ನವದೆಹಲಿ: ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದು ಯಾವಾಗಲೂ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಉಳಿದು ಹಣ ಹರಿದುಬರುತ್ತದೆ. ಮನಿ ಪ್ಲಾಂಟ್ ಹೆಸರೇ ಸೂಚಿಸುವಂತೆ ಹಣದ ಗಿಡ. ಈ ಮರದ ಮೇಲೆ ಹಣ ಬೆಳೆಯದಿದ್ದರೂ ಇದರಿಂದ ಅನೇಕ ಪ್ರಯೋಜನಗಳಿವೆ. ವಾಸ್ತು ಪ್ರಕಾರ ಮನೆಯಲ್ಲಿ ನೆಡುವ ಮನಿ ಪ್ಲಾಂಟ್ ವಿಚಾರದಲ್ಲಿ ನೀವು ಕೆಲವು ನಿಯಮಗಳನ್ನು ಅನುಸರಿಸಿದಾಗ ಮಾತ್ರ ಬಯಸಿದ ಫಲಿತಾಂಶ ಲಭಿಸುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಹಗ್ಗ ಅಥವಾ ಕೋಲಿನ ಸಪೋರ್ಟ್ ಇರಲಿ
ವಾಸ್ತು ಪ್ರಕಾರ ನೀವು ಮನೆಯಲ್ಲಿ ಒಂದು ಕುಂಡದಲ್ಲಿ ಮನಿ ಪ್ಲಾಂಟ್ ಅನ್ನು ನೆಟ್ಟಾಗ, ಅದಕ್ಕೆ ಹಗ್ಗ ಅಥವಾ ಕೋಲನ್ನು ಸಪೋರ್ಟ್ ಆಗಿರಿಸಿ. ಹೀಗೆ ಮಾಡುವುದರಿಂದ ಆ ಗಿಡದ ಎಲೆಗಳು ಮೇಲಕ್ಕೆ ಚಲಿಸಲು ಪ್ರಾರಂಭಿಸುತ್ತವೆ ಮತ್ತು ನಿಮ್ಮ ಆರ್ಥಿಕ ಮಟ್ಟವೂ ಮೇಲಕ್ಕೆ ಏರುತ್ತದೆ.
ಸನಾತನ ಧರ್ಮದ ಪ್ರಕಾರ ನೀವು ಮನಿ ಪ್ಲಾಂಟ್‌ನಿಂದ ಬಯಸಿದ ಫಲ ಪಡೆಯಲು ಬಯಸಿದರೆ, ಅದಕ್ಕೆ ನೀರನ್ನು ಒದಗಿಸುವಾಗ ಕೆಲವು ಹನಿ ಹಾಲನ್ನು ಸೇರಿಸಿ. ಈ ರೀತಿ ಮಾಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಮತ್ತು ಸ್ಥಗಿತವಾಗಿರುವ ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ: Neem Remedies: ಬೇವಿನ ಮರದ ಈ ಉಪಾಯಗಳು ನಿಮಗೆ ಕೇತು, ಶನಿ ಹಾಗೂ ಪಿತೃದೋಷದಿಂದ ಮುಕ್ತಿ ನೀಡುತ್ತವೆ
ಗಾಜಿನ ಬಾಟಲಿಯಲ್ಲಿ ಮನಿ ಪ್ಲಾಂಟ್ ನೆಡಬಾರದು
ವಾಸ್ತು ಪ್ರಕಾರ ಮನಿ ಪ್ಲಾಂಟ್ನ ಗಿಡವನ್ನು ಕದ್ದು ನೆಡಬಾರದು. ಹೀಗೆ ಮಾಡುವುದರಿಂದ ಆ ಗಿಡದಿಂದ ಯಾವುದೇ ಪ್ರಯೋಜನ ಲಭಿಸುವುದಿಲ್ಲ. ಮನಿ ಪ್ಲಾಂಟ್‌ನ ಸಸ್ಯವನ್ನು ಅಪ್ಪಿ-ತಪ್ಪಿಯೂ ಗಾಜಿನ ಬಾಟಲಿಯಲ್ಲಿ ನೆಡಬಾರದು. ಇದಕ್ಕೆ ಕಾರಣ ಗಿಡವನ್ನು ಗಾಜಿನ ಬಾಟಲಿಯಲ್ಲಿ ನೆಡುವುದರಿಂದ ಅದರ ಬೇರುಗಳಿಗೆ ಹರಡುವಷ್ಟು ಜಾಗ ಸಿಗುವುದಿಲ್ಲ. ಹೀಗಾಗಿ ನೀವು ಇದರ ಬಗ್ಗೆ ವಿಶೇಷ ಗಮನಹರಿಸಬೇಕು. ನೀವು ಮನಿ ಪ್ಲಾಂಟ್ ನೆಡುತ್ತಿದ್ದರೆ ಅದು ಎಂದಿಗೂ ಒಣಗಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಮನಿ ಪ್ಲಾಂಟ್ ಸಸ್ಯಗಳು ಒಣಗಬಾರದು.
ಒಳಾಂಗಣದಲ್ಲಿ ಮನಿ ಪ್ಲಾಂಟ್ ನೆಡುವುದು
ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ನ ಗಿಡವನ್ನು ಸಾಮಾನ್ಯವಾಗಿ ಮನೆಯೊಳಗೆ ನೆಡಬೇಕು. ಇದಕ್ಕೆ ಕಾರಣವೆಂದರೆ ಹೊರಗಿನಿಂದ ಬರುವ ಅತಿಥಿಗಳು ಆ ಗಿಡ ಬೆಳೆಯುವುದನ್ನು ನೋಡಿ ಅಸೂಯೆ ಪಡಬಹುದು ಮತ್ತು ಆ ಸಸ್ಯವನ್ನು ನೋಡುವುದರಿಂದ ಅದು ಒಣಗಬಹುದು. ಮನಿ ಪ್ಲಾಂಟ್ ಅನ್ನು ಎಂದಿಗೂ ಇತರರಿಗೆ ಉಡುಗೊರೆಯಾಗಿ ನೀಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ: Drying Plants Indication: ತುಳಸಿಯಂತೆಯೇ ಈ ಸಸ್ಯಗಳ ಒಣಗುವಿಕೆ ಕೂಡ ಶುಭ ಸಂಕೇತಗಳನ್ನು ನೀಡುತ್ತವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.