ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್, ಪುತ್ರಿ ಬಂಧನ

ಪನಾಮ ಪೇಪರ್ ಹಗರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಲಂಡನ್‍‍ನಿಂದ ಪಾಕಿಸ್ತಾನಕ್ಕೆ ಹಿಂದಿರಿಗುವ ವೇಳೆ ಬಂಧಿಸಲಾಗಿದೆ. 

Last Updated : Jul 14, 2018, 09:14 AM IST
ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್, ಪುತ್ರಿ ಬಂಧನ title=
Pic Courtesy: (Reuters photo)

ಇಸ್ಲಾಮಾಬಾದ್/ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಮತ್ತು ಅವರ ಪುತ್ರಿ ಮೇರಿಯಮ್ ನವಾಜ್ ಅವರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಗಿದೆ. 

ಪಾಕಿಸ್ತಾನ ಮುಸ್ಲಿಂ ಲೀಗ್ ನಾಯಕ ಮತ್ತು ಅವರ ಪುತ್ರಿ ಪ್ರಯಾಣಿಸುತ್ತಿದ್ದ ಇತಿಹಾದ್ ವಿಮಾನವು ಲಾಹೋರ್'ನ ಅಲಮಾ ಇಕ್ಬಾಲ್ ಏರ್ಪೋರ್ಟ್'ನಲ್ಲಿ ರಾತ್ರಿ 9.15ಕ್ಕೆ ಬಂದು ಇಳಿಯುತ್ತಿದ್ದಂತೆ ಎಎನ್ಎಬಿ ಅಧಿಕಾರಿಗಳಿಗೆ ಶರಣಾಗಿದ್ದಾರೆ. ಇವರ ಪಾಸ್ ಪೋರ್ಟ್'ಗಳನ್ನು ಮೂರು ಸದಸ್ಯರ ಎಫ್ಐಬಿ ತಂದ ವಶಪಡಿಸಿಕೊಂಡಿದ್ದು, ಏರ್ಪೋರ್ಟ್ ಲಾಂಜ್'ನಲ್ಲಿ ಷರೀಫ್ ಪತ್ನಿ ಬೇಗಂ ಶಮಿಂ ಅಕ್ತರ್ ಅವರನ್ನು ಭೇಟಿ ಮಾಡಲು ಅನುಮತಿ ನೀಡಲಾಗಿದೆ. 

ಪನಾಮ ಪೇಪರ್ ಹಗರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಲಂಡನ್‍‍ನಿಂದ ಪಾಕಿಸ್ತಾನಕ್ಕೆ ಹಿಂದಿರಿಗುವ ವೇಳೆ ಬಂಧಿಸಲಾಗಿದೆ. ಲಂಡನ್‍‍ ನಿಂದ ಅಬುದಾಬಿಗೆ ಬಂದ ನವಾಜ್ ಶರೀಫ್ ಕುಟುಂಬ ಬಳಿಕ ಅಲ್ಲಿಂದ ಲಾಹೋರ್‍ ಗೆ ಬಂದಿಳಿದಿತ್ತು. 

ಏರ್ ಪೋರ್ಟ್ ಸುತ್ತಲೂ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಲಾಹೋರ್‍‍ನಲ್ಲಿ ಇಂಟರ್‍‍ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಲಾಹೋರ್‌ ಮತ್ತು ಇಸ್ಲಾಮಾಬಾದ್‌ ನಲ್ಲಿ ಭದ್ರತೆಗಾಗಿ ಹತ್ತು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಶುಕ್ರವಾರ ಒಂದೇ ದಿನ ಲಾಹೋರ್‌ನಲ್ಲಿ 378ಕ್ಕೂ ಅಧಿಕ ಮಂದಿ ನವಾಜ್‌ ಶರೀಫ್ ಬೆಂಬಲಿಗರನ್ನು ಬಂಧಿಸಲಾಗಿದೆ. ಗುರುವಾರ ಪಾಕಿಸ್ಥಾನದಾದ್ಯಂತ ನಡೆಸಿದ್ದ ಕಾರ್ಯಾಚರಣೆಯಲ್ಲಿ 500ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.

ಪನಾಮ ಪೇಪರ್ ಹಗರಣದಲ್ಲಿ ದೋಷಿ ಎಂದು ಸಾಬೀತಾಗಿ ನವಾಝ್ ಶರೀಫ್‍‍ಗೆ 10 ವರ್ಷ ಹಾಗೂ ಹಾಗೂ ಪುತ್ರಿ ಮರಿಯಂಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನ ಸುಪ್ರಿಂ ಕೋರ್ಟ್ ತೀರ್ಪು ನೀಡಿತ್ತು.

Trending News