ಪಿಂಚಣಿದಾರರಿಗೆ ಸಿಹಿ ಸುದ್ದಿ : ಎನ್‌ಪಿಎಸ್ ಅಡಿಯಲ್ಲಿ 'ಗ್ಯಾರೆಂಟಿಡ್ ರಿಟರ್ನ್' ಲಭ್ಯ

NPS Assured Return Scheme: PFRDA ಕಾಯಿದೆಯಡಿಯಲ್ಲಿ ಮಿನಿಮಮ್ ಅಷ್ಯುರ್ಡ್  ರಿಟರ್ನ್ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಪಿಂಚಣಿ ನಿಧಿ ಯೋಜನೆಗಳ ಅಡಿಯಲ್ಲಿ ನಿರ್ವಹಿಸಲ್ಪಡುವ ಹಣವನ್ನು Marked-to-Market ಎಂದು ಗುರುತಿಸಲಾಗುವುದು. 

Written by - Ranjitha R K | Last Updated : May 12, 2022, 01:26 PM IST
  • PFRDA ಕಾಯಿದೆಯಡಿಯಲ್ಲಿ ಮಿನಿಮಮ್ ಅಷ್ಯುರ್ಡ್ ರಿಟರ್ನ್ ಯೋಜನೆಗೆ ಒಪ್ಪಿಗೆ
  • ಸಲಹೆಗಾರರನ್ನು ನೇಮಿಸಲಿದೆ PFRDA
  • NPS ಅಂದರೆ ಏನು ತಿಳಿಯಿರಿ
ಪಿಂಚಣಿದಾರರಿಗೆ ಸಿಹಿ ಸುದ್ದಿ :  ಎನ್‌ಪಿಎಸ್ ಅಡಿಯಲ್ಲಿ 'ಗ್ಯಾರೆಂಟಿಡ್ ರಿಟರ್ನ್' ಲಭ್ಯ title=
NPS Assured Return Scheme (file photo)

ಬೆಂಗಳೂರು : NPS Assured Return Scheme: ಪಿಂಚಣಿ ನಿಯಂತ್ರಕ PFRDA ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಮಿನಿಮಮ್ ಅಷ್ಯುರ್ಡ್  ರಿಟರ್ನ್ ಸ್ಕೀಮ್ ಅನ್ನು ಜಾರಿಗೆ  ತರಲಿದೆ.  ಇದು ದೇಶದ ಲಕ್ಷಾಂತರ ಪಿಂಚಣಿದಾರರ ಪಾಲಿಗೆ ಖುಷಿಯ ಸುದ್ದಿ. 

ಸಲಹೆಗಾರರನ್ನು ನೇಮಿಸಲಿದೆ  PFRDA :
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಈ ಯೋಜನೆಯನ್ನು ವಿನ್ಯಾಸಗೊಳಿಸಲು ಸಲಹೆಗಾರರಿಗೆ ರಿಕ್ವೆಸ್ಟ್ ಫಾರ್ ಪ್ರೊಪೋಸಲ್  ಜಾರಿ ಮಾಡಿದೆ. ಇದಕ್ಕೂ ಮೊದಲು, ಪಿಎಫ್‌ಆರ್‌ಡಿಎ ಅಧ್ಯಕ್ಷ ಸುಪ್ರತಿಮ್ ದಾಸ್ ಬಂದೋಪಾಧ್ಯಾಯ ಅವರು 'ಈ ನಿಟ್ಟಿನಲ್ಲಿ ಪಿಂಚಣಿ ನಿಧಿಗಳು ಮತ್ತು ವಿಮಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆ' ಎಂದು ಹೇಳಿದ್ದರು.

ಇದನ್ನೂ ಓದಿ : TATA Nexon EV Max: ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಪರಿಚಯಿಸಿದ ಟಾಟಾ ಮೋಟರ್ಸ್

PFRDA ಕಾಯಿದೆಯಡಿಯಲ್ಲಿ ಮಿನಿಮಮ್ ಅಷ್ಯುರ್ಡ್  ರಿಟರ್ನ್ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಪಿಂಚಣಿ ನಿಧಿ ಯೋಜನೆಗಳ ಅಡಿಯಲ್ಲಿ ನಿರ್ವಹಿಸಲ್ಪಡುವ ಹಣವನ್ನು Marked-to-Market  ಎದ್ನು ಗುರುತಿಸಲಾಗುವುದು. ಇದರಲ್ಲಿ ಸ್ವಲ್ಪ ಮಟ್ಟಿನ ಏರಿಳಿತಗಳು ಆಗುತ್ತಿರುತ್ತವೆ. ಅವುಗಳ ಮೌಲ್ಯಮಾಪನವು ಮಾರುಕಟ್ಟೆ ಸ್ಥಿತಿಯನ್ನು ಆಧರಿಸಿರುತ್ತದೆ. 

ಸಲಹೆಗಾರ ಏನು ಮಾಡುತ್ತಾನೆ?
PFRDA ಯ RFP ಕರಡು ಪ್ರಕಾರ, ಸಲಹೆಗಾರರ ​​ನೇಮಕಾತಿಯು NPS ಅಡಿಯಲ್ಲಿ ಖಾತರಿಯ ಆದಾಯದೊಂದಿಗೆ ಯೋಜನೆಯನ್ನು ರೂಪಿಸಲು PFRDA ಮತ್ತು ಸೇವಾ ಪೂರೈಕೆದಾರರ ನಡುವೆ ಪ್ರಿನ್ಸಿಪಲ್ ಏಜೆಂಟ್ ಸಂಬಂಧವನ್ನು ಸೃಷ್ಟಿಸಬಾರದು. ಪಿಎಫ್‌ಆರ್‌ಡಿಎ ಕಾಯಿದೆಯ ಸೂಚನೆಗಳ ಪ್ರಕಾರ, ಎನ್‌ಪಿಎಸ್ ಅಡಿಯಲ್ಲಿ, ಚಂದಾದಾರರು 'ಮಿನಿಮಮ್ ಅಷ್ಯುರ್ಡ್  ರಿಟರ್ನ್  ನೀಡುವ ಯೋಜನೆಯನ್ನು ಆರಿಸಿಕೊಳ್ಳುತ್ತಾರೆ.  ಅಂತಹ ಯೋಜನೆಯನ್ನು ನಿಯಂತ್ರಕದಲ್ಲಿ ನೋಂದಾಯಿಸಲಾದ ಪಿಂಚಣಿ ನಿಧಿಯಿಂದ ನೀಡಬೇಕಾಗುತ್ತದೆ. ಈ ರೀತಿಯಾಗಿ ಸಲಹೆಗಾರರು ಪಿಂಚಣಿ ನಿಧಿಯಿಂದ ಅಸ್ತಿತ್ವದಲ್ಲಿರುವ ಮತ್ತು ಸಂಭಾವ್ಯ ಚಂದಾದಾರರಿಗೆ 'ಮಿನಿಮಮ್ ಅಷ್ಯುರ್ಡ್  ರಿಟರ್ನ್ ಯೋಜನೆಯನ್ನು ಸಿದ್ಧಪಡಿಸಲು ಕೆಲಸ ಮಾಡುತ್ತಾರೆ.

ಇದನ್ನೂ ಓದಿ : Earn Money: ಮ್ಯೂಚವಲ್ ಫಂಡ್ ಹೂಡಿಕೆಯ ಈ ರಾಮಬಾಣ ಉಪಾಯ ನಿಮಗೂ ತಿಳಿದಿರಲಿ

NPS ಎಂದರೇನು ? 
ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ  ಜನವರಿ 1 2004 ರಂದು ಕಡ್ಡಾಯವಾಗಿ NPS ಅನ್ನು ಜಾರಿಗೊಳಿಸಿದೆ. ಇದಾದ ನಂತರ ಎಲ್ಲಾ ರಾಜ್ಯಗಳು ತಮ್ಮ ಉದ್ಯೋಗಿಗಳಿಗೆ ಎನ್‌ಪಿಎಸ್ ಅನ್ನು ಅಳವಡಿಸಿಕೊಂಡಿವೆ. 2009 ರ ನಂತರ, ಈ ಯೋಜನೆಯನ್ನು ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೂ ಆರಂಭಿಸಲಾಯಿತು. ನಿವೃತ್ತಿಯ ನಂತರ, ಉದ್ಯೋಗಿಗಳು NPS ನ ಭಾಗವನ್ನು ಹಿಂಪಡೆಯಬಹುದು. ಉಳಿದವರು ನಿಯಮಿತ ಆದಾಯಕ್ಕಾಗಿ ವರ್ಷಾಶನವನ್ನು ತೆಗೆದುಕೊಳ್ಳಬಹುದು. 18 ರಿಂದ 60 ವರ್ಷದೊಳಗಿನ ಯಾವುದೇ ವ್ಯಕ್ತಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತೆಗೆದುಕೊಳ್ಳಬಹುದು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News