ನೀವು ನನ್ನ ಮೇಕೆ ದಬ್ಬಾಳಿಕೆ ಮಾಡುತ್ತಿದ್ದರೆ, ನೀವು ತಪ್ಪು ಮಾಡುತ್ತಿದ್ದೀರಿ ಎಂದು ನಾನು ನಂಬುತ್ತೇನೆ. ಹೆಚ್ಚಿನ ಸಂಖ್ಯೆಯ ಜನರು ಸಣ್ಣ ಗುಂಪಿನ ಮೇಲೆ ದಬ್ಬಾಳಿಕೆ ಮಾಡುವುದು ತಪ್ಪು. ಇಬ್ಬರು ಸಮಾನರ ನಡುವೆ ಯುದ್ಧ ನಡೆಯಬೇಕು" ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಟ ಪ್ರಭಾಸ್‌ಗೆ ಕೂಡಿಬಂದ ಕಂಕಣ ಭಾಗ್ಯ: ಬಾಹುಬಲಿ ಕೈಹಿಡಿಯೋ ದೇವಸೇನಾ ಇವರೇ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.