ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಆಭರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಫ್ಯಾಷನ್ ಪ್ರಿಯರು ಚಿನ್ನಕ್ಕಿಂತ ಹೆಚ್ಚಾಗಿ ಇಂತಹ ಆರ್ಟಿಫಿಶಿಯಲ್ ಆಭರಣಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇನ್ನು ಟೆರ್ರಾಕೋಟ ಎಂಬ ಆಭರಣವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿದೆ.
ಇದನ್ನು ಓದಿ: ಶನಿವಾರ ಮಾಡುವ ಈ ತಪ್ಪಿನಿಂದ ಶನಿದೇವನ ಕೋಪಕ್ಕೆ ಪಾತ್ರವಾಗಬೇಕಾಗುತ್ತದೆ
ಟೆರ್ರಾಕೋಟ ಅಂದರೆ ಬೇಯಿಸಿದ ಮಣ್ಣು ಎಂದರ್ಥ. ಕೈಯಿಂದ ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಹೇಗೆ ಬೆಲೆಯಿದೆಯೋ ಅದೇ ರೀತಿ ಟೆರ್ರಾಕೋಟ ಒಡವೆಗೂ ಇದೆ.
ಮಣ್ಣಿನಿಂದಲೇ ತಯಾರಾಗುವ ಟೆರ್ರಾಕೋಟ ಒಡವೆಗಳು ಪರಿಸರ ಸ್ನೇಹಿ ಎನ್ನಬಹುದು. ದೇಸಿ ಸಂಸ್ಕೃತಿಯೊಂದಿಗೆ ಬಂದಿರುವ ಈ ಆಭರಣ ಜನರ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. ಆದರೆ ಇದರ ಬಳಕೆ ತುಸು ಕಷ್ಟ ಎನ್ನುವವರೂ ಇದ್ದಾರೆ.
ಟೆರ್ರಾಕೋಟ ಶೈಲಿಯ ಒಡವೆಗಳನ್ನು ಕೈಮಗ್ಗದ ಉಡುಗೆಗಳೊಂದಿಗೆ ಹೊಂದಿಸಿಕೊಂಡರೆ ಅದರ ಅಂದವೇ ಬೇರೆ. ವಿವಿಧ ಶೈಲಿಯ, ಬಣ್ಣದ, ವಿನ್ಯಾಸಗಳ ಸರಗಳು, ಕಿವಿಯೋಲೆ, ಬಳೆ, ಬ್ರೇಸ್ಲೆಟ್, ಹೂಪ್ಸ್ಗಳು ಮುಂತಾದ ವೈವಿಧ್ಯಮಯ ಶೈಲಿಯಲ್ಲಿ ಟೆರ್ರಾಕೋಟ ಆಭರಣಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.
ಟೆರ್ರಾಕೋಟ ಒಡವೆಗಳು ಸಾಂಪ್ರದಾಯಿಕ ಅಥವಾ ಮಾಡರ್ನ್ ಲುಕ್ ಎರಡಕ್ಕೂ ಹೊಂದಿಕೆ ಆಗುವುದು ವಿಶೇಷ. ಖಾದಿ ಸೀರೆಗಳು, ಕಾಟನ್ ಸೀರೆಗಳೊಂದಿಗೂ ಟೆರ್ರಾಕೋಟ ಸಖತ್ ಸೂಟ್ ಆಗುತ್ತದೆ. ಇನ್ನು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಟೆರ್ರಾಕೋಟ ಒಡವೆ ಧರಿಸಿದಾಗ ಇದರೊಂದಿಗೆ ಚಿನ್ನ-ಬೆಳ್ಳಿ ಒಡವೆಗಳನ್ನು ಬಳಕೆ ಮಾಡದಿರುವುದು ಸೂಕ್ತ. ಏಕೆಂದರೆ ಟೆರ್ರಾಕೋಟದ ಅಂದವನ್ನು ಅವುಗಳು ಕಡಿಮೆ ಮಾಡಬಹುದು.
ಇನ್ನು ಟೆರ್ರಾಕೋಟ ಒಡವೆಗಳ ಕ್ರೇಜ್ ಹೇಗಿದೆ ಎಂದರೆ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ಇದನ್ನು ಇಷ್ಟಪಡುತ್ತಾರೆ.
ಇದನ್ನು ಓದಿ: ಹುಡುಗಿ ಮನೆಯವರು ಒಪ್ಪಿದ್ರೆ ಮದುವೆ ಆಗ್ತಿನಿ: ಆ್ಯಸಿಡ್ ನಾಗ
ಟೆರ್ರಾಕೋಟ ಒಡವೆ ಧರಿಸಿದಾಗ ಇದರೊಂದಿಗೆ ಬಂಗಾರವನ್ನೋ ಅಥವಾ ಬೇರೆ ಆಭರಣಗಳನ್ನೋ ಬಳಸದಿದ್ದರೆ ಉತ್ತಮ. ಹೀಗೆ ಬಳಕೆ ಮಾಡುವುದು ಟೆರ್ರಾಕೋಟದ ಅಂದವನ್ನು ಕಡಿಮೆ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.