ಆ್ಯಸಿಡ್ ದಾಳಿ ಸಂತ್ರಸ್ತೆಗೆ ಕೊನೆ ಹಂತದ ಸರ್ಜರಿ: ಆರೋಪಿ ಸ್ಥಿತಿ ಕಂಡು ಸಂತೋಷಗೊಂಡ ಯುವತಿ!

ಕಳೆದ 25 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ಇಂದು ಹೈ ಲೆವೆಲ್ ಎಕ್ಯೂಪ್ಮೆಂಟ್ ಬಳಸಿ ಸರ್ಜರಿ ಮಾಡಲಾಗಿದೆ. ಇನ್ನು ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಇತ್ತೀಚೆಗೆ ಸಚಿವ ಡಾ. ಸುಧಾಕರ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

Written by - Bhavishya Shetty | Last Updated : May 24, 2022, 01:00 PM IST
  • ಆ್ಯಸಿಡ್ ದಾಳಿ ಸಂತ್ರಸ್ತೆಗೆ ಇಂದು ಕೊನೆ ಹಂತದ ಸರ್ಜರಿ
  • ಆರೋಪಿ ಸ್ಥಿತಿ ಕಂಡು ಸಂತೋಷಗೊಂಡ ಸಂತ್ರಸ್ತೆ
  • ಸಂತ್ರಸ್ತೆ ಭೇಟಿ ಮಾಡಿದ್ದ ಸಚಿವ ಸುಧಾಕರ್‌
ಆ್ಯಸಿಡ್ ದಾಳಿ ಸಂತ್ರಸ್ತೆಗೆ ಕೊನೆ ಹಂತದ ಸರ್ಜರಿ: ಆರೋಪಿ ಸ್ಥಿತಿ ಕಂಡು ಸಂತೋಷಗೊಂಡ ಯುವತಿ!  title=
Acid Attack

ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಇನ್ನೊಂದೆಡೆ ಯುವತಿಗೆ ಚಿಕಿತ್ಸೆ ಮುಂದುವರೆದಿದ್ದು, ಇಂದು ಕೊನೆ ಹಂತದ ಸರ್ಜರಿ ಮಾಡಲಾಗಿದೆ.

ಇದನ್ನು ಓದಿ: Acid Attack: ಮೂತ್ರ ವಿಸರ್ಜನೆ ನೆಪದಲ್ಲಿ ಎಸ್ಕೇಪ್‌ ಆಗಲು ಯತ್ನಿಸಿದ ಆ್ಯಸಿಡ್ ನಾಗನಿಗೆ ಗುಂಡೇಟು

ಕಳೆದ 25 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ಇಂದು ಹೈ ಲೆವೆಲ್ ಎಕ್ಯೂಪ್ಮೆಂಟ್ ಬಳಸಿ ಸರ್ಜರಿ ಮಾಡಲಾಗಿದೆ. ಇನ್ನು ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಇತ್ತೀಚೆಗೆ ಸಚಿವ ಡಾ. ಸುಧಾಕರ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. 

ಇತ್ತೀಚೆಗೆ ಕಾಮಾಕ್ಷಿಪಾಳ್ಯ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಬಳಿಕ ಆರೋಪಿ ನಾಗೇಶ್‌ ಅಲ್ಲಿಂದ ಪರಾರಿಯಾಗಿ ತಮಿಳುನಾಡಿನಲ್ಲಿ ಅವಿತುಕೊಂಡಿದ್ದ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. 

ಆರೋಪಿ ಸ್ಥಿತಿ ಕಂಡು ಸಂತೋಷಗೊಂಡ ಸಂತ್ರಸ್ತೆ: 
ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ನನ್ನು ಪೊಲೀಸರು ಕರೆ ತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದರು. ಸದ್ಯ ಆತನ ಪರಿಸ್ಥಿತಿಯ ಫೋಟೋವನ್ನು ಕಂಡ ಸಂತ್ರಸ್ತೆ ಯುವತಿ ಖುಷಿಪಟ್ಟಿದ್ದಾಳಂತೆ. ತನ್ನ ಈ ಸ್ಥಿತಿಗೆ ಕಾರಣನಾದವನ ಗತಿಯನ್ನು ಕಂಡು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾಳೆ ಎನ್ನಲಾಗಿದೆ. 

ಸಂತ್ರಸ್ತೆ ಭೇಟಿ ಮಾಡಿದ್ದ ಸಚಿವ ಸುಧಾಕರ್‌: 
ಆ್ಯಸಿಡ್ ದಾಳಿಗೆ ತುತ್ತಾದ ಸಂತ್ರಸ್ತೆ ಸದ್ಯ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಿಗೆ ಆರೋಗ್ಯ ಸಚಿವ ಡಾ. ಸುಧಾಕರ್‌ ಭೇಟಿ ನೀಡಿದ್ದು ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, "ಸಂತ್ರಸ್ತೆಯ ಚಿಕಿತ್ಸಾ ವೆಚ್ಚವನ್ನು  ಸರ್ಕಾರ ಭರಿಸುತ್ತದೆ. ಶ್ರೀಘ್ರದಲ್ಲಿ ಆರೋಪಿ ನಾಗೇಶ್‌ನನ್ನು ಬಂಧಿಸಲಾಗುತ್ತದೆ. ವೈಯಕ್ತಿಕವಾಗಿ ಯುವತಿಗೆ 5 ಲಕ್ಷ ರೂ. ಧನಸಹಾಯ ಮಾಡುತ್ತೇನೆ. ಮುಂದೆ ಆಕೆಗೆ ಸರ್ಕಾರಿ ಉದ್ಯೋಗ ಕೊಡುವ ಚಿಂತನೆಯೂ ಇದೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇನೆ" ಎಂದಿದ್ದರು. 

ಇದನ್ನು ಓದಿ: Bengaluru Acid Attack: ಸ್ವಾಮೀಜಿ ವೇಷತೊಟ್ಟು ಎಸ್ಕೇಪ್ ಆಗಿದ್ದ ಆ್ಯಸಿಡ್ ನಾಗ ಅರೆಸ್ಟ್!

"ಯುವತಿಗೆ ಸ್ಕಿನ್‌ ಬ್ಯಾಂಕ್‌ನಿಂದ ಸ್ಕಿನ್‌ನೀಡಲಾಗುವುದು. ಆ್ಯಸಿಡ್ ದಾಳಿಯಿಂದ ಶೇ.35ರಷ್ಟು ದೇಹದ ಭಾಗಗಳು ಸುಟ್ಟುಹೋಗಿವೆ. ಸಂತ್ರಸ್ತೆಯ ಸ್ಥಿತಿ ಸ್ಪಲ್ಪ ಕ್ಲಿಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕಾಗಿದೆ. ಪೂರ್ಣ ಚೇತರಿಕೆ ಕಾಣಲು 2 ತಿಂಗಳು ಸಮಯಬೇಕು. ಸುಧಾರಿಸುವ ಬಗ್ಗೆ ವೈದ್ಯರು ಭರವಸೆ ನೀಡಿದ್ದಾರೆ" ಎಂದು ಹೇಳಿದ್ದರು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News