ಈ ಹಳ್ಳಿಯ ಜನರು ಮಲಗಿದರೆ ತಿಂಗಳಾನುಗಟ್ಟಲೆ ಏಳುವುದೇ ಇಲ್ಲವಂತೆ.! ಕಾರಣ ?

ಈ ವಿಚಿತ್ರ ಗ್ರಾಮದ ಹೆಸರು ಕಲಾಚಿ. ಈ ಗ್ರಾಮವು ಕಝಾಕಿಸ್ತಾನದಲ್ಲಿದೆ. ಈ ಗ್ರಾಮದ ಜನರು ನಿದ್ದೆ ಮಾಡಿದರೆ ಹಲವು ತಿಂಗಳುಗಳವರೆಗೆ ಏಳುವುದೇ ಇಲ್ಲವಂತೆ. ಈ ಕಾರಣಕ್ಕಾಗಿ ಈ ಗ್ರಾಮವನ್ನು ಸ್ಲೀಪಿ ಹಾಲೋ ವಿಲೇಜ್ ಎಂದೂ ಕರೆಯುತ್ತಾರೆ. 

Written by - Ranjitha R K | Last Updated : May 9, 2022, 03:24 PM IST
  • ಜಗತ್ತಿನಲ್ಲಿ ಅನೇಕ ವಿಚಿತ್ರ ಸ್ಥಳಗಳಿವೆ.
  • ಈ ಹಳ್ಳಿಯಲ್ಲಿ ಜನರು ಯಾವಾಗ ಬೇಕಾದರೂ ನಿದ್ದೆಗೆ ಜಾರುತ್ತಾರಂತೆ.
  • ಒಮ್ಮೆ ನಿದ್ದೆಗೆ ಶರಣಾದರೆಂದರೆ ಮತ್ತೆ ತಿಂಗಳಾನುಗಟ್ಟಲೆ ಏಳುವುದೇ ಇಲ್ಲವಂತೆ.
 ಈ ಹಳ್ಳಿಯ ಜನರು ಮಲಗಿದರೆ ತಿಂಗಳಾನುಗಟ್ಟಲೆ ಏಳುವುದೇ ಇಲ್ಲವಂತೆ.! ಕಾರಣ ? title=
kalachi village mystery (file photo)

ನವದೆಹಲಿ : ಜಗತ್ತಿನಲ್ಲಿ ಅನೇಕ ವಿಚಿತ್ರ ಸ್ಥಳಗಳಿವೆ. ಆ ಸ್ಥಳಗಳ ಬಗ್ಗೆ ಕೇಳುವಾಗ ಆಶ್ಚರ್ಯವಾಗುತ್ತದೆ.   ಹೌದು ನಾವು ಇಲ್ಲಿ ಹೇಳಲು ಹೊರಟಿರುವುದು ಕೂಡಾ ಅಂಥದ್ದೇ ಒಂದು ಹಳ್ಳಿಯ ಬಗ್ಗೆ. ಈ ಹಳ್ಳಿಯಲ್ಲಿ ಜನರು ಯಾವಾಗ ಬೇಕಾದರೂ ನಿದ್ದೆಗೆ ಜಾರುತ್ತಾರಂತೆ. ಹೀಗೆ ಒಮ್ಮೆ ನಿದ್ದೆಗೆ ಶರಣಾದರೆಂದರೆ ಮತ್ತೆ ತಿಂಗಳಾನುಗಟ್ಟಲೆ ಏಳುವುದೇ ಇಲ್ಲವಂತೆ. ಈ ಮಾತು ಕೇಳಲು ವಿಚಿತ್ರ ಎನಿಸಬಹುದು ಆದರೆ ಇದು ಸಂಪೂರ್ಣ ಸತ್ಯ. 

ಇಲ್ಲಿನ ಜನರು ಹಲವು ತಿಂಗಳುಗಳ ಕಾಲ ಮಲಗುತ್ತಾರೆ : 
ಈ ವಿಚಿತ್ರ ಗ್ರಾಮದ ಹೆಸರು ಕಲಾಚಿ. ಈ ಗ್ರಾಮವು ಕಝಾಕಿಸ್ತಾನದಲ್ಲಿದೆ. ಈ ಗ್ರಾಮದ ಜನರು ನಿದ್ದೆ ಮಾಡಿದರೆ ಹಲವು ತಿಂಗಳುಗಳವರೆಗೆ ಏಳುವುದೇ ಇಲ್ಲವಂತೆ. ಈ ಕಾರಣಕ್ಕಾಗಿ ಈ ಗ್ರಾಮವನ್ನು ಸ್ಲೀಪಿ ಹಾಲೋ ವಿಲೇಜ್ ಎಂದೂ ಕರೆಯುತ್ತಾರೆ. ಇಲ್ಲಿನ ಜನರು ಹೆಚ್ಚಾಗಿ ಮಲಗಿಯೇ ಇರುತ್ತಾರಂತೆ.  ಹೀಗೆ ಇಲ್ಲಿನ ಜನ ನಿದ್ದೆ ಹೋಗುವುದಕ್ಕೆ ಏನು ಕಾರಣ ಎಂಬುದರ ಬಗ್ಗೆ ಸಾಕಷ್ಟು ಅಧ್ಯಯನಗಳು ಕೂಡಾ ನಡೆದಿವೆ.  

ಇದನ್ನೂ ಓದಿ : Leopard: ಪೊಲೀಸ್ ಠಾಣೆ ಹಿಂದೆ ಓಡಾಡಿದ ಚಿರತೆ, ಸ್ಥಳೀಯರಲ್ಲಿ ಆತಂಕ!

 2010 ರಲ್ಲಿ ಪತ್ತೆಯಾದ ಪ್ರಕರಣ : 
 ಇದ್ದಕ್ಕಿದ್ದಂತೆಯೇ ಮಲಗುವ ಮೊದಲ ಪ್ರಕರಣ ಇಲ್ಲಿ  2010ರಲ್ಲಿ ಬೆಳಕಿಗೆ ಬಂದಿತ್ತು. ಕೆಲವು ಮಕ್ಕಳು ಇದ್ದಕ್ಕಿದ್ದಂತೆ ಶಾಲೆಯೊಂದರಲ್ಲಿ ಬಿದ್ದು ಮಲಗಲು ಪ್ರಾರಂಭಿಸಿದರು. ಕ್ರಮೇಣ ಇದು ಇಡೀ ಗ್ರಾಮದಲ್ಲಿ ರೋಗದಂತೆ ಹರಡಿತು. ಅಂದಿನಿಂದ, ಅನೇಕ ವಿಜ್ಞಾನಿಗಳು  ಈ ಬಗ್ಗೆ  ಸಂಶೋಧನೆ ಮಾಡಲು ಪ್ರಾರಂಭಿಸಿದರು. ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ವಿಜ್ಞಾನಿಗಳು ಈ ರಹಸ್ಯವನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗಲಿಲ್ಲ. 

ವಿಜ್ಞಾನಿಗಳು ನೀಡಿದ ಕಾರಣ : 
ಕಳಂಚಿ ಗ್ರಾಮದಲ್ಲಿ  ಯುರೇನಿಯಂ ವಿಷಕಾರಿ ಅನಿಲ ಹೊರಬರುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಇಲ್ಲಿನ ಜನರು ವಿಶಿಷ್ಟವಾದ ನಿದ್ರಾಹೀನತೆಯನ್ನು ಹೊಂದಿದ್ದಾರೆ. ವಿಷಾನಿಲದಿಂದ ಇಲ್ಲಿನ ನೀರು ಕೂಡ ಕಲುಷಿತಗೊಂಡಿದೆ. ಇಲ್ಲಿನ ನೀರಿನಲ್ಲಿ ಕಾರ್ಬನ್ ಮಾನಾಕ್ಸೈಡ್ ಅನಿಲವಿದೆ ಎಂದು ಕೂಡಾ ವಿಜ್ಞಾನಿಗಳು ಹೇಳುತ್ತಾರೆ. ಈ ಕಾರಣದಿಂದಲೇ  ಇಲ್ಲಿನ ಜನರು ತಿಂಗಳುಗಟ್ಟಲೆ ಮಲಗುತ್ತಾರೆ ಎನ್ನಲಾಗಿದೆ. 

ಇದನ್ನೂ ಓದಿ : Viarl video : ಮದುವೆ ನಡೆಯುತ್ತಿದ್ದಂತೆಯೇ ಹಾರ ಎಸೆದು ಮಂಟಪದಿಂದ ಕೆಳಗಿಳಿದ ವಧು ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News