Shani Jayanti 2022: ಒಂದೇ ದಿನದಲ್ಲಿ ಬಂದ ವಟ ಸಾವಿತ್ರಿ ವೃತ, ಶನಿ ಜಯಂತಿ ಹಾಗೂ ಸೋಮವತಿ ಅಮಾವಾಸ್ಯೆ, ಶುಭ ಫಲ ಪ್ರಾಪ್ತಿಗೆ ಏನು ಮಾಡಬೇಕು?

Somavati Amavasya -  ಶನಿ ದೇವ ಮನುಷ್ಯರಿಗೆ ಅವರ ಕರ್ಮಕ್ಕೆ ತಕ್ಕಂತೆ ಫಲ ನೀಡುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಹೀಗಾಗಿ ಶನಿ ದೇವನ  ವಿಶೇಷ ಕೃಪೆಗೆ ಪಾತ್ರರಾಗಲು ಶನಿ ಜಯಂತಿಯ ದಿನ ತುಂಬಾ ವಿಶೇಷ ಎನ್ನಲಾಗುತ್ತದೆ. ಈ ದಿನ ವಿಧಿ-ವಿಧಾನಗಳಿಂದ ಶನಿ ದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ.   

Written by - Nitin Tabib | Last Updated : May 20, 2022, 11:25 AM IST
  • ಈ ಬಾರಿ ಮೇ 30ರ ದಿನ ತುಂಬಾ ವಿಶೇಷವಾಗಿದೆ.
  • ಒಂದೇ ದಿನದಲ್ಲಿ ಮೂರು ಪರ್ವಗಳು ಬರುತ್ತಿವೆ.
  • ಶನಿ ಜಯಂತಿ, ಸೋಮವತಿ ಅಮಾವಾಸ್ಯೆ ಹಾಗೂ ವಟ ಸಾವಿತ್ರಿ ವ್ರತ ಈ ದಿನ ಆಚರಿಸಲಾಗುತ್ತಿದೆ.
Shani Jayanti 2022: ಒಂದೇ ದಿನದಲ್ಲಿ ಬಂದ ವಟ ಸಾವಿತ್ರಿ ವೃತ, ಶನಿ ಜಯಂತಿ ಹಾಗೂ ಸೋಮವತಿ ಅಮಾವಾಸ್ಯೆ, ಶುಭ ಫಲ ಪ್ರಾಪ್ತಿಗೆ ಏನು ಮಾಡಬೇಕು? title=
Shani Jayanti 2022

Vat Savitri Vrat 2022 - ಈ ತಿಂಗಳು ಮೇ 30ರ ದಿನ ತುಂಬಾ ವಿಶೇಷವಾಗಿದೆ. ಏಕೆಂದರೆ, ಈ ದಿನ ವಟ ಸಾವಿತ್ರಿ ವೃತ, ಶನಿ ಜಯಂತಿ ಹಾಗೂ ಸೋಮವತಿ ಅಮಾವಾಸ್ಯೆ  ಒಂದೇ ದಿನದಲ್ಲಿ ಬರುತ್ತಿವೆ. ವಟ ಸಾವಿತ್ರಿ ಪೂಜೆಯ ದಿನ ಸುಮಂಗಲಿಯರು ತಮ್ಮ ಪತಿಯ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ವೃತವನ್ನು ಕೈಗೊಳ್ಳುತ್ತಾರೆ. ಈ ದಿನ ಸುಮಂಗಲಿಯರು ಆಲದ ಮರವನ್ನು ಪೂಜಿಸುತ್ತಾರೆ. ಈ ಬಾರಿಯ ವಟ ಸಾವಿತ್ರಿ ಪೂಜೆ ಮೇ 30ರಂದು ಬೀಳುತ್ತಿದ್ದು, ಈ ದಿನ ಶನಿ ಜಯಂತಿ ಹಾಗೂ ಸೋಮವತಿ ಅಮಾವಾಸ್ಯೆಗಳು ಕೂಡ ಇವೆ. ಈ ದಿನ ವೃತ ಕೈಗೊಳ್ಳುವುದರಿಂದ ಶನಿದೇವನ ವಿಶೇಷ ಕೃಪೆ ಪ್ರಾಪ್ತಿಯಾಗುತ್ತದೆ. ಈ ದಿನ ಆಲದ ಮರಕ್ಕೆ ಪೂಜೆ ಸಲ್ಲಿಸುವ ಕಾರಣ ಹಾಗೂ ಸತ್ಯವಾನ-ಸಾವಿತ್ರಿಯ ಕಥೆಯನ್ನು ಸ್ಮರಿಸುವ ಕಾರಣ ಈ ದಿನಕ್ಕೆ ವಟ ಸಾವಿತ್ರಿ ವೃತ ಎಂದು ಕರೆಯಲಾಗುತ್ತದೆ. 

ಇದನ್ನೂ ಓದಿ-ಈ ಮೂರು ರಾಶಿಯವರ ಮೇಲೆ ಜೀವನ ಪೂರ್ತಿ ಇರುತ್ತದೆಯಂತೆ ಗಣೇಶನ ಕೃಪೆ, ಪ್ರತಿ ಕೆಲಸದಲ್ಲೂ ನೀಡುತ್ತಾನೆ ಯಶಸ್ಸು

ಸಾವಿತ್ರಿಯ ಅರ್ಥ ದೇವಿ ಗಾಯತ್ರಿ ಹಾಗೂ ದೇವಿ ಸರಸ್ವತಿ ಎಂದೂ ಕೂಡ ಆಗುತ್ತದೆ. ವಿಶೇಷ ಪರಿಸ್ಥಿತಿಯಲ್ಲಿ ಸಾವಿತ್ರಿ ಜನಿಸಿದ್ದಳು. ಪುರಾಣಗಳ ಪ್ರಕಾರ ಭದ್ರ  ದೇಶದ ರಾಜ್ಯ ಅಶ್ವಪತಿಗೆ ಹಲವು ವರ್ಷಗಳ ಕಾಲ ಸಂತಾನ ಭಾಗ್ಯವೆ ಪ್ರಾಪ್ತಿಯಾಗಿರಲಿಲ್ಲ ಎಂದು ಹೇಳಲಾಗುತ್ತದೆ. ಹೀಗಾಗಿ ಆತ ಸಂತಾನ ಪ್ರಾಪ್ತಿಗಾಗಿ ನಿತ್ಯ ಮಂತ್ರ ಉಚ್ಛಾರಣೆಯ ಜೊತೆಗೆ ಒಂದು ಲಕ್ಷ ಆಹುತಿಗಳನ್ನು ನೀಡುತ್ತಾನೆ. ಸುಮಾರು ಎಂಟು ವರ್ಷಗಳ ಕಾಲ ಆತ ಈ ಕೆಲಸ ಮಾಡುತ್ತಾನೆ. ಆಗ ದೇವಿ ಸಾವಿತ್ರಿ ಪ್ರತ್ಯಕ್ಷ ಳಾಗಿ, ಹೇ ರಾಜ್ಯ ನಿನಗೆ ಓರ್ವ ತೇಜಸ್ವಿ ಪುತ್ರಿ ಜನಿಸಲಿದ್ದಾಳೆ ಎಂದು ವರ ನೀಡುತ್ತಾಳೆ. ಸಾವಿತ್ರಿ ದೇವಿಯ ಕೃಪೆಯಿಂದ ಜನಿಸಿದ ತನ್ನ ಮಗಳಿಗೆ ಅಶ್ವಪತಿ ಸಾವಿತ್ರಿ ಎಂದು ನಾಮಕರಣ ಮಾಡುತ್ತಾನೆ. ಈ ವರ್ಷ ಸರ್ವಾರ್ಥ ಸಿದ್ಧಿಯೋಗದಲ್ಲಿ ವಟ ಸಾವಿತ್ರಿ ಪೂಜೆಯನ್ನು ನೆರವೇರಿಸಲಾಗುವುದು ಎನ್ನಲಾಗಿದೆ. 

ಇದನ್ನೂ ಓದಿ-ಮುಂದಿನ ಒಂದು ವರ್ಷದವರೆಗೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಗುರು ಹರಿಸಲಿದ್ದಾನೆ ಕೃಪಾ ದೃಷ್ಟಿ

ಇನ್ನೊಂದೆಡೆ ಜೇಷ್ಠ ಮಾಸದ ಅಮಾವಾಸ್ಯೆಯಂದು  ಶನಿ ಜನಿಸಿದ್ದ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ದಿನ ಶನಿ ಜಯಂತಿ ಕೂಡ ಆಚರಿಸಲಾಗುತ್ತಿದೆ. ಶಾಸ್ತ್ರಗಳ ಪ್ರಕಾರ ಶನಿಯನ್ನು ಕರ್ಮ ಫಲದಾತ ಎಂದು ಕರೆಯಲಾಗುತ್ತದೆ. ಹೀಗಾಗಿ ಶನಿಜಯಂತಿಯ ದಿನ ವಿಧಿ ವಿಧಾನಗಳಿಂದ ಶನಿಯನ್ನು ಪೂಜಿಸಿದರೆ, ಜಾತಕದಲ್ಲಿನ ಶನಿ ದೋಷ, ಶನಿಯ ಉತ್ತರಾರ್ಧ ಅಂದರೆ ಎರಡೂವರೆ ವರ್ಷಗಳ ಕಾಟ, ಸಾಡೇಸಾತಿಯಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಇನ್ನೊಂದೆಡೆ ಶನಿ ಕೃಪೆಯ ಕಾರಣ ಶಾರೀರಿಕ, ಮಾನಸಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುವುದಿಲ್ಲ. ಈ ದಿನ ದೇವಸ್ಥಾನಗಳಲ್ಲಿ ಬೆಳಗ್ಗೆ ಪೂಜೆ-ಅರ್ಚನೆ ಸಲ್ಲಿಸಲಾಗುತ್ತದೆ. ಸಂಜೆಯ ಹೊತ್ತು ದೇವಸ್ಥಾನದ ಆವರನಲ್ಲಿ 1100 ದೀಪಗಳನ್ನು ಬೆಳಗಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News