Airtel Big Shock: ತನ್ನ ಹಲವು ಯೋಜನೆಗಳಿಂದ ಈ ಮಹತ್ವದ ಸೇವೆಯನ್ನು ತೆಗೆದುಹಾಕಿ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಏರ್ಟೆಲ್

Airtel Recharge Plan - ಕಂಪನಿ ತನ್ನ ಬಹುತೇಕ ಯೋಜನೆಗಳಲ್ಲಿ ನೀಡುತ್ತಿದ್ದ ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಎಡಿಷನ್ ಅನ್ನು ತೆಗೆದುಹಾಕಿದೆ. 2021 ರಿಂದ ಕಂಪನಿ ತನ್ನ ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳ ಅಡಿ ಈ ಸೌಕರ್ಯವನ್ನು ಒದಗಿಸಿತ್ತು.  

Written by - Nitin Tabib | Last Updated : Jun 7, 2022, 02:40 PM IST
  • ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
  • ಕಂಪನಿ ತನ್ನ ಬಹುತೇಕ ಯೋಜನೆಗಳಲ್ಲಿ ನೀಡುತ್ತಿದ್ದ ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಎಡಿಷನ್ ಅನ್ನು ತೆಗೆದುಹಾಕಿದೆ.
  • 2021 ರಿಂದ ಕಂಪನಿ ತನ್ನ ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳ ಅಡಿ ಈ ಸೌಕರ್ಯವನ್ನು ಒದಗಿಸಿತ್ತು.
Airtel Big Shock: ತನ್ನ ಹಲವು ಯೋಜನೆಗಳಿಂದ ಈ ಮಹತ್ವದ ಸೇವೆಯನ್ನು ತೆಗೆದುಹಾಕಿ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಏರ್ಟೆಲ್  title=
Airtel Prepaid Plans

Airtel Prepaid Plans - ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಕಂಪನಿ ತನ್ನ ಬಹುತೇಕ ಯೋಜನೆಗಳಲ್ಲಿ ನೀಡುತ್ತಿದ್ದ ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಎಡಿಷನ್ ಅನ್ನು ತೆಗೆದುಹಾಕಿದೆ. 2021 ರಿಂದ ಕಂಪನಿ ತನ್ನ ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳ ಅಡಿ ಈ ಸೌಕರ್ಯವನ್ನು ಒದಗಿಸಿತ್ತು. ಈ ಸೌಕರ್ಯದ ಅಡಿ ಕಂಪನಿ ತನ್ನ ರೀಚಾರ್ಜ್ ಯೋಜನೆಗಳ ಜೊತೆಗೆ ಬಳಕೆದಾರರಿಗೆ ಅಮೆಜಾನ್ ಪ್ರೈಮ್ ಮೊಬೈಲ್ ನ ಒಂದು ತಿಂಗಳ ಉಚಿತ ಪ್ರಯೋಗವನ್ನು ನೀಡುತ್ತಿತ್ತು. ಇದರಿಂದ ಬಳಕೆದಾರರು ಚಲನಚಿತ್ರಗಳನ್ನು, ವೆಬ್ ಸೀರೀಸಗಳನ್ನು ಮತ್ತು ಟಿವಿ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಾಗುತ್ತಿತ್ತು.

ಈ ಯೋಜನೆಗಳಿಂದ ಪ್ರೈಮ್ ವೀಡಿಯೊ ಟ್ರಯಲ್ ಅನ್ನು ತೆಗೆದುಹಾಕಿದ ಏರ್ಟೆಲ್
ಟೆಲಿಕಾಂ ಟಾಕ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಏರ್ಟೆಲ್ ಇದೀಗ ಕೇವಲ ಎರಡು ಯೋಜನೆಗಳಿಗೆ ಮಾತ್ರ ಈ ಸೇವಯನ್ನು ಸೀಮಿತ ಗೊಳಿಸಿದೆ. ಈ ಯೋಜನೆಗಳಲ್ಲಿ ರೂ.350 ಮತ್ತು ರೂ. 108 ಶಾಮೀಲಾಗಿವೆ. ಈ ಸೌಕರ್ಯವನ್ನು ಬಳಸಿ ಕೇವಲ ಮೊಬೈಲ್ ಗಳಲ್ಲಿ ಮಾತ್ರ ಅಮೆಜಾನ್ ಪ್ರೈಮ್ ವೀಡಿಯೊ ನೋಡಬಹುದಾಗಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಅಷ್ಟೇ ಅಲ್ಲ ಕೇವಲ ಓರ್ವ ಬಳಕೆದಾರರಿಗೆ ಒಂದೇ ಬಾರಿ ಈ ಅವಕಾಶ ಸಿಗುತ್ತಿತ್ತು. 

ಇದನ್ನೂ ಓದಿ-Cheapest Fiber Broadband Plan: ಅತ್ಯಂತ ಅಗ್ಗದ ದರದಲ್ಲಿ ಹಲವು OTTಗಳ ಉಚಿತ ಚಂದಾದರಿಕೆ, 100 ಎಂಬಿಪಿಎಸ್ ವೇಗದ ಇಂಟರ್ನೆಟ್ ಸೇವೆ ಒದಗಿಸುವ ಯೋಜನೆ ಇದು

ರೂ. 359 ರ ಯೋಜನೆಯಲ್ಲಿ 28 ದಿನಗಳವರೆಗೆ ನಿತ್ಯ 2 ಜಿಬಿ ಡೇಟಾ ನೀಡಲಾಗುತ್ತದೆ. ಅನಿಯಮಿತ ಧ್ವನಿ ಕರೆ ಹಾಗೂ 100 ಉಚಿತ ಎಸ್ಎಂಎಸ್ ಸೌಲಭ್ಯಗಳನ್ನು ಈ ಯೋಜನೆ ಒಳಗೊಂಡಿದೆ. ಈ ಸೇವಗಳ ಜೊತೆಗೆ ಉಚಿತ ಹಲೋ ಟ್ಯೂನ್, ವಿಂಕ್ ಮ್ಯೂಸಿಕ್ ಹಾಗೂ Xtreame ಮೊಬೈಲ್ ಪ್ಯಾಕ್ ಸೇರಿದಂತೆ 28 ದಿನಗಳವರೆಗೆ ಪ್ರೈಮ್ ವೀಡಿಯೊನ ಉಚಿತ ಟ್ರಯಲ್ ಸಿಗುತ್ತದೆ.

ಇದನ್ನೂ ಓದಿ-BSNL ಗಿಂತ ಹಲವು ಪಟ್ಟು ಅಗ್ಗದ ದರದಲ್ಲಿದೆ ಈ ಇಂಟರ್ನೆಟ್ ಪ್ಲಾನ್, ನಿತ್ಯ ₹ 29 ಕ್ಕೆ 300 Mbps ವೇಗದ ಇಂಟರ್ನೆಟ್

ರೂ. 108ರ ಯೋಜನೆ ಒಂದು ಡೇಟಾ ಪ್ಯಾಕ್ ಯೋಜನೆಯಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳ ವ್ಯಾಲಿಡಿಟಿಯನ್ನು ಆಧರಿಸಿರಲಿದೆ. ಈ ಯೋಜನೆಯಲ್ಲಿ ಒಟ್ಟು 6ಜಿಬಿ ಡೇಟಾ ಸಿಗುತ್ತದೆ. ಇದಲ್ಲದೆ ಫ್ರೀ ಹಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್ ಹಾಗೂ 30 ದಿನಗಳವರೆಗೆ ಉಚಿತ ಪ್ರೈಮ್ ವೀಡಿಯೊ ಟ್ರಯಲ್ ಕೂಡ ಸಿಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News