ದೇವಾನುದೇವತೆಗಳ ಆರಾಧನೆಯ ಮಹತ್ವವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮನೆಯಲ್ಲಿನ ಪೂಜೆಯ ಕೆಲವು ನಿಯಮಗಳನ್ನೂ ಹೇಳಲಾಗಿದೆ. ಪೂಜೆ ಮಾಡುವಾಗ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದಿದ್ದರೆ ಪೂಜೆಯ ಪೂರ್ಣ ಫಲ ಸಿಗುವುದಿಲ್ಲ ಅಷ್ಟೇ ಅಲ್ಲದೆ, ದೇವತೆಗಳೂ ಕೋಪಗೊಳ್ಳುತ್ತಾರೆ. ನಿತ್ಯವೂ ಭಕ್ತಿಯಿಂದ ಪೂಜೆ ಮಾಡಿದರೆ ಮತ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಂಡರೆ ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕತೆ ಬೆಳೆಯುತ್ತದೆ ಎಂದು ನಂಬಲಾಗಿದೆ.
ಈ ನಿಯಮಗಳ ಬಗ್ಗೆ ಕಾಳಜಿ ವಹಿಸದಿದ್ದರೆ, ಬಡತನವು ಮನೆಯಲ್ಲಿ ಕಂಡುಬರುತ್ತದೆ. ಮನೆಯಲ್ಲಿ ನಕಾರಾತ್ಮಕತೆ ಹರಡುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಆರಾಧನೆಯ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ತಪ್ಪಾಗಿಯೂ ನೆಲದ ಮೇಲೆ ಇಡಬಾರದು.
ಇದನ್ನೂ ಓದಿ: ಗಾಂಧಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಅವರೆಲ್ಲಾ ಗಾಂಧಿಗಳೇ?: ರಾಹುಲ್ ವಿರುದ್ಧ ಬಿಜೆಪಿ ಕಿಡಿ
ಶಂಖ: ಶಂಖಕ್ಕೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವಿದೆ. ಪೂಜೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಶಂಖವನ್ನು ಊದುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಶಂಖವು ಸಮುದ್ರ ಮಂಥನದ ಸಮಯದಲ್ಲಿ ಹುಟ್ಟಿಕೊಂಡಿದೆ. ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿಯ ಬಳಿ ಶಂಖವನ್ನು ಇಡುವುದರಿಂದ ತಾಯಿಗೆ ಸಂತೋಷವಾಗುತ್ತದೆ ಮತ್ತು ವ್ಯಕ್ತಿಯ ಮನೆಯಲ್ಲಿ ಸಂತೋಷ -ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಶಂಖವನ್ನು ನೆಲದ ಮೇಲೆ ಇಡಬೇಡಿ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ಅವಮಾನಿತಳಾಗಿ ಕೋಪಗೊಂಡು ಮನೆ ಬಿಟ್ಟು ಹೋಗುತ್ತಾಳೆ ಎನ್ನಲಾಗುತ್ತದೆ.
ದೀಪದ ಪೂಜೆ: ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿಯು ನಿಯಮಿತವಾಗಿ ಮನೆಯಲ್ಲಿ ದೀಪವನ್ನು ಬೆಳಗಿಸಿದರೆ, ಅದು ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಮುಖ್ಯವಾಗಿ ದೀಪವನ್ನು ದೇವರ ಕೋಣೆಯಲ್ಲಿ ತಟ್ಟೆಯ ಮೇಲೆ ಇಡಬೇಕು. ನೆಲದ ಮೇಲೆ ಇಟ್ಟರೆ ಅದು ದೇವತೆಯನ್ನು ಅವಮಾನಿಸಿದಂತೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಪೂಜೆಯ ಹೂವುಗಳು, ಮಾಲೆಗಳು ಅಥವಾ ಪೂಜಾ ಸಾಮಗ್ರಿ ಇತ್ಯಾದಿಗಳನ್ನು ನೆಲದ ಮೇಲೆ ಇಡಬಾರದು.
ರತ್ನದ ಆಭರಣಗಳು: ರತ್ನದ ಕಲ್ಲುಗಳು ಕೆಲವು ಗ್ರಹಗಳಿಗೆ ಸಂಬಂಧಿಸಿವೆ. ಹೀಗಾಗಿಯೇ ರತ್ನಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ರತ್ನಗಳಿಂದ ಮಾಡಿದ ಆಭರಣಗಳನ್ನು ನೆಲದ ಮೇಲೆ ಇಡುವುದು ಅಶುಭ. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಅಶುಭ ಫಲಿತಾಂಶಗಳು ಕಂಡುಬರುತ್ತವೆ. ಈ ಕಾರಣದಿಂದಾಗಿ, ಸಂಪತ್ತು ಮತ್ತು ಕುಟುಂಬದ ಪ್ರಗತಿಗೆ ಸಂಬಂಧಿಸಿದಂತೆ ಅನೇಕ ರೀತಿಯ ಅಡೆತಡೆಗಳನ್ನು ಎದುರಿಸಬೇಕಾಗಬಹುದು.
ಇದನ್ನೂ ಓದಿ: ಜುಲೈ 12 ರಿಂದ ಈ ರಾಶಿಯವರು ಜಾಗರೂಕರಾಗಿರಬೇಕು, ಶನಿ ದೇವ ನೀಡಲಿದ್ದಾನೆ ಸಂಕಷ್ಟ
ದೇವರ ವಿಗ್ರಹ: ಶಾಸ್ತ್ರಗಳ ಪ್ರಕಾರ ದೇವರ ವಿಗ್ರಹಗಳನ್ನು ನೆಲದ ಮೇಲೆ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿಯನ್ನು ಕಳೆದುಹೋಗುತ್ತದೆ. ದೇವರ ಕೋಣೆಯನ್ನು ಶುಚಿಗೊಳಿಸುವ ಸಮಯದಲ್ಲಿ, ವಿಗ್ರಹಗಳನ್ನು ಪಟ್ಟ ಅಥವಾ ತಟ್ಟೆಯಲ್ಲಿಡಬೇಕು
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.