Astro Remedies for Husband Wife in Kannada - ಸಾಕಷ್ಟು ಓಡಾಟದಿಂದ ಕೂಡಿದ ಜೀವನಶೈಲಿಯ ಕಾರಣ ಪತಿ-ಪತ್ನಿಯರಿಗೆ ಪರಸ್ಪರ ಹೆಚ್ಚಿಗೆ ಸಮಯ ನೀಡಲು ಆಗುವುದಿಲ್ಲ. ವೇಳೆಯ ಅಭಾವ ಹಾಗೂ ಹಲವು ಕಾರಣಗಳಿಂದ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರುವ ಸಾಧ್ಯತೆ ಇರುತ್ತದೆ. ಹೀಗಿರುವಾಗಿ ಇಬ್ಬರ ನಡುವೆ ದಿನನಿತ್ಯ ಜಗಳ ಏರ್ಪಡುವ ಸಾಧ್ಯತೆ ಹೆಚ್ಚಾಗುತ್ತದೆ. ಇದು ಸಂಬಂಧದಲ್ಲಿ ಬಿರುಕಿಗೆ ಕಾರಣವಾಗುತ್ತದೆ. ಹೀಗಿರುವಾಗ ಜೋತಿಷ್ಯ ಶಾಸ್ತ್ರದಲ್ಲಿ ಸೂಚಿಸಲಾಗಿರುವ ಕೆಲ ಪರಿಣಾಮಕಾರಿ ಉಪಾಯಗಳನ್ನು ಅನುಸರಿಸಬೇಕು. ಈ ಉಪಾಯಗಳು ಪತಿ-ಪತ್ನಿಯರ ನಡುವಿನ ಜಗಳಕ್ಕೆ ತಿಲಾಂಜಲಿ ಹಾಡಿ, ಪರಸ್ಪರರ ಮಧ್ಯೆ ಪ್ರೀತಿ-ವಿಶ್ವಾಸ ಹೆಚ್ಚಿಸಿ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ.
ಪತಿ-ಪತ್ನಿಯರ ಸಂಬಂಧ ಗಟ್ಟಿಗೊಳಿಸುತ್ತವೆ ಈ ಉಪಾಯಗಳು
>> ಜ್ಯೋತಿಷ್ಯದಲ್ಲಿ, ಪತಿ ಮತ್ತು ಪತ್ನಿಯ ನಡುವೆ ಪ್ರೀತಿಯನ್ನು ಹೆಚ್ಚಿಸಲು, ಅವರ ವೈವಾಹಿಕ ಜೀವನವನ್ನು ಸುಧಾರಿಸಲು ಹಲವು ಪರಿಹಾರಗಳನ್ನು ನೀಡಲಾಗಿದೆ. ಈ ಕ್ರಮಗಳನ್ನು ಅನುಸರಿಸಿದರೆ, ಸ್ವಲ್ಪ ಸಮಯದಲ್ಲಿಯೇ ವೈವಾಹಿಕ ಜೀವನದಲ್ಲಿ ವ್ಯತ್ಯಾಸವು ಗೋಚರಿಸುತ್ತದೆ.
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪತಿ-ಪತ್ನಿಯರ ನಡುವೆ ಪ್ರತಿನಿತ್ಯ ಜಗಳಗಳು ನಡೆಯುತ್ತಿದ್ದರೆ ಶಿವ ಮತ್ತು ತಾಯಿ ಪಾರ್ವತಿಯನ್ನು ಒಟ್ಟಿಗೆ ಕುಳಿತು ಪೂಜಿಸಬೇಕು. ತುಪ್ಪದ ದೀಪವನ್ನು ಹಚ್ಚಿ. ಶಿವ ಚಾಲೀಸಾವನ್ನು ಓದಿ ಮತ್ತು ನಿಮ್ಮ ಸಂಬಂಧವನ್ನು ಸುಧಾರಿಸಲು ಪ್ರಾರ್ಥಿಸಿ.
>> ಉತ್ತಮ ದಾಂಪತ್ಯ ಜೀವನಕ್ಕಾಗಿ, ಜಾತಕದಲ್ಲಿ ದೇವಗುರು ಬೃಹಸ್ಪತಿಯ ಸ್ಥಾನ ಬಲವಾಗಿರಬೇಕು. ಹಾಗಾಗದೇ ಹೋದರೆ ಸಂಬಂಧದಲ್ಲಿ ಮಧುರತೆ ಇರುವುದಿಲ್ಲ ಮತ್ತು ಆಗಾಗ ಏರಿಳಿತಗಳು ಸಂಭವಿಸುತ್ತಲೇ ಇರುತ್ತವೆ, ಸಮಸ್ಯೆಗಳು ಸಮಸ್ಯೆಗಲಾಗಿಯೇ ಮುಂದುವರೆಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಗುರುವಿನ ಸ್ಥಾನ ಬಲಪಡಿಸುವುದು ಆವಶ್ಯಕ, ಇದಕ್ಕಾಗಿ 7 ಅರಿಶಿನ ಬೇರುಗಳನ್ನು ತೆಗೆದುಕೊಂಡು ಹಳದಿ ದಾರದಲ್ಲಿ ಕಟ್ಟಿಕೊಳ್ಳಿ. ನಂತರ ಅವುಗಳನ್ನು ಬಲಗೈಯಲ್ಲಿ ಇಟ್ಟುಕೊಂಡು ಶ್ರೀ ವಿಷ್ಣುವಿನ 'ಓಂ ನಮೋ ಭಗವತೇ ವಾಸುದೇವಾಯ' ಮಂತ್ರವನ್ನು ಕನಿಷ್ಠ 21 ಬಾರಿ ಜಪಿಸಿ. ನೀವು ಈ ಮಂತ್ರವನ್ನು ಏಳು, ಹನ್ನೊಂದು ಅಥವಾ ಇಪ್ಪತ್ತೊಂದು ಬಾರಿ ಮಾಡಬಹುದು. ನಂತರ ದೇವಸ್ಥಾನಕ್ಕೆ ಹೋಗಿ ವಿಷ್ಣುವಿಗೆ ಗಂಟು ಅರ್ಪಿಸಿ. ಸುಮಧುರ ದಾಂಪತ್ಯವನ್ನು ನೀಡುವಂತೆ ಪ್ರಾರ್ಥಿಸಿ.
ಇದನ್ನೂ ಓದಿ-Vastu Tips: ದುಡ್ಡು ಎಣಿಕೆ ಮಾಡುವಾಗ ನೀವು ಈ ತಪ್ಪು ಮಾಡ್ತಿರಾ, ಎಚ್ಚರ! ದಾರಿದ್ರ್ಯಕ್ಕೆ ಕಾರಣವಾಗುತ್ತದೆ
>> ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಅನುಗ್ರಹವು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಅವರನ್ನು ಒಟ್ಟಿಗೆ ಪೂಜಿಸುವ ಮೂಲಕ ಅಥವಾ ದರುಶನ ಪಡೆಯುವ ಮೂಲಕ ವೈವಾಹಿಕ ಜೀವನ ಸುಧಾರಿಸುತ್ತದೆ. ಪ್ರತಿ ಶುಕ್ರವಾರದಂದು ಶ್ರೀವಿಷ್ಣು ಹಾಗೂ ತಾಯಿ ಲಕ್ಷ್ಮಿಗೆ ಪೂಜೆಯನ್ನು ಸಲ್ಲಿಸಿ.
ಇದನ್ನೂ ಓದಿ-Zodiac Nature: ರಾಜಶೈಲಿಯಲ್ಲಿ ಜೀವನ ಸಾಗಿಸುತ್ತಾರೆ ಈ ಜನರು, ಸೂರ್ಯನ ಕೃಪೆಯಿಂದ ಅಪಾರ ಹಣ-ಕೀರ್ತಿ ಗಳಿಸುತ್ತಾರೆ
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.