Mangal Rashi Parivartan 2022: ಮೇ 17 ರಂದು ಮೀನ ರಾಶಿಗೆ ಮಂಗಳನ ಪ್ರವೇಶ, ಯಾವ ರಾಶಿಗೆ ಏನು ಲಾಭ-ನಷ್ಟ?

Mangal Godhar 2022: ಜೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಮಂಗಳನನ್ನು ಎಲ್ಲಾ ಗ್ರಹಗಳ ಸೇನಾಪತಿ ಎಂದು ಭಾವಿಸಲಾಗುತ್ತದೆ. ಮಂಗಳನಿಗೆ ಶಕ್ತಿ, ಭ್ರಾತೃ, ಸಾಹಸ, ಪರಾಕ್ರಮ, ಶೌರ್ಯಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ.  

Written by - Nitin Tabib | Last Updated : May 13, 2022, 11:53 AM IST
  • ಮೇ 17ರಂದು ಮಂಗಳನ ರಾಶಿ ಪರಿವರ್ತನೆ
  • ಮಂಗಳ ಮೇಷ ಹಾಗೂ ವೃಶ್ಚಿಕ ರಾಶಿಗೆ ಅಧಿಪತಿ
  • ಮಂಗಳನ ಈ ಸ್ಥಾನ ಪಲ್ಲಟ ಯಾರಿಗೆ ಲಾಭ ಯಾರಿಗೆ ನಷ್ಟ ತರಲಿದೆ?
Mangal Rashi Parivartan 2022: ಮೇ 17 ರಂದು ಮೀನ ರಾಶಿಗೆ ಮಂಗಳನ ಪ್ರವೇಶ, ಯಾವ ರಾಶಿಗೆ ಏನು ಲಾಭ-ನಷ್ಟ? title=
Mars Transit 2022

Mars Transit 2022: ಜೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಮಂಗಳನನ್ನು ಎಲ್ಲಾ ಗ್ರಹಗಳ ಸೇನಾಪತಿ ಎಂದು ಭಾವಿಸಲಾಗುತ್ತದೆ. ಮಂಗಳನಿಗೆ ಶಕ್ತಿ, ಭ್ರಾತೃ, ಸಾಹಸ, ಪರಾಕ್ರಮ, ಶೌರ್ಯಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಮಂಗಳ ಗ್ರಹವನ್ನು ಮೇಷ ಹಾಗೂ ವೃಶ್ಚಿಕ ರಾಶಿಗಳ ಅಧಿಪತ್ಯ ಪ್ರಾಪ್ತಿಯಾಗಿದೆ. ಮಂಗಳ ಮಕರ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿದ್ದರೆ, ಕರ್ಕ ರಾಶಿಯಲ್ಲಿ ನೀಚ ಸ್ಥಾನದಲ್ಲಿರುತ್ತಾನೆ. ಮೇ 17 ರಂದು ಮಂಗಳನ ಮೀನ ರಾಶಿ ಗೋಚರ ಸಂಭವಿಸಲಿದೆ. ಮಂಗಳನ ಈ ರಾಶಿ ಪರಿವರ್ತನೆ ಕೆಲ ಜಾತಕದವರ ಪಾಲಿಗೆ ಶುಭ ಫಲಗಳನ್ನು ನೀಡಿದರೆ, ಉಳಿದ ಕೆಲ ರಾಶಿಗಳ ಪಾಲಿಗೆ ಅಶುಭ ಫಲಗಳನ್ನು ನೀಡಲಿದೆ. ಹಾಗಾದರೆ ಬನ್ನಿ ಮಂಗಳನ ಈ ರಾಶಿ ಪರಿವರ್ತನೆ ಎಲ್ಲಾ ರಾಶಿಗಳ ಪಾಲಿಗೆ ಹೇಗಿರಲಿದೆ ತಿಳಿದುಕೊಳ್ಳೋಣ, 

ಮೇಷ - ಮನಸ್ಸು ಚಂಚಲವಾಗಿರಬಹುದು. ಸಮಚಿತ್ತದಿಂದಿರಿ ಕೌಟುಂಬಿಕ ಸಮಸ್ಯೆಗಳತ್ತ ಗಮನ ಹರಿಸಿ. ತಂದೆಯ ಬೆಂಬಲ ಸಿಗಲಿದೆ. ಆಸ್ತಿಯಿಂದ ಆದಾಯ ಪ್ರಾಪ್ತಿಯ ಸಂಕೇತಗಳಿವೆ.

ವೃಷಭ - ಮಾತಿನಲ್ಲಿ ಮಧುರತೆ ಇರಲಿದೆ. ಮನಸ್ಸು ಚಂಚಲವಾಗಿರುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಿ. ಪ್ರಗತಿಯ ಅವಕಾಶಗಳು ಗೋಚರಿಸುತ್ತಿವೆ.

ಮಿಥುನ - ಆತ್ಮವಿಶ್ವಾಸದಿಂದ ತುಂಬಿರಲಿದೆ, ಆದರೆ ತಾಳ್ಮೆ ವಹಿಸುವ ಅವಶ್ಯಕತೆ ಇದೆ. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಗೌರವ ಪ್ರಾಪ್ತಿಯ ಸಂಕೇತಗಳಿವೆ.

ಕರ್ಕ - ಮನಸ್ಸು ಸಂತೋಷದಿಂದ ತುಂಬಿರಲಿದೆ. ಬರವಣಿಗೆ ಮತ್ತು ಬೌದ್ಧಿಕ ಕೆಲಸದಲ್ಲಿ ಯಶಸ್ಸು ಹೆಚ್ಚಾಗಲಿದೆ. ಉಡುಗೊರೆಯ ರೂಪದಲ್ಲಿ ಉಡುಪುಗಳು ಸಿಬಬಹುದು. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ.

ಸಿಂಹ - ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರಲಿದೆ. ದಾಂಪತ್ಯ ಜೀವನದಲ್ಲಿ ಸುಖ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಕನ್ಯಾ - ಸಂಭಾಷಣೆ ಮಿತವಾಗಿರಲಿ. ವ್ಯಾಪಾರದಲ್ಲಿ ಸುಧಾರಣೆ ಇರಲಿದೆ. ವ್ಯಾಪಾರಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ಜೀವನ ಅಸ್ತವ್ಯಸ್ತವಾಗಲಿದೆ.

ತುಲಾ - ಆತ್ಮವಿಶ್ವಾಸದ ಕೊರತೆ ಕಾಡಲಿದೆ. ಮನಸ್ಸಿಗೆ ತೊಂದರೆಯಾಗಬಹುದು. ಕೆಲಸದ ಸ್ಥಳದಲ್ಲಿ ತೊಂದರೆಗಳಿರಬಹುದು. ಹೆಚ್ಚು ಓಡಾಟ ಸಂಭವಿಸಬಹುದು.

ವೃಶ್ಚಿಕ – ಮನಸ್ಸು ಚಂಚಲವಾಗಿರುತ್ತದೆ. ಮನಸ್ಸಿನ ಶಾಂತಿಗಾಗಿ ಶ್ರಮಿಸಿ. ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಸ್ಥಳಕ್ಕೆ ಹೋಗಲು ಯತ್ನಿಸಿ.

ಧನು - ಮನಸ್ಸು ತೊಂದರೆಗಳನ್ನು ಅನುಭವಿಸಲಿದೆ. ಸಮಚಿತ್ತದಿಂದಿರಿ. ಆರೋಗ್ಯದ ಬಗ್ಗೆ ಗಮನ ಹರಿಸಿ. ಕೌಟುಂಬಿಕ ಶಾಂತಿ ಕಾಪಾಡಿ. ನಿರರ್ಥಕ ಓಡಾಟ ಇರುವ ಸಾಧ್ಯತೆ ಇದೆ.

ಮಕರ - ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಇರಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಯಶಸ್ಸನ್ನು ಪಡೆಯುವಿರಿ. ವಿದೇಶ ಪ್ರವಾಸಕ್ಕೆ ಅವಕಾಶ ಸಿಗಲಿದೆ. ಗೌರವ ಹೆಚ್ಚಾಗಲಿದೆ.

ಇದನ್ನೂ ಓದಿ-Chandra Grahan 2022: ವರ್ಷದ ಮೊದಲ ಚಂದ್ರಗ್ರಹಣ ಈ ರಾಶಿಯ ಜನರ ವೃತ್ತಿಜೀವನದಲ್ಲಿ ಬಡ್ತಿ ನೀಡಲಿದೆ

ಕುಂಭ - ಮನಸ್ಸು ಸಂತೋಷದಿಂದ ಕೂಡಿರಲಿದೆ. ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ಗೋಚರಿಸುತ್ತಿವೆ, ಆದರೆ ಕಾರ್ಯಕ್ಷೇತ್ರದಲ್ಲಿ ಬದಲಾವಣೆಯೂ ಆಗುವ ಸಾಧ್ಯತೆಗಳಿವೆ. ಬೌದ್ಧಿಕ ಕೆಲಸದಲ್ಲಿ ಘನತೆ ಮತ್ತು ಗೌರವವನ್ನು ಸಾಧಿಸುವಿರಿ.

ಇದನ್ನೂ ಓದಿ-ಈ ನಾಲ್ಕು ರಾಶಿಯವರ ಮೇಲೆ ಸದಾ ಇರುತ್ತದೆ ಆಂಜನೇಯನ ಕೃಪೆ

ಮೀನ - ಮನಸ್ಸು ಸಂತೋಷದಿಂದ ಕೂಡಿರಲಿದೆ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗಬಹುದು. ಯಾವುದೇ ಒಂದು ಕಾರಣದಿಂದ ನಿಂತು ಹೋದ ಹಣ ನಿಮ್ಮ ಕೈಸೇರುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚು ಶ್ರಮವಿರಲಿದೆ. ಪ್ರಯಾಣಕ್ಕೆ ಹಣ ಖರ್ಚಾಗಲಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News