ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಯುದ್ಧ ಸೇರಿದಂತೆ ವಿವಿಧ ಕಾರಣಗಳಿಂದ ಭಾರೀ ಕುಸಿತ ಕಂಡಿದ್ದ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ದೊಡ್ಡ ಮಟ್ಟದಲ್ಲಿ ಚೇತರಿಕೆ ಕಂಡಿದೆ. ಸೋಮವಾರ ಬಿಟ್‌ಕಾಯಿನ್‌ನ $30,000ಗೂ ಹೆಚ್ಚಿನ ದರದಲ್ಲಿ ವಹಿವಾಟು ನಡೆಸುತ್ತಿತ್ತು. ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಚೇತರಿಕೆ ಕಂಡಿರುವುದರಿಂದ ಹೂಡಿಕೆದಾರರ ಮೊಗದಲ್ಲಿ ಕೊಂಚ ನೆಮ್ಮದಿ ತರಿಸಿದೆ.
ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದರಿಂದ ಬಹುತೇಕ ಹೂಡಿಕೆದಾರರು ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದ್ದರು. ಇದೀಗ ಮತ್ತೆ ಬೆಲೆ ಚೇತರಿಕೆ ಕಂಡಿರುವುದು ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ ಬಿಟ್‌ಕಾಯಿನ್, ಎಥೆರಿಯಮ್ ಮತ್ತು ಇತರ ಪ್ರಮುಖ ಕ್ರಿಪ್ಟೋಕರೆನ್ಸಿಗಳು ಸ್ವಲ್ಪ ಸುಧಾರಿಸಿದೆ.
ಇದನ್ನೂ ಓದಿ: Alert! ನಿಮ್ಮ ಬ್ಯಾಂಕ್ ಖಾತೆಯಲ್ಲಿ 342 ರೂ. ಗಳನ್ನು ಕಾಯದೆ ಹೋದಲ್ಲಿ 4 ಲಕ್ಷ ರೂ. ಗಳ ಹಾನಿ
ಇಂದಿನ ಬಿಟ್‌ಕಾಯಿನ್ ಬೆಲೆ
ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಕಳೆದ 10 ದಿನಗಳಿಂದ ಕೇವಲ $30,000 ಬೆಂಬಲದ ಸಾಲಿನಲ್ಲಿ ವಹಿವಾಟು ನಡೆಸುತ್ತಿದೆ. ಸೋಮವಾರ ಬಿಟ್‌ಕಾಯಿನ್‌ನ ಬೆಲೆ ಶೇ.2.76 ರಷ್ಟು ಏರಿಕೆಯಾಗಿ $30,173.58ಗೆ ತಲುಪಿದೆ. ಏತನ್ಮಧ್ಯೆ ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎಥೆರಿಯಮ್ ಶೇ.3.02ರಷ್ಟು ಏರಿಕೆ ಕಂಡು $2,030.70ಗೆ ತಲುಪಿದೆ.
ವರದಿಗಳ ಪ್ರಕಾರ Bitcoin, Ethereum ಮತ್ತು ಹೆಚ್ಚಿನ ಕ್ರಿಪ್ಟೋಕರೆನ್ಸಿಗಳು ವಾರಾಂತ್ಯದಲ್ಲಿ ಏರಿಕೆ ಕಂಡು ಚೇತರಿಸಿಕೊಂಡಿವೆ. BTC ಕಳೆದ 24 ಗಂಟೆಗಳಲ್ಲಿ ಸುಮಾರು 4 ಪ್ರತಿಶತದಷ್ಟು ಬೆಳವಣಿಗೆ ಸಾಧಿಸಿದ್ದರೂ ಸಹ $30,000 ಮಟ್ಟವನ್ನು ಬ್ರೇಕ್ ಮಾಡಲು ಸಾಧ್ಯವಾಗಲಿಲ್ಲ. ‘BTC ತನ್ನ ಆರಂಭಿಕ ಪ್ರತಿರೋಧ ಮಟ್ಟವಾದ $31,000 ಬ್ರೇಕ್ ಮಾಡಲು ಸಾಧ್ಯವಾದರೆ ಈ ವಾರ ಅದು $32,000 ಮೌಲ್ಯ ತಲುಪಿ Upward Trendನಲ್ಲಿ ವಹಿವಾಟು ನಡೆಸಬಹುದು’ ಎಂದು Mudrexನ CEO ಮತ್ತು ಸಹ-ಸಂಸ್ಥಾಪಕ ಎಡುಲ್ ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ: 7th Pay Commission: ಹೊಸ ಸೂತ್ರದಡಿ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ, ಪ್ರತಿವರ್ಷ ಮೂಲವೇತನದಲ್ಲಿ ಪರಿಷ್ಕರಣೆ!
ವಿಶ್ವದ ಟಾಪ್ ಕ್ರಿಪ್ಟೋಕರೆನ್ಸಿಗಳ ಪೈಕಿ ಎಕ್ಸ್‌ಆರ್‌ಪಿ ಶೇ.2.47, ಸೋಲಾನಾ ಶೇ.4.53, ಕಾರ್ಡಾನೊ ಶೇ.3.08, ಸ್ಟೆಲ್ಲರ್ ಶೇ.3.42, ಅವಲಾಂಚೆ ಶೇ.5.50 ಮತ್ತು ಪೊಲ್‌ಕಾಡಾಟ್ ಶೇ.1.23 ಏರಿಕೆ ಕಂಡಿದೆ. ಡೊಗೆಕಾಯಿನ್‌ನಂತಹ ಇತರ ಆಲ್ಟ್ ನಾಣ್ಯಗಳು ಶೇ.1.98ರಷ್ಟು ಮತ್ತು ಶಿಬಾ ಇನು ಶೇ.2.39 ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.