ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಾವರ ಗ್ರಾಮದಲ್ಲಿ ಚಿರತೆಯೊಂದು ಬಾವಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ನಾವರ ಗ್ರಾಮದ ಜಾಲ ಎಂಬಲ್ಲಿನ ವಸಂತ ಕೋಟ್ಯಾನ್ ಅವರ ಮನೆಯ ಬಾವಿಗೆ ಚಿರತೆಯೊಂದು ಬಿದ್ದಿತ್ತು. ಮೇಲೆ ಬರಲು ಚಿರತೆ ಒದ್ದಾಡುತ್ತಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ತಂಡ ಚಿರತೆಯನ್ನು ರಕ್ಷಿಸಿದೆ.