ನವದೆಹಲಿ : Railway Recruitment 2022: ITI ಪ್ರಮಾಣಪತ್ರವನ್ನು ಪಡೆದ ಯುವಕರಿಗೆ ಇಲ್ಲಿದೆ ಸಿಹಿ ಸುದ್ದಿ. ಪೂರ್ವ ರೈಲ್ವೆಯು 2972 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇತ್ತೀಚೆಗೆ, ರೈಲ್ವೆ ತನ್ನ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದೀಗ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹತ್ತಿರವಾಗಿದೆ. ಅರ್ಹ ಅಭ್ಯರ್ಥಿಗಳು ಮೇ 20 2022 ರೊಳಗೆ ಪೂರ್ವ ರೈಲ್ವೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಪ್ರೆಂಟಿಸ್ಶಿಪ್ ಸಮಯದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿಗದಿತ ಸ್ಟೈಫಂಡ್ ನೀಡಲಾಗುವುದು.
ಅಗತ್ಯವಿರುವ ವಿದ್ಯಾರ್ಹತೆ ಮತ್ತು ವಯಸ್ಸಿನ ಮಿತಿ :
ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ತೇರ್ಗಡೆಯಾಗಿರಬೇಕು. ಇದಲ್ಲದೆ, ಅವರು ಎನ್ಸಿವಿಟಿ ಅಥವಾ ಎಸ್ಸಿವಿಟಿ ಪ್ರಮಾಣೀಕರಿಸಿದ ಸಂಬಂಧಿತ ವಿಷಯಗಳಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಅರ್ಜಿದಾರರ ಕನಿಷ್ಠ ವಯಸ್ಸು 15 ವರ್ಷಗಳು ಮತ್ತು ಗರಿಷ್ಠ 24 ವರ್ಷಗಳಾಗಿರಬೇಕು. ಈ ನೇಮಕಾತಿಯ ಅಧಿಸೂಚನೆಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ : SBI Update! ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕ್ ನೀಡಿದ ಎಸ್ಬಿಐ
ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ :
ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ರೈಲ್ವೆಯು 10ನೇ ಮತ್ತು ಐಟಿಐ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದವರನ್ನು ಅಪ್ರೆಂಟಿಸ್ಶಿಪ್ಗೆ ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಕ್ಕೆ ಅರ್ಜಿ ಶುಲ್ಕ 100 ರೂ. ಆಗಿರುತ್ತದೆ. ಎಸ್.ಸಿ , ಎಸ್ಟಿ ದಿವ್ಯಾಂಗ ಮತ್ತು ಮಹಿಳೆಯರು ಯಾವುದೇ ರೀತಿಯ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಈ ಪೋಸ್ಟ್ಗಳಿಗೆ ಅರ್ಜಿ ಸಲ್ಲಿಸಲು, ಅರ್ಹ ಅಭ್ಯರ್ಥಿಗಳು ಪೂರ್ವ ರೈಲ್ವೆಯ ವೆಬ್ಸೈಟ್ er.indianrailways.gov.in ಗೆ ಭೇಟಿ ನೀಡಬೇಕು. ಇಲ್ಲಿ ನೇಮಕಾತಿಯ ಅಧಿಸೂಚನೆ ಮತ್ತು ಅಪ್ಲಿಕೇಶನ್ನ ಲಿಂಕ್ ಸಿಗುತ್ತದೆ. ಅಧಿಸೂಚನೆಯಲ್ಲಿ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ಅಭ್ಯರ್ಥಿಗಳು ಅರ್ಜಿ ನಮೂನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಇದನ್ನೂ ಓದಿ : ಎಸಿಯಂತೆ ಗೋಡೆಯ ಮೇಲೆ ಅಳವಡಿಸಬಹುದಾದ ಕೂಲರ್; ಕಡಿಮೆ ವಿದ್ಯುತ್ ನಲ್ಲಿ ಮಾಡುತ್ತದೆ ಸೂಪರ್ ಕೂಲಿಂಗ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಮಾಡಿ