ಪ್ರೀತಿಗೆ ಅಡ್ಡಬಂದ ಜಾತಿ; ಮನನೊಂದ ಯುವಕ ಆತ್ಮಹತ್ಯೆಗೆ ಶರಣು

ಫೇಸ್ ಬುಕ್ ನಲ್ಲಿ ವೀಡಿಯೊ ಹೇಳಿಕೆ ದಾಖಲಿಸಿ ಯುವಕ ರಾಘವೇಂದ್ರ ಆತ್ಮಹತ್ಯೆ.

Last Updated : Jul 3, 2018, 01:34 PM IST
ಪ್ರೀತಿಗೆ ಅಡ್ಡಬಂದ ಜಾತಿ; ಮನನೊಂದ ಯುವಕ ಆತ್ಮಹತ್ಯೆಗೆ ಶರಣು title=

ತುಮಕೂರು: ಪ್ರೀತಿಗೆ ಜಾತಿ ಅಡ್ಡಬಂದ ಹಿನ್ನೆಲೆಯಲ್ಲಿ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪ್ರೀತಿಸಿದ ಯುವತಿ ಸಿಗದಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಗರದ ಕ್ಯಾತಸಂದ್ರದಲ್ಲಿ ಮನೆಯಲ್ಲಿ ರಾಘವೇಂದ್ರ (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಫೇಸ್​ಬುಕ್​​ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೂಚನೆ ಕೊಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

“ಜಾತಿ ಜಾತಿ ಎಂದು ಯಾಕೆ ಸಾಯ್ತೀರಾ”. ಸತ್ತ ಮೇಲೆ ಜಾತಿ ಹೊತ್ತ್ಕೊಂಡ್ ಹೋಗ್ತೀರಾ? ನಾನಿನ್ನು ನಿನ್ನ ಮಗಳ ತಂಟೆಗೆ ಬರಲ್ಲ. ಅವಳು ಚೆನ್ನಾಗಿರಲಿ ಎಂದು ‌ಹೇಳಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ ಸಾವಿಗೆ ಶರಣಾಗಿದ್ದಾನೆ. 

ಡಿಪ್ಲೊಮೋ ಓದುತ್ತಿದ್ದ ರಾಘವೇಂದ್ರ ತುರುವೇಕೆರೆ ಮೂಲದ ಯುವತಿಯನ್ನು ಪ್ರೀತಿಸುತಿದ್ದ. ಇಬ್ಬರ ಜಾತಿಯು ಬೇರೆ ಬೇರೆಯಾಗಿದ್ದರಿಂದ ಪೋಷಕರು ಈ ಪ್ರೀತಿಯನ್ನು ವಿರೋಧಿಸಿದ್ದರು. ಇದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ ಆತ್ಮಹತ್ಯೆಗೂ ಮೊದಲು ಫೇಸ್ ಬುಕ್ ನಲ್ಲಿ ವೀಡಿಯೊ ಹೇಳಿಕೆ ಹಾಕಿದ್ದರು. ಜೊತೆಗೆ ಯುವತಿ ಜತೆ ವ್ಯಾಟ್ಸ್ ಆಪ್ ನಲ್ಲಿ ಚಾಟ್ ಮಾಡಿರುವ ದಾಖಲೆ ಕೂಡ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Trending News