ನವದೆಹಲಿ: 'ಒಂದು ದೇಶ, ಒಂದು ಭಾಷೆ' ಘೋಷಣೆಗೆ ಬೆಂಬಲ ವ್ಯಕ್ತಪಡಿಸಿದ ಶಿವಸೇನೆಯ ನಾಯಕ ಸಂಜಯ್ ರೌತ್ ಭಾರತದಾದ್ಯಂತ ಹಿಂದಿ ಮಾತನಾಡುತ್ತಾರೆ ಮತ್ತು ಸ್ವೀಕಾರಾರ್ಹತೆಯನ್ನು ಹೊಂದಿದ್ದಾರೆ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳಲ್ಲಿ ಒಂದೇ ಭಾಷೆ ಇರಬೇಕೆಂಬ ಸವಾಲನ್ನು ಸ್ವೀಕರಿಸಬೇಕು ಎಂದು ಹೇಳಿದರು.
ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಮತ್ತು ಸ್ಥಳೀಯ ಭಾಷೆಗಳನ್ನಲ್ಲ ಎಂದು ಶಾ ಹೇಳಿದ ಒಂದು ತಿಂಗಳ ನಂತರ ಅವರ ಹೇಳಿಕೆ ಹೊರಬಿದ್ದಿದೆ.ಈ ಹೇಳಿಕೆಯನ್ನು ದಕ್ಷಿಣದ ರಾಜ್ಯಗಳ ಹಲವಾರು ಪ್ರಮುಖ ರಾಜಕೀಯ ನಾಯಕರು ತೀವ್ರವಾಗಿ ವಿರೋಧಿಸಿದರು,ಅವರು ಹಿಂದಿಯನ್ನು ಜನರ ಮೇಲೆ ಹೇರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.ಅಷ್ಟೇ ಅಲ್ಲದೆ ಇದು ಪ್ರಾದೇಶಿಕ ಭಾಷೆಗಳನ್ನು ದುರ್ಬಲಗೊಳಿಸುವ ಕಾರ್ಯಸೂಚಿಯ ಒಂದು ಭಾಗ ಎಂದು ಕರೆದರು.
ಇದನ್ನೂ ಓದಿ: Mundka Fire Incident : ದೆಹಲಿಯಲ್ಲಿ ಭಾರೀ ಬೆಂಕಿ ಅವಘಡ : 26 ಜನ ಸಜೀವದಹನ!
ಒಂದು ದಿನದ ಹಿಂದೆ ತಮಿಳುನಾಡು ಶಿಕ್ಷಣ ಸಚಿವ ಕೆ ಪೊನ್ಮುಡಿ ಅವರು ಹಿಂದಿ ಹೇರಿಕೆಯ ಯಾವುದೇ ಪ್ರಯತ್ನಗಳನ್ನು ಖಂಡಿಸಿದರು.ಹಿಂದಿ ಕಲಿಯುವವರಿಗೆ ಉದ್ಯೋಗ ಲಭ್ಯವಾಗಲಿದೆ ಎಂದು ಒತ್ತಾಯಿಸುವವರನ್ನು ತರಾಟೆಗೆ ತೆಗೆದುಕೊಂಡ ತಮಿಳುನಾಡು ಸಚಿವ ಕೆ ಪೊನ್ಮುಡಿ ಈಗ ಕೊಯಮತ್ತೂರಿನಲ್ಲಿ 'ಪಾನಿ ಪುರಿ' ಮಾರಾಟ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: Gyanvapi mosque :ಬಿಗಿ ಭದ್ರತೆಯೊಂದಿಗೆ ನಡೆದ ವಿವಾದಿತ ಜ್ಞಾನವಾಪಿ ಮಸೀದಿ ಸಮೀಕ್ಷೆ
ಈಗ ಮುಂಬೈನಲ್ಲಿ ಮಹಾನಗರ ಪಾಲಿಕೆ ಚುನಾವಣೆ ಈ ವರ್ಷದ ಕೊನೆಯಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ಉತ್ತರ ಭಾರತದವರನ್ನು ಓಲೈಸುವ ನಿಟ್ಟಿನಲ್ಲಿ ಈಗ ಸಂಜಯ್ ರೌತ್ ಅವರು ತಮ್ಮ ಪಕ್ಷವು ಯಾವಾಗಲೂ ಹಿಂದಿ ಭಾಷೆಯನ್ನೂ ಗೌರವಿಸುತ್ತದೆ ಎಂದು ಹೇಳಿದ್ದಾರೆ.
'ಸದನದಲ್ಲಿ ಅವಕಾಶ ಸಿಕ್ಕಾಗಲೆಲ್ಲ ಹಿಂದಿಯಲ್ಲಿ ಮಾತನಾಡುತ್ತೇನೆ.ಏಕೆಂದರೆ ನಾನು ಹೇಳುವುದನ್ನು ದೇಶ ಕೇಳಬೇಕು, ಅದು ದೇಶದ ಭಾಷೆ.ಹಿಂದಿ ಮಾತ್ರ ಸ್ವೀಕಾರಾರ್ಹತೆ ಹೊಂದಿರುವ ಮತ್ತು ಇಡೀ ದೇಶದಲ್ಲಿ ಮಾತನಾಡುವ ಭಾಷೆಯಾಗಿದೆ" ಎಂದು ಅವರು ಹೇಳಿದರು.ಇದಕ್ಕೆ ಪೂರಕವಾಗಿ ಹಿಂದಿ ಚಿತ್ರರಂಗವು ದೇಶ ಮತ್ತು ಪ್ರಪಂಚದಲ್ಲಿ ಪ್ರಭಾವಶಾಲಿಯಾಗಿದೆ, ಆದ್ದರಿಂದ ಯಾವುದೇ ಭಾಷೆಯನ್ನು ಅವಮಾನಿಸಬಾರದು ಎಂದು ಹೇಳಿದರು.
ಇದನ್ನೂ ಓದಿ: ತಂತ್ರಜ್ಞಾನವು ಮಹಾತ್ಮ ಗಾಂಧೀಜಿಯವರ ಸ್ವರಾಜ್ ಕಲ್ಪನೆಯನ್ನು ಸಾಕಾರಗೊಳಿಸಬಹುದು: ಡಾ.ಸುಭಾಷ್ ಚಂದ್ರ
"ಎಲ್ಲಾ ರಾಜ್ಯಗಳಲ್ಲಿ ಒಂದೇ ಭಾಷೆ ಇರಬೇಕು, ಒಂದು ದೇಶ, ಒಂದು ಸಂವಿಧಾನ, ಒಂದು ನಿಶಾನ್ (ಲಾಂಛನ/ಚಿಹ್ನೆ) ಮತ್ತು ಒಂದು ಭಾಷೆ ಇರಬೇಕು ಎಂಬ ಈ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವೀಕರಿಸಬೇಕು" ಎಂದು ರಾವತ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.